More

    ಲಿಯಾಮ್​ ಬ್ಯಾಟ್​ನಿಂದ ಸಿಡಿಯಿತು ಬಿಗ್​ ಸಿಕ್ಸರ್​: ಕ್ರಿಕೆಟ್​ ಕ್ರೀಡಾಂಗಣದಿಂದ ರಗ್ಬಿ ಮೈದಾನದಲ್ಲಿ ಲ್ಯಾಂಡ್​ ಆದ ಚೆಂಡು!

    ಲಂಡನ್​: ಭಾನುವಾರ ನಡೆದ ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ಪಾಕಿಸ್ತಾನ ನಡುವಿನ 2ನೇ ಟಿ20 ಪಂದ್ಯದಲ್ಲಿ ಆಂಗ್ಲ ಆಟಗಾರ ಲಿಯಾಮ್​ ಲಿವಿಂಗ್​ಸ್ಟೋನ್​ ಬಾರಿಸಿದ ಸಿಕ್ಸರ್​ ಕ್ರೀಡಾಭಿಮಾನಿಗಳ ಹುಬ್ಬೇರಿಸಿದೆ. ಬರೋಬ್ಬರಿ 122 ಮೀಟರ್​ ದೂರದ ಸಿಕ್ಸರ್ ಸಿಡಿಸಿದ್ದು, ಕ್ರಿಕೆಟ್​ ಇತಿಹಾಸದ ಅತಿದೊಡ್ಡ ಸಿಕ್ಸರ್​ಗಳಲ್ಲಿ ಒಂದು ಎನ್ನಲಾಗಿದೆ.

    ಲಿಯಾಮ್​ ಬ್ಯಾಟ್​ನಿಂದ ಸಿಡಿದ ಚೆಂಡು ಹೆಡಿಂಗ್ಲಿ ಕ್ರಿಕೆಟ್​ ಕ್ರೀಡಾಂಗಣದಿಂದ ಹಾರಿ ನೇರವಾಗಿ ಪಕ್ಕದ ರಗ್ಬಿ ಮೈದಾನದಲ್ಲಿ ಲ್ಯಾಂಡ್​ ಆಯಿತು. ಅಂದಹಾಗೆ ಲಿಯಾಮ್​ ಬಾರಿಸಿದ 122 ಮೀಟರ್​ ಸಿಕ್ಸರ್​ ಅತಿದೊಡ್ಡ ಸಿಕ್ಸರ್​ ಅಲ್ಲ. ಬದಲಾಗಿ ಮಾರ್ಟಿನ್​ ಗುಪ್ಟಿಲ್​ 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಬಾರಿಸಿದ ಸಿಕ್ಸರ್​ ಈಡೆನ್​ಗಾರ್ಡನ್​ ಕ್ರೀಡಾಂಗಣದಿಂದ ಆಚೆಯಿರುವ ಕಾರ್​ ಪಾರ್ಕಿಂಗ್​ನಲ್ಲಿ ಬಿದ್ದಿತು. 127 ಮೀಟರ್​ ಉದ್ದದ ಸಿಕ್ಸರ್​ ಅದಾಗಿತ್ತು.

    ಲಿಯಾಮ್​ ಸಿಕ್ಸರ್​ ವಿಶೇಷತೆ ಏನೆಂದರೆ, ಕಳೆದ ವಾರವಷ್ಟೇ 27 ವರ್ಷದ ಲಿಯಾಮ್​ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಪಾಕ್​ ವಿರುದ್ಧ ಕಳೆದ ಶುಕ್ರವಾರ ನಡೆದ ಮೊದಲ ಟ್ವಿ20 ಪಂದ್ಯದಲ್ಲೇ ಲಿಯಾಮ್​ ಅಬ್ಬರಿಸಿದರು. ಕೇವಲ 43 ಎಸೆತಗಳಲ್ಲಿ 103 ರನ್​ ಗಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

    ಎರಡನೇ ಟಿ20 ಪಂದ್ಯದಲ್ಲೂ ಅಬ್ಬರಿಸಿದ ಲಿಯಾಮ್​ 122 ಮೀಟರ್​​ ಬಿಗ್ಗೆಸ್ಟ್​ ಸಿಕ್ಸರ್​ನೊಂದಿಗೆ 36 ರನ್​ ಗಳಿಸಿದರು. ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ ತಂಡ 201 ರನ್​ ಗುರಿ ನೀಡಿತು. ಬೆನ್ನತ್ತಿದ ಪಾಕ್​, ಪ ವಿಕೆಟ್​ ನಷ್ಟಕ್ಕೆ 155 ರನ್​ ಗಳಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

    ಖುಷ್ಬೂ ಟ್ವಿಟರ್ ಖಾತೆ​ ಮತ್ತೆ ಹ್ಯಾಕ್​: ಟ್ವೀಟ್ಸ್​, ಪೋಸ್ಟ್​ಗಳೆಲ್ಲ ಡಿಲೀಟ್​; ಪ್ರೊಫೈಲ್, ಕವರ್​ ಫೋಟೋ ಕೂಡ ಚೇಂಜ್​!

    ಮಾಂಸಪ್ರಿಯರಿಗೆ ಆಘಾತ! ದಿನದಿಂದ ದಿನಕ್ಕೆ ಗಗನಮುಖಿಯಾಗ್ತಿದೆ ಚಿಕನ್, ಇಂದಿನ ಬೆಲೆ ಕೇಳಿದ್ರೆ ಸುಸ್ತಾಗ್ತೀರಾ ​​

    ವಿರೋಧಿಗಳಿಗೆ ಸಿಎಂ ಟಕ್ಕರ್! ಬಿಎಸ್​ವೈಗೆ ಹೈಕಮಾಂಡ್ ಕೊಟ್ಟ ಆ ಎರಡು ಟಾಸ್ಕ್​ ಯಾವುವು?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts