More

    ಸೇನಾನಿಗಳ ಸೇವೆ ಶ್ಲಾಘನೀಯ

    ಹುಕ್ಕೇರಿ: ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಶ್ರಮಿಸಿದ ಪೊಲೀಸ್, ಅಂಗನವಾಡಿ, ಕಂದಾಯ, ಆರೋಗ್ಯ ಮತ್ತು ಪೌರಾಡಳಿತ ಸಿಬ್ಬಂದಿಗೆ ಎಷ್ಟು ಅಭಿನಂದಿಸಿದರೂ ಕಡಿಮೆ. ಹಗಲಿರುಳು ಅವರು ಮಾಡಿದ ಸೇವೆಯಿಂದ ತಾಲೂಕಿನಲ್ಲಿ ಕರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

    ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ತಮ್ಮ ತಂದೆ-ತಾಯಿ ಸ್ಮರಣಾರ್ಥ ಏರ್ಪಡಿಸಿದ್ದ ಕರೊನಾ ಸೇನಾನಿಗಳಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹುಕ್ಕೇರಿ ಕ್ಷೇತ್ರದ ಸಂಕೇಶ್ವರ ಪಟ್ಟಣ ಹಾಗೂ ಬೆರಳೆಣಿಕೆಯಷ್ಟು ಗ್ರಾಮ ಹೊರತುಪಡಿಸಿ ಇನ್ನುಳಿದ ಯಾವ ಪ್ರದೇಶದಲ್ಲಿಯೂ ಕರೊನಾ ಹರಡದಂತೆ ನೋಡಿಕೊಂಡಿರುವುದು ಶ್ಲಾಘನೀಯ.

    ಸೇನಾನಿಗಳ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಲಾಗುತ್ತಿದೆ ಎಂದರು. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಬಡವರು ಹಾಗೂ ನಿರ್ಗತಿಕರಿಗೆ ಸ್ಥಳೀಯ ಸಂಘ-ಸಂಸ್ಥೆಗಳ ಮೂಲಕ ದಿನಸಿ ಪದಾರ್ಥ, ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿದ್ದೇವೆ. ಇದೀಗ ಕರೊನಾ ಸೇನಾನಿಗಳಿಗೂ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

    ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿ, ಸುಳ್ಳು ಆಶ್ವಾಸನೆ ನೀಡುವುದಕ್ಕಿಂತ ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡುವ ಕೆಲವೇ ಜನಪ್ರತಿನಿಧಿಗಳಲ್ಲಿ ಉಮೇಶ ಕತ್ತಿ ಒಬ್ಬರು ಎಂದರು.

    ಹಿರಾ ಶುಗರ್ಸ್ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಬಿಜೆಪಿ ಮಂಡಲ ಹಾಗೂ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ನಿರ್ದೇಶಕ ರಮೇಶ ಕುಲಕರ್ಣಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಜಯಗೌಡ ಪಾಟೀಲ, ಸದಸ್ಯ ರಾಜೇಶ ಮುನ್ನೋಳಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಎಪಿಎಂಸಿ ರಾಜ್ಯ ನಿರ್ದೇಶಕ ಪ್ರಶಾಂತ ಪಾಟೀಲ, ಗಣ್ಯರಾದ ಸತ್ಯಪ್ಪ ನಾಯಿಕ, ಸುನೀಲ ನೇರ್ಲಿ ಮತ್ತಿತರರು ಉಪಸ್ಥಿತರಿದ್ದರು. ಪುರಸಭೆ ಮಾಜಿ ಉಪಾಧ್ಯಕ್ಷ ಗುರುರಾಜ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು.

    ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಬಡವರಿಗೆ 33 ಟನ್ ಜೋಳ, 33 ಟನ್ ಗೋಧಿ ಹಿಟ್ಟು, 23 ಟನ್ ರವೆ, 23 ಟನ್ ಅಡುಗೆ ಎಣ್ಣೆ, 12 ಟನ್ ಹೆಸರು, 12 ಟನ್ ತೊಗರಿಬೇಳೆ ಹಾಗೂ ದಿನಸಿ ಪದಾರ್ಥ ಮತ್ತು 56 ಸಾವಿರ ಮಾಸ್ಕ್, 11500 ಲೀಟರ್ ಸ್ಯಾನಿಟೈಸರ್, 37 ಸಾವಿರ ಸೋಪ್ ಒಳಗೊಂಡ ಕಿಟ್‌ಗಳನ್ನು ತಂದೆ-ತಾಯಿ ಹೆಸರಿನ ಟ್ರಸ್ಟ್ ವತಿಯಿಂದ ವಿತರಿಸಿದ್ದೇವೆ. ಕ್ಷೇತ್ರದ ಜನರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ.
    | ರಮೇಶ ಕತ್ತಿ, ಅಧ್ಯಕ್ಷರು ಡಿಸಿಸಿ ಬ್ಯಾಂಕ್, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts