More

    ಕಂಪ್ಲಿಯ 8 ಗೋದಾಮುಗಳ ಮೇಲೆ ಕೃಷಿ ಅಧಿಕಾರಿ ತಂಡ ದಾಳಿ, ರಸಗೊಬ್ಬರ, ಕ್ರಿಮಿನಾಶಕ ದಾಸ್ತಾನು ಮಾಹಿತಿ ಸಂಗ್ರಹ

    ಕಂಪ್ಲಿ: ರೈತ ಸಂಘ ಹಾಗೂ ಹಸಿರು ಸೇನೆ ದೂರಿನ ಮೇರೆಗೆ ಹೊಸಪೇಟೆಯ ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ನೇತೃತ್ವದ ತಂಡ ಸೋಮವಾರ ಪಟ್ಟಣದ ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಎಂಟು ಗೋದಾಮುಗಳಿಗೆ ಭೇಟಿ ನೀಡಿ ರಸಗೊಬ್ಬರ ದಾಸ್ತಾನು ಪರಿಶೀಲಿಸಿ ಮಾದರಿ ಸಂಗ್ರಹಿಸಿದರು.

    ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ಮಾತನಾಡಿ, ಸೊಸೈಟಿಯ ಎಲ್ಲ ಗೋದಾಮುಗಳಲ್ಲಿನ ರಸಗೊಬ್ಬರ, ಕ್ರಿಮಿನಾಶಕ ಭೌತಿಕ ದಾಸ್ತಾನು ಲೆಕ್ಕ ಮಾಡಲಾಗುವುದು. ಧಾರವಾಡದ ರಸಗೊಬ್ಬರ ವಿಶ್ಲೇಷಣೆ ಪ್ರಯೋಗಾಲಯಕ್ಕೆ ಕಳಿಸಲು ರಸಗೊಬ್ಬರ ಮಾದರಿ ಸಂಗ್ರಹಿಸಲಾಗಿದೆ. ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರ ಪರಿಶೀಲಿಸಿ ದಾಸ್ತಾನು, ಖರೀದಿ, ಮಾರಾಟದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು. ಕಂಪ್ಲಿಯ ಕೃಷಿ ಅಧಿಕಾರಿ ಶ್ರೀಧರ, ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೇಣುಕರಾಜ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾರಾಯಣರೆಡ್ಡಿ, ಮುಖಂಡ ಜಿ.ಲಿಂಗನಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಗೌಡ, ನಗರ ಅಧ್ಯಕ್ಷ ಕೊಟ್ಟೂರು ರಮೇಶ್, ಪದಾಧಿಕಾರಿಗಳಾದ ಟಿ.ಗಂಗಣ್ಣ, ವಿ.ಟಿ.ನಾಗರಾಜ, ಚೆಲ್ಲಾ ವೆಂಕಟನಾಯ್ಡು, ಆದೋನಿ ರಂಗಪ್ಪ, ಅಕ್ಬರ್, ಕುರಿ ವೀರೇಶ್, ಸೊಸೈಟಿ ಗೋದಾಮು ಸಿಬ್ಬಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts