More

    68 ಜನರ ಸಾವಿಗೆ ಕಾರಣನಾಗಿದ್ದ ವಾಂಟೆಡ್ ನಕ್ಸಲವಾದಿ ಪೊಲೀಸರಿಗೆ ಶರಣು

    ದಾಂತೇವಾಡ: ಮೂರು ಮಾರಣಾಂತಿಕ ಆಕ್ರಮಣ ಪ್ರಕರಣಗಳಲ್ಲಿ ವಾಂಟೆಡ್ಆಗಿದ್ದ ಆರೋಪಿಯೊಬ್ಬ ಸೇರಿದಂತೆ ಮೂವರು ನಕ್ಸಲವಾದಿಗಳು, ಛತ್ತೀಸಗಢದ ದಾಂತೇವಾಡ ಜಿಲ್ಲಾ ಪೊಲೀಸರಿಗೆ ಶರಣಾಗಿದ್ದಾರೆ. ಸ್ಥಳೀಯ ಗೊಂಡಿ ಉಪಭಾಷೆಯಲ್ಲಿ ‘ಮನೆಗೆ ಹಿಂತಿರುಗಿ’ ಎಂಬ ಅರ್ಥ ಹೊಂದಿರುವ ‘ಲೋನ್ ವರ್ರತು’ ಪುನರ್ವಸತಿ ಕಾರ್ಯಕ್ರಮದಡಿ ಈ ಬಂಡುಕೋರರು ಹಿಂಸೆಯ ಮಾರ್ಗ ತ್ಯಜಿಸಿ ಮತ್ತೆ ಮುಖ್ಯವಾಹಿನಿಗೆ ಸೇರಲು ಬಯಸಿದ್ದಾರೆ.

    ಶರಣಾದವರಲ್ಲಿ ಒಬ್ಬನಾದ 35 ವರ್ಷದ ಸುರೇಶ್ ಕಡ್ತಿ, ಮಾವೋವಾದಿಗಳ ಪ್ಲಟೂನ್ ನಂಬರ್ 11 ರಲ್ಲಿ ಸೆಕ್ಷನ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 2007ರಲ್ಲಿ ಬಿಜಾಪುರದ ರಾಣಿಬೊದ್ಲಿ ಔಟ್​ಪೋಸ್ಟ್​ನ ಮೇಲೆ ಆಕ್ರಮಣ ನಡೆಸಿ 55 ಸುರಕ್ಷತಾ ಸಿಬ್ಬಿಂದಿಯ ಹತ್ಯೆ ಮಾಡಲಾಗಿದ್ದ ಪ್ರಕರಣದಲ್ಲಿ, 2006ರಲ್ಲಿ 7 ಸೈನಿಕರು ಮರಣಹೊಂದಿದ್ದ ಛತ್ತೀಸಗಢ ಆರ್ಮಡ್ ಫೋರ್ಸ್ ಕ್ಯಾಂಪಿನ ಮೇಲಿನ ಆಕ್ರಮಣ ಪ್ರಕರಣದಲ್ಲಿ ಮತ್ತು 2008 ರಲ್ಲಿ 6 ಸುರಕ್ಷತಾ ಸಿಬ್ಬಂದಿ ಮರಣಹೊಂದಿದ್ದ ಮೊದಕಪಾಲ್ ದಂಗೆ ಪ್ರಕರಣದಲ್ಲಿ, ಕಡ್ತಿ ವಾಂಟೆಡ್ ಆರೋಪಿ. ಅವನ ಬಗ್ಗೆ ಸುಳಿವು ಕೊಟ್ಟವರಿಗೆ 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಸಹ ಘೋಷಿಸಲಾಗಿತ್ತು ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.

    ಇದನ್ನೂ ಓದಿ: ಕಾಡ್ಗಿಚ್ಚು ನಂದಿಸಲು ಅನುದಾನ ಕೊರತೆ! ಬೆಂಕಿ ಆರಿಸುವುದು ಸವಾಲಿನ ಕೆಲಸ

    ಶರಣಾಗಿರುವ ಮತ್ತೊಬ್ಬ ನಕ್ಸಲನ ಹೆಸರು ಸೋನು ಮದ್ಕಂ(25). ಈತ ಜನಮಿಲಿಷಿಯ ಸದಸ್ಯನಾಗಿ ರಸ್ತೆಗಳನ್ನು ಹಾಳು ಮಾಡುವ, ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ನಿರತವಾದ ವಾಹನಗಳಿಗೆ ಬೆಂಕಿ ಹಚ್ಚುವ ಮತ್ತು ಮಾವೋವಾದಿ ಪೋಸ್ಟರ್-ಬ್ಯಾನರ್ ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದನೆಂದು ಹೇಳಲಾಗಿದೆ. ಮೂರನೆಯ ವ್ಯಕ್ತಿ, ಜೋಗಿ ಮಾರ್ಕಂ (27) ಎಂಬ ಮಹಿಳೆ. ಈಕೆ ಮಾವೋವಾದಿಗಳ ಸಾಂಸ್ಕೃತಿಕ ವಿಭಾಗವಾದ ಚೇತನ ನಾಟ್ಯ ಮಂಡಳಿಯ ಸದಸ್ಯೆಯಾಗಿದ್ದಳು ಎನ್ನಲಾಗಿದೆ.

    ಜಿಲ್ಲಾ ಪೊಲೀಸ್ ಮತ್ತು ಸಿ.ಆರ್.ಪಿ.ಎಫ್​ ಅಧಿಕಾರಿಗಳ ಮುಂದೆ ಶನಿವಾರ ಸಂಜೆ ಶರಣಾದ ಮೂವರು ಬಂಡುಕೋರರು, ಪೊಲೀಸರ ಪುನರ್ವಸತಿ ಅಭಿಯಾನ “ಲೋನ್ ವರ್ರತು”ದಿಂದ ಪ್ರಭಾವಿತರಾಗಿದ್ದಾರೆ; ಮತ್ತು ‘ಟೊಳ್ಳಾದ’ ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ದಾಂತೆವಾಡ ಜಿಲ್ಲೆಯಲ್ಲಿ ಲೊನ್ ವರ್ರತು ಅಭಿಯಾನದಡಿ ಪೊಲೀಸರಿಗೆ ಶರಣಾದ ನಕ್ಸಲರ ಸಂಖ್ಯೆ 319 ಕ್ಕೆ ಏರಿದೆ.

    ಇದನ್ನೂ ಓದಿ: ಲಾಕ್​ಡೌನ್​ ವೇಳೆ ಸೀರಿಯಲ್​ ನೋಡಿ ಮಕ್ಕಳಿಗಾಗಿ ರಾಮಾಯಣ ಪುಸ್ತಕ ಬರೆದ 10ರ ಬಾಲಕ!

    ಕಳೆದ ವರ್ಷ ಜೂನ್​ನಲ್ಲಿ ಆರಂಭವಾದ ಈ ಅಭಿಯಾನದಡಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವ ಬಂಡುಕೋರರಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಾಭಿವೃದ್ಥಿ ತರಬೇತಿ ನೀಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ದಾಂತೇವಾಡಾ ಪೊಲೀಸರು, ಕನಿಷ್ಠ 1,600 ನಕ್ಸಲರ ಮೂಲಸ್ಥಳಗಳಾಗಿರುವ ಹಳ್ಳಿಗಳಲ್ಲಿ ಈ ಬಗ್ಗೆ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂದು ಪಲ್ಲವ ತಿಳಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

    2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts