More

    ಶೇನ್ ವಾರ್ನ್ ಕೊಠಡಿಯಲ್ಲಿ ರಕ್ತದ ಕಲೆಗಳು! ಥಾಯ್ಲೆಂಡ್ ಪೊಲೀಸರ ತನಿಖೆಯಲ್ಲಿ ಪತ್ತೆ

    ಕೊಹ್ ಸಮುಯಿ (ಥಾಯ್ಲೆಂಡ್): ಅನುಮಾನಾಸ್ಪದ ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಉಳಿದುಕೊಂಡಿದ್ದ ಖಾಸಗಿ ವಿಲ್ಲಾದ ಕೊಠಡಿಯ ನೆಲ ಮತ್ತು ಸ್ನಾನದ ಟವೆಲ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.

    ಆದರೆ ಪ್ರಜ್ಞಾಹೀನರಾಗಿದ್ದ ವಾರ್ನ್‌ಗೆ ಸಿಪಿಆರ್ ನೀಡುವ ವೇಳೆ ಕೆಮ್ಮು ಬಂದಾಗ ಬಾಯಿಯಿಂದ ರಕ್ತ ಸ್ರಾವ ಆಗಿರಬಹುದು ಎಂದು ಪೊಲೀಸರು ವಿವರಿಸಿದ್ದಾರೆ. ಎದೆ ನೋವಿನ ಸಂಬಂಧ ವಾರ್ನ್ ಇತ್ತೀಚೆಗೆ ವೈದ್ಯರನ್ನೂ ಭೇಟಿಯಾಗಿದ್ದರು. ಹೀಗಾಗಿ ಪೊಲೀಸರು ಅವರ ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳನ್ನು ಮತ್ತೊಮ್ಮೆ ತಳ್ಳಿಹಾಕಿದ್ದಾರೆ.

    ವಾರ್ನ್ ರಜಾದಿನಗಳನ್ನು ಕಳೆಯಲು ಥಾಯ್ಲೆಂಡ್‌ನ ಖಾಸಗಿ ವಿಲ್ಲಾಗೆ ಸ್ನೇಹಿತರೊಂದಿಗೆ ತೆರಳಿದ್ದರು. ಶವ ಪರೀಕ್ಷೆಗಳು ಮುಗಿದ ಬಳಿಕ ಶೀಘ್ರದಲ್ಲೇ ವಾರ್ನ್ ಮೃತದೇಹವನ್ನು ಆಸ್ಟ್ರೇಲಿಯಾಗೆ ಕೊಂಡೊಯ್ಯಲಾಗುವುದು. ಅಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಐಪಿಎಲ್ 15ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಆರ್‌ಸಿಬಿಗೆ ಪಂಜಾಬ್ ಮೊದಲ ಎದುರಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts