More

    ಕರೊನಾ ನಡುವೆಯೇ ಚೀನಾದ ಟಿಕ್​ಟಾಕ್ ವೈರಸ್ ವಿರುದ್ಧ ಸಮರ!

    ಒಂದೆಡೆ ಕರೊನಾ ಸೋಂಕನ್ನು ವಿಶ್ವಕ್ಕೆ ಹರಡಿರುವ ಗಂಭೀರ ಆರೋಪಕ್ಕೆ ಗುರಿಯಾಗಿರುವ ಚೀನಾ ಮತ್ತೊಂದೆಡೆ ಟಿಕ್​ಟಾಕ್ ಅಪ್ಲಿಕೇಷನ್​ನಂತಹ ಟೆಕ್ನಾಲಜಿ ವೈರಸ್ಸನ್ನು ಹರಡುವ ಮೂಲಕ ಭಾರತದ ಯುವಜನರನ್ನು ಸಮೂಹ ಸನ್ನಿಗೆ ತಳ್ಳುತ್ತಿದೆ. ಭಾರತವೊಂದರಿಂದಲೇ ಲಕ್ಷ ಲಕ್ಷ ಕೋಟಿ ರೂಪಾಯಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಜತೆಗೆ ತನ್ನ ಟೆಕ್ನಾಲಜಿ ಬಳಸಿಕೊಳ್ಳುತ್ತಿರುವವರ ವೈಯಕ್ತಿಕ ಡೇಟಾಗಳನ್ನೂ ಗುಟ್ಟಾಗಿ ಸಂಗ್ರಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಅಭಿಯಾನಕ್ಕೆ ಕರೆಕೊಟ್ಟಿರುವ ಈ ಸಂದರ್ಭದಲ್ಲಿ ಈ ಆಪ್ ಬ್ಯಾನ್ ಮಾಡ ಬೇಕೆಂಬ ಆಗ್ರಹದ ಕೂಗೆದ್ದಿದ್ದು ಅಭಿಯಾನವೂ ಶುರುವಾಗಿದೆ. ಈ ಕುರಿತ ಸಮಗ್ರ ನೋಟ ಇಲ್ಲಿದೆ.

    ಸುಚೇತನಾ ನಾಯ್ಕ ಬೆಂಗಳೂರು

    ಹೈದರಾಬಾದ್​ನ 27 ವರ್ಷದ ಯುವತಿ ಟಿಕ್​ಟಾಕ್ ಮೂಲಕ ದಿನವೂ ಒಂದೊಂದು ವಿಡಿಯೋ ಅಪ್​ಲೋಡ್ ಮಾಡುತ್ತಿದ್ದಳು. ಇದಕ್ಕೆ ಅಕ್ಬರ್ ಶಾ ಎಂಬಾತ ಲೈಕ್, ಕಮೆಂಟ್ ಮಾಡುತ್ತಿದ್ದ. ಇಲ್ಲಿಂದ ಶುರುವಾದ ಪರಿಚಯ ಮದುವೆವರೆಗೂ ಹೋಗಿ ಯುವತಿಯ ಮನೆಯವರ ಎದುರೇ ನಿಶ್ಚಿತಾರ್ಥ ಮಾಡಿಕೊಂಡ ಈ ಭೂಪ! ಬಳಿಕ ಆಕೆಯನ್ನು ಕರೆದುಕೊಂಡು ಹೋಗಿ ಸತತ ಅತ್ಯಾಚಾರ ಎಸಗಿದ. ಇದೆಲ್ಲ ಆದ ನಂತರವೇ ಯುವತಿಗೆ ತಾನು ಮೋಸಹೋಗಿರುವ ವಿಷಯ ತಿಳಿದಿದೆ. ಮದುವೆಯೇ ಆಗಿಲ್ಲ ಎಂದಿದ್ದ ಅಕ್ಬರ್ ನಾಲ್ಕು ಮಕ್ಕಳ ತಂದೆ ಎಂಬ ವಿಷಯ ತಿಳಿದು ಮಂಗಳವಾರ (ಮೇ 19) ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.

    ಇದು ಟಿಕ್​ಟಾಕ್​ನ ಒಂದು ಉದಾಹರಣೆ ಮಾತ್ರ. ಹೀಗೆ ಮೋಸ ಹೋದವರಿಗೆ ಲೆಕ್ಕವಿಲ್ಲ. ಅದೆಷ್ಟೋ ಮಂದಿ ಜೀವ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಸೆಲ್ಪಿ ಮಾಡಲು ಪ್ರಾಣಕ್ಕೆ ಕುತ್ತು ತಂದುಕೊಂಡವರಿಗಿಂತಲೂ ಅಧಿಕ ಸಂಖ್ಯೆಯಲ್ಲಿ, ಟಿಕ್​ಟಾಕ್​ನಲ್ಲಿ ಸ್ಟಂಟ್ ಮಾಡಲು ಹೋಗಿ ಗಂಡಾಂತರಕ್ಕೀಡಾದವರಿಗಿಂತ ಮೃತಪಟ್ಟವರೇ ಹೆಚ್ಚು ಎನ್ನುತ್ತಿವೆ ವರದಿಗಳು.

    ಇವು ಸಾವುನೋವಿನ ವಿಷಯವಾಯಿತು. ಇದೀಗ ಯುವ ಮನಸುಗಳನ್ನು ಹಾಳುಗೆಡಹುವ ಅತ್ಯಂತ ಅಪಾಯಕಾರಿ ವಿಡಿಯೋಗಳು ಸಹ ಇದರಲ್ಲಿ ಪ್ರಸಾರ ಆಗುತ್ತಿರುವುದು ಭೀತಿ ಹುಟ್ಟಿಸುವಂತಿದೆ. ಪ್ರಾಣಿ-ಪಕ್ಷಿಗಳಿಗೆ ವಿಪರೀತ ಹಿಂಸೆ ಕೊಡುವುದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಕೊಲೆ-ಸುಲಿಗೆ, ಲೈಂಗಿಕತೆಯನ್ನು ಪ್ರಚೋದಿಸುವಂಥ, ಅಶ್ಲೀಲ ಪದಪ್ರಯೋಗ ಮಾಡುವಂಥ ವಿಡಿಯೋಗಳ ಪ್ರಸಾರವೇ ಇದೀಗ ಅಧಿಕವಾಗಿ ಬಿಟ್ಟಿದೆ. ಅಪರಾಧ ಚಟುವಟಿಕೆಗಳನ್ನು ವೈಭವೀಕರಿಸುವ ವಿಡಿಯೋಗಳಿಗೆ ಲೈಕ್, ಕಮೆಂಟ್​ಗಳು ಹೆಚ್ಚು ಬರುತ್ತವೆ ಎನ್ನುವ ಕಾರಣಕ್ಕೆ ಈ ಟ್ರೆಂಡ್ ಶುರುವಾಗಿದೆ. ಸೆಲೆಬ್ರಿಟಿಗಳು ಕೂಡ ಟಿಕ್​ಟಾಕ್ ಮೂಲಕ ಯುವ ಮನಸುಗಳನ್ನು ಇದರೆಡೆಗೆ ಸೆಳೆಯುತ್ತಿರುವುದು ಇನ್ನೊಂದು ದುರಂತ. ಟಿಕ್​ಟಾಕ್ ಬಳಸುವವರಲ್ಲಿ ಹೆಚ್ಚಿನ ಮಂದಿ ಮಾನಸಿಕ ಸಮಸ್ಯೆ ಇರುವವರು ಎನ್ನುತ್ತಾರೆ ತಜ್ಞರು.

    ಇದನ್ನೂ ಓದಿ  ಸೇಡು ತೀರಿಸಿಕೊಂಡ ಸೇನೆ: ಇಬ್ಬರು ಹಿಜ್ಬುಲ್ ಉಗ್ರರು ಫಿನಿಶ್

    ಇವನ್ನೂ ಅನ್​ಇನ್​ಸ್ಟಾಲ್ ಮಾಡಿ

    ಈ ಚೀನಾ ಅಪ್ಲಿಕೇಷನ್​ಗಳನ್ನು ಅನ್ ಇನ್​ಸ್ಟಾಲ್ ಮಾಡುವಂತೆ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಅವೆಂದರೆ: ಟಿಕ್ ಟಾಕ್, ಜೂಮ್ ಕ್ವಾಯ್, ಪಬ್​ಜಿ, ಹಲೋ, ಲೈಕ್, ಶೇರ್​ಇಟ್, ಶೇರ್​ಚಾಟ್, ಕ್ಯಾಮ್ ಸ್ಕಾ್ಯನರ್, ಕ್ಸೆಂಡರ್, ವಿಗೊ, ಬಿಗೊ, ಲೈವ್ ಮಿ, ಯುಸಿ ಬ್ರೌಸರ್, ಸಿಎಂ ಬ್ರೌಸರ್, ವಿಗೊ ವೀಡಿಯೋ, ವಿವಾ ವಿಡಿಯೋ, ವಿಮೇಟ್, ಬ್ಯೂಟಿ ಪ್ಲಸ್, ಬೈದು ಮ್ಯಾಪ್, ಆಪ್​ಲಾಕ್, ಪ್ಯಾರಲಲ್ ಸ್ಪೇಸ್, ಯುಡಿಕ್ಷನರಿ, ಡಿಯು ಬ್ಯಾಟರಿ ಸೇವರ್,

    ಟರ್ಬೆವಿಪಿಎನ್, ನ್ಯೂಸ್​ಡಾಗ್, ಕ್ಲಬ್ ಫ್ಯಾಕ್ಟರಿ, ಮಿ ಸ್ಟೋರ್, ಒಪ್ಪೋ ಸ್ಟೋರ್, ವಿವೋ ಸ್ಟೋರ್, ಇಎಸ್ ಫೈಲ್ ಎಕ್ಸ್​ಪ್ಲೋರರ್, ಚೀತಾ ಮೊಬೈಲ್, ಕ್ಲೀನ್ ಮಾಸ್ಟರ್, ಶೇನ್, ವಿಶ್, ಅಲಿ ಎಕ್ಸ್​ಪ್ರೆಸ್, ಕ್ಲಾಷ್ ಆಫ್ ಕಿಂಗ್ಸ್, ಮಾಫಿಯಾ ಸಿಟಿ, ಮೊಬೈಲ್ ಲೆಜೆಂಡ್, ಕ್ಯಾಸ್ಟಲ್ ಕ್ಲ್ಯಾಶ್

    ಶುರು ಅಭಿಯಾನ

    ಭಗ್ನ ಪ್ರೇಮಿಯೊಬ್ಬ ಯುವತಿಗೆ ಆಸಿಡ್ ಹಾಕಿರುವಂತೆ ಬಿಂಬಿಸುವ ಟಿಕ್​ಟಾಕ್ ಮಾಡಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಈತನ ಟ್ವಿಟರ್ ಖಾತೆಯನ್ನೂ ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಅಪ್ಲಿಕೇಷನ್ ಬ್ಯಾನ್ ಅಭಿಯಾನ ಶುರುವಾಗಿದೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವದೇಶಿ ವಸ್ತುಗಳ ಬಳಕೆಗೆ ಕರೆ ಕೊಟ್ಟ ಬೆನ್ನಲ್ಲೇ ಇಂಥದ್ದೊಂದು ಅಭಿಯಾನ ಶುರುವಾಗಿರುವುದು ಹಾಗೂ ಹಲವು ಬಳಕೆದಾರರು ಆಪ್ ಅನ್​ಇನ್​ಸ್ಟಾಲ್ ಮಾಡುತ್ತಿರುವುದು ಕೂಡ ಉತ್ತಮ ಬೆಳವಣಿಗೆ.

    ಕೋರ್ಟ್​ನಲ್ಲಿ ಜಯ

    ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಟಿಕ್​ಟಾಕ್ ಅಪ್ಲಿಕೇಷನ್ ನಿಷೇಧಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್​ನಲ್ಲಿ ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ಗಂಭೀರತೆ ಅರಿತಿದ್ದ ಕೋರ್ಟ್, ಆಪ್ ಬ್ಯಾನ್​ಗೆ ಸೂಚಿಸಿತ್ತು. ಇದನ್ನು ಟಿಕ್​ಟಾಕ್ ಕಂಪನಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರೂ ಜಯ ಸಾಧಿಸಿರಲಿಲ್ಲ. ಆದ್ದರಿಂದ ಗೂಗಲ್ ಕಂಪನಿ ತನ್ನ ಪ್ಲೇಸ್ಟೋರ್​ನಿಂದ ಈ ಅಪ್ಲಿಕೇಷನ್​ನ್ನು ತೆಗೆದುಹಾಕಿತ್ತು.

    ನಂತರ ಟಿಕ್​ಟಾಕ್ ಪುನಃ ಕೋರ್ಟ್ ಮೊರೆ ಹೋಯಿತು. ಈ ಆಪ್ ಬಳಕೆ ಮಾಡುತ್ತಿದ್ದ 20 ಲಕ್ಷ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಕಂಪನಿಯ 250ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂಬಿತ್ಯಾದಿಯಾಗಿ ವಾದ ಮಂಡಿಸುವ ಮೂಲಕ ಕಾನೂನು ಸಮರದಲ್ಲಿ ಜಯ ಸಾಧಿಸಿಯೇ ಬಿಟ್ಟಿತು. ಇದರ ಬಳಕೆಗೆ ಇದ್ದ ನಿಷೇಧವನ್ನು ಕೋರ್ಟ್ ತೆರವುಗೊಳಿಸಿದ ಮೇಲೆ ಈ ಆಪ್ ಬಳಕೆದಾರರ ಸಂಖ್ಯೆಯೂ ಶರವೇಗದಲ್ಲಿ ಹೆಚ್ಚಾಯಿತು. ಕಳೆದ ವರ್ಷಕ್ಕಿಂತ ಶೇ. 46ಹೆಚ್ಚಿಗೆ ಡೌನ್​ಲೋಡ್ ಕಂಡಿತು!

    ಕುಸಿದ ರೇಟಿಂಗ್

    ‘ಬ್ಯಾನ್ ಟಿಕ್​ಟಾಕ್’ ಹ್ಯಾಷ್​ಟ್ಯಾಗ್​ನಲ್ಲಿ ನಡೆಯುತ್ತಿರುವ ಅಭಿಯಾನದ ಹಿನ್ನೆಲೆಯಲ್ಲಿ, ಪ್ಲೇ ಸ್ಟೋರ್​ನಲ್ಲಿ ಟಿಕ್ ಟಾಕ್ ರೇಟಿಂಗ್ ಭಾರಿ ಕುಸಿತ ಕಂಡಿದೆ. ಒಂದು ವಾರದ ಹಿಂದೆ 4.6 ಇದ್ದ ಇದರ ರೇಟಿಂಗ್ ಈಗ 2ಕ್ಕೆ ಇಳಿದಿದೆ.

    ಚೀನಾ ಬಿಟ್ಟಿದ್ದು ನಮಗೆ

    ಅಂದಹಾಗೆ, ಟಿಕ್​ಟಾಕ್ ಚೀನಾದಲ್ಲಿ ತಯಾರಾದ ಅಪ್ಲಿಕೇಷನ್. ಇದು ಬೈಟ್​ಡಾನ್ಸ್ ಕಂಪನಿಯ ಒಡೆತನದಲ್ಲಿದೆ. ಅಚ್ಚರಿ ಎಂದರೆ ಟಿಕ್​ಟಾಕ್ ಚೀನಾದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲವಂತೆ. ಅರ್ಥಾತ್ ಅಲ್ಲಿಯ ಜನ ಈ ಅಪ್ಲಿಕೇಷನ್ ಬಳಸುವುದಿಲ್ಲ ಎನ್ನುತ್ತವೆ ವರದಿಗಳು. ಆದರೆ 150 ದೇಶಗಳಲ್ಲಿ ಈ ಆಪ್ ಡೌನ್​ಲೋಡ್ ಮಾಡಿಕೊಳ್ಳಲಾಗಿದೆ. 39 ಭಾಷೆಗಳಲ್ಲಿ ಇದು ಲಭ್ಯ. ಅದಕ್ಕಿಂತಲೂ ಅಪಾಯ ಎಂದರೆ, ಟಾಪ್ 1 ಸ್ಥಾನದಲ್ಲಿ ಇರುವುದು ಭಾರತ! ಪ್ರಪಂಚದಾದ್ಯಂತ 80 ಕೋಟಿ ಗಿಂತಲೂ ಅಧಿಕ ಬಳಕೆದಾರರನ್ನು ಟಿಕ್​ಟಾಕ್ ಹೊಂದಿದ್ದರೆ, ಅರ್ಧದಷ್ಟು ಬಳಕೆದಾರರು ಭಾರತದವರು.

    ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts