More

    ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಿ

    ಸಾಗರ: ಊರಿನ ಸಮಗ್ರ ಅಭಿವೃದ್ಧಿಗೆ ನರೇಗಾ ಯೋಜನೆಯನ್ನು ಪರಿಣಾಮಕಾರಿ ಬಳಸಿಕೊಳ್ಳಿ. ಹೆಚ್ಚು ಸಾರ್ವಜನಿಕ ಕೆಲಸಗಳಿಗೆ ನರೇಗಾದಲ್ಲಿ ಗ್ರಾಮೀಣ ಜನರನ್ನು ತೊಡಗಿಸಿ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು.

    ಸಾಮರ್ಥ್ಯಸೌಧದಲ್ಲಿ ಆಯೋಜಿಸಿದ್ದ ಸಾಗರ ಹಾಗೂ ಹೊಸನಗರ ತಾಲೂಕು ಪಿಡಿಒ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,

    ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಾಗರ ತಾಲೂಕಿನ ಕೆಲವು ಗ್ರಾಪಂಗಳಲ್ಲಿ ಜಾಗದ ಸಮಸ್ಯೆ ಇದ್ದು ಆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪಿಡಿಒಗಳಿಗೆ ಸಭೆಯಲ್ಲಿ ಸೂಚಿಸಿದರು.

    ಈಗಾಗಲೇ ತಾಲೂಕಿನ ಆನಂದಪುರ, ತ್ಯಾಗರ್ತಿ, ಮಾಸೂರು, ಕೆಳದಿ ಹಾಗೂ ತುಮರಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ವಾಹನ ಕೂಡ ನೀಡಲಾಗಿದೆ. 17 ಪಂಚಾಯಿತಿಗಳ ಸಮಗ್ರ ಯೋಜನಾ ವರದಿ ಕೂಡ ಸಿದ್ಧವಾಗಿದ್ದು ಈ ಬಗ್ಗೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಅಧಿಕಾರಿಗಳು ಜನತೆಯ ವಿಶ್ವಾಸವನ್ನು ಪಡೆದು ಕಾರ್ಯ ನಿರ್ವಹಿಸಬೇಕು. ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಎಲ್ಲ ಅಗತ್ಯಕ್ರಮಗಳನ್ನೂ ಕೈಗೊಳ್ಳಲಾಗುತ್ತಿರುವುದು ಶ್ಲಾಘನೀಯ ಸಂಗತಿ. ಈ ಬಗ್ಗೆ ಸ್ವಯಂಸೇವಾ ಹಾಗೂ ಸ್ವಸಹಾಯ ಸಂಘಟನೆಗಳಿಗೂ ತರಬೇತಿ ನೀಡಿ ಅವರನ್ನು ಇದರಲ್ಲಿ ತೊಡಗಿಸಬೇಕು. ಸಂಘಗಳಿಗೆ ಲಾಭ ಬರುವ ರೀತಿಯಲ್ಲಿ ಕ್ರಮ ವಹಿಸಬೇಕು. ಅಲ್ಲದೆ 14ನೇ ಹಣಕಾಸಿನ ಅನುದಾನಗಳ ಮೊತ್ತ ಗ್ರಾಪಂಯಲ್ಲಿ ಬಾಕಿ ಇದ್ದಲ್ಲಿ ಈ ತಿಂಗಳ ಅಂತ್ಯದೊಳಗಾಗಿ ಕಡ್ಡಾಯವಾಗಿ ಅದನ್ನು ವೆಚ್ಚ ಮಾಡಬೇಕು ಎಂದು ಸೂಚಿಸಿದರು.

    ಸಾಗರ ಮತ್ತು ಹೊಸನಗರ ತಾಲೂಕಿನ ಜನರಿಗೆ ಕುಡಿಯುವ ನೀರಿನ ಪೂರೈಕೆ, ಕರ ವಸೂಲಾತಿ ಮುಂತಾದ ಎಲ್ಲ ವಿಚಾರಗಳ ಪ್ರಗತಿ ಕುರಿತು ಸಂಪೂರ್ಣ ವಿವರವನ್ನು ಪಡೆದು ಆಗಬೇಕಾದ ಕೆಲಸಗಳ ಬಗ್ಗೆಯೂ ತಿಳಿವಳಿಕೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಅನುದಾನ ಮತ್ತು ಯೋಜನೆಗಳ ಸಮಗ್ರ ವಿವರ ಪಡೆದರು.

    ಸಾಗರ ತಾಪಂ ಇಒ ಪುಷ್ಪಾ ಆರ್.ಕಮ್ಮಾರ್, ಹೊಸನಗರ ಇಒ ಪ್ರವೀಣ್, ಎಲ್ಲ ಪಿಡಿಗಳು, ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts