More

    ರಾಹುಲ್ ಗಾಂಧಿ ಕರೆಗೆ ಟ್ವೀಟ್ ಡಿಲೀಟ್​ ಮಾಡಿದ್ರು ಸಿಬಲ್​

    ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಡಿದ್ದ ಟ್ವೀಟ್ ಕೆಲವೇ ನಿಮಿಷಗಳಲ್ಲಿ ರಾಜಕೀಯವಾಗಿ ಭಾರಿ ಸಂಚಲನವನ್ನೇ ಸೃಷ್ಟಿಸಿತು. ಈ ಬೆಳವಣಿಗೆ ಪಕ್ಷಕ್ಕೆ ಇನ್ನಷ್ಟು ಘಾಸಿ ಉಂಟುಮಾಡಲಿದೆ ಎಂಬುದನ್ನು ಮನಗಂಡ ಅನೇಕರು ಸಿಬಲ್ ಅವರಿಗೆ ರಾಹುಲ್ ಗಾಂಧಿ ಹೇಳಿದ್ದು ಕೊಲ್ಯೂಡ್(ಪಿತೂರಿ/ಕುತಂತ್ರ) ಎಂದಲ್ಲ ಅಲ್ಯೂಡ್ (ಸಲಹೆ/ಶಿಫಾರಸು) ಎಂದು ಸಮಜಾಯಿಷಿ ನೀಡುವ ಪ್ರಯತ್ನವನ್ನೂ ಮಾಡಿದ್ರು.

    ಇನ್ನೋರ್ವ ನಾಯಕ ರಣದೀಪ್ ಸುರ್ಜೇವಾಲ ಅವರು ಸಿಬಲ್ ಟ್ವೀಟ್​ ಗೆ ಉತ್ತರಿಸುತ್ತ, ರಾಹುಲ್ ಗಾಂಧಿ ಅವರು ಕೊಲ್ಯೂಡ್ ಅನ್ನೋ ಪದ ಬಳಸಿಲ್ಲ. ಬದಲಾಗಿ ಅಲ್ಯೂಡ್ ಅನ್ನೋ ಪದ ಬಳಸಿದ್ದರು. ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮ್ಮೊಳಗೇ ಫೈಟ್ ಮಾಡುವ ಬದಲು ನಾವೆಲ್ಲರೂ ಒಟ್ಟಾಗಿ ಡ್ರಾಕೋನಿಯನ್ ಮೋದಿ ಆಳ್ವಿಕೆ ವಿರುದ್ಧ ಹೋರಾಡಬೇಕಾಗಿದೆ ಎಂದು ಸಮಜಾಯಿಷಿ ನೀಡಿದ್ದರು.

    ಇದನ್ನೂ ಓದಿ: ಬಿಜೆಪಿ ಜತೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದೀರಲ್ಲ- ಪತ್ರಬರೆದವರ ವಿರುದ್ಧ ರಾಗಾ ಆಕ್ರೋಶ

    ಇದರ ಬೆನ್ನಿಗೆ, ಪರಿಸ್ಥಿತಿ ಕೈಮೀರುತ್ತಿರುವ ಸುಳಿವು ಪಡೆದ ರಾಹುಲ್ ಗಾಂಧಿ ನೇರವಾಗಿ ಕಪಿಲ್ ಸಿಬಲ್​ ಅವರಿಗೆ ಫೋನ್ ಕರೆ ಮಾಡಿದ್ದರು. ಅವರೊಂದಿಗೆ ಮಾತನಾಡಿದ ಬೆನ್ನಿಗೆ ಸಿಬಲ್ ಅವರು ತಾವು 12.46ಕ್ಕೆ ಮಾಡಿದ ಟ್ವೀಟನ್ನು ಹಿಂಪಡೆದು 1.47ಕ್ಕೆ ಹೊಸ ಟ್ವೀಟ್ ಅಪ್ಡೇಟ್ ಮಾಡಿದ್ರು.

    ರಾಹುಲ್ ಗಾಂಧಿ ಕರೆಗೆ ಟ್ವೀಟ್ ಡಿಲೀಟ್​ ಮಾಡಿದ್ರು ಸಿಬಲ್​

    ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ಮಾಡ್ತಿದ್ದೇವೆ! ಸರಿ ಬಿಡಪ್ಪ ಎಂದು ಟ್ವೀಟ್ ಮಾಡಿದ್ರು ಕಪಿಲ್ ಸಿಬಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts