More

    ತ್ಯಾಜ್ಯ ಎಸೆದವರು ಗುರುತುಚೀಟಿ ಬಿಟ್ಟು ಸಿಕ್ಕಿಬಿದ್ದರು !

    ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಬದಿ ಎಲ್ಲಿಂದಲೋ ಬಂದು ಬೀಳುವ ತ್ಯಾಜ್ಯ ದೊಡ್ಡ ಸಮಸ್ಯೆಯಾಗಿದ್ದು, ಐಷಾರಾಮಿ ವಾಹನದಲ್ಲಿ ಬಂದು ತ್ಯಾಜ್ಯ ಬಿಸಾಕಿ ಹೋಗುವವರ ಪತ್ತೆಯೇ ಸ್ಥಳೀಯಾಡಳಿತಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಕಸದಲ್ಲಿದ್ದ ಬಿಲ್ ಮೂಲಕ ಅದನ್ನು ಎಸೆದವರ ಪತ್ತೆ ಹಚ್ಚಿ ದಂಡ ವಿಧಿಸಿದೆ.
    ಎಸೆದ ಕಸ ಪರಿಶೀಲಿಸಿ ತ್ಯಾಜ್ಯ ಚೀಲಗಳಲ್ಲಿ ಸಿಕ್ಕ ಅಂಗಡಿ ಬಿಲ್ಲುಗಳ ರಶೀದಿ ಗಮನಿಸಿ ಸೂಕ್ತ ದಾಖಲೆಗಳೊಂದಿಗೆ ಸ್ಥಳೀಯಾಡಳಿತ 2 ಸಾವಿರ ರೂ. ದಂಡ ವಿಧಿಸಿ, ತ್ಯಾಜ್ಯ ಎಸೆದವರ ವಿಳಾಸವನ್ನು ಪತ್ತೆ ಹಚ್ಚಿದ ಸಿಬ್ಬಂದಿಗೆ ಅವರಿಂದಲೇ ಬಹುಮಾನವಾಗಿ 1 ಸಾವಿರ ರೂ. ತೆಕ್ಕಟ್ಟೆ ಗ್ರಾಪಂ ವಸೂಲಿ ಮಾಡಿದೆ!

    ತೆಕ್ಕಟ್ಟೆ ಗ್ರಾಪಂ ಮಲ್ಯಾಡಿ ರಸ್ತೆಯಲ್ಲಿ ಪದೇಪದೆ ಚೀಲಗಳಲ್ಲಿ ತ್ಯಾಜ್ಯ ತಂದು ಬಿಸಾಕಿ ಕಸದ ತೊಟ್ಟಿ ಮಾಡಿದ್ದರು. ಇದು ಸ್ಥಳೀಯಾಡಳಿತಕ್ಕೆ ಭಾರಿ ತಲೆ ನೋವು ತಂದಿತ್ತು. ಸ್ಥಳೀಯಾಡಳಿತ ಎಸ್‌ಎಲ್‌ಆರ್‌ಎಮ್ ಯೋಜನೆ ಮೂಲಕ ಈಗಾಗಲೇ ತ್ಯಾಜ್ಯ ಸಂಗ್ರಹಿಸಲು ವಾಹನ ಸಮೇತ ತೆರಳಿ ಒಣ ಕಸ ವಿಲೇವಾರಿಗೆ ಆದ್ಯತೆ ನೀಡಿದೆ.
    ಎಸ್‌ಎಲ್‌ಆರ್‌ಎಮ್ ಘಟಕ ಸಿಬ್ಬಂದಿ ತ್ಯಾಜ್ಯದ ಚೀಲಗಳಲ್ಲಿ ಕಂಡು ಬಂದ ಅಂಗಡಿ, ಮಳಿಗೆ, ಹೋಟೆಲ್‌ಗಳ ವಿಳಾಸಗಳ ಚೀಟಿ ಮತ್ತು ಬಿಲ್ಲುಗಳನ್ನು ಗುರುತಿಸಿ ಎಚ್ಚರಿಕೆ ನೋಟಿಸ್ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts