More

    ಐಪಿಎಲ್ ಆರಂಭಿಕ ಪಂದ್ಯಗಳಿಗೆ ಆಸೀಸ್ ಸ್ಟಾರ್ ಕ್ರಿಕೆಟಿಗರು ಅಲಭ್ಯ, ಹಲವು ತಂಡಗಳಿಗೆ ಹಿನ್ನಡೆ!

    ಮೆಲ್ಬೋರ್ನ್: ಪಾಕಿಸ್ತಾನ ಪ್ರವಾಸದ ಸೀಮಿತ ಓವರ್ ಸರಣಿಯಿಂದ ಹೊರಗುಳಿದಿರುವ ಹೊರತಾಗಿಯೂ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್ (ಡೆಲ್ಲಿ), ಪ್ಯಾಟ್ ಕಮ್ಮಿನ್ಸ್ (ಕೆಕೆಆರ್) ಮತ್ತು ಜೋಶ್ ಹ್ಯಾಸಲ್‌ವುಡ್ (ಆರ್‌ಸಿಬಿ) ಐಪಿಎಲ್ 15ನೇ ಆವೃತ್ತಿಯ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

    ಬಿಸಿಸಿಐ ಇನ್ನೂ ಅಧಿಕೃತವಾಗಿ ಐಪಿಎಲ್ ಆರಂಭದ ದಿನಾಂಕವನ್ನು ಪ್ರಕಟಿಸದಿದ್ದರೂ, ಮಾರ್ಚ್ ಕೊನೇ ವಾರದಲ್ಲಿ ಚಾಲನೆ ಸಿಗುವ ನಿರೀಕ್ಷೆ ಇದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ, ಏಪ್ರಿಲ್ 6ರ ನಂತರವೇ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಈ ಆಟಗಾರರಿಗೆ ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಮಾರ್ಚ್ 4ರಿಂದ 25ರವರೆಗೆ ನಡೆಯಲಿರುವ ಪಾಕ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವಾರ್ನರ್, ಕಮ್ಮಿನ್ಸ್, ಹ್ಯಾಸಲ್‌ವುಡ್ ಆಡಲಿದ್ದಾರೆ.

    ಬಳಿಕ ಮಾರ್ಚ್ 29ರಿಂದ ಏಪ್ರಿಲ್ 5ರವರೆಗೆ ನಡೆಯಲಿರುವ 3 ಏಕದಿನ ಮತ್ತು ಏಕೈಕ ಟಿ20 ಪಂದ್ಯದಿಂದ ಈ ಮೂವರು ಹೊರಗುಳಿಯಲಿದ್ದಾರೆ. ಆದರೂ ಪಾಕ್ ಪ್ರವಾಸ ಮುಗಿಯುವವರೆಗೆ ಕ್ರಿಕೆಟ್ ಆಸ್ಟ್ರೇಲಿಯಾದ ಕೇಂದ್ರಿಯ ಗುತ್ತಿಗೆ ಯಾವ ಆಟಗಾರರೂ ಐಪಿಎಲ್‌ನಲ್ಲಿ ಆಡಬಾರದು ಎಂದು ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಸೂಚಿಸಿದ್ದಾರೆ.

    ಪಾಕ್ ಪ್ರವಾಸದ ಏಕದಿನ, ಟಿ20 ತಂಡಗಳ ಭಾಗವಾಗಿರುವ ಮಾರ್ಕಸ್ ಸ್ಟೋಯಿನಿಸ್, ಮಿಚೆಲ್ ಮಾರ್ಷ್, ಜೇಸನ್ ಬೆಹ್ರೆನ್‌ಡಾರ್, ಸೀನ್ ಅಬೋಟ್ ಮತ್ತು ನಾಥನ್ ಎಲ್ಲಿಸ್ ಕೂಡ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೇಂದ್ರಿಯ ಗುತ್ತಿಗೆ ಹೊಂದಿರದ ಆಸೀಸ್ ಆಟಗಾರರಾದ ಡೇನಿಯಲ್ ಸ್ಯಾಮ್ಸ್, ರಿಲೀ ಮೆರಿಡಿತ್, ನಾಥನ್ ಕೌಲ್ಟರ್ ನಿಲ್ ಮತ್ತು ಟಿಮ್ ಡೇವಿಡ್ ಮಾತ್ರ ಪೂರ್ಣ ಐಪಿಎಲ್‌ಗೆ ಲಭ್ಯರಿದ್ದಾರೆ.

    11 ವರ್ಷದ ಕ್ರಿಕೆಟಿಗನ ಚಿಕಿತ್ಸೆಗೆ ಕನ್ನಡಿಗ ಕೆಎಲ್ ರಾಹುಲ್ ನೆರವಿನ ಹಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts