More

    ದೇಹದ ತೂಕ ಇಳಿಸಿಕೊಳ್ಳಬೇಕೇ? ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ…

    ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ಆಸೆ ಬಹುತೇಕ ಎಲ್ಲ ಸ್ಥೂಲದೇಹಿಗಳಲ್ಲೂ ಸಾಮಾನ್ಯ. ಅದಕ್ಕಾಗಿ ಅವರು ದೈಹಿಕ ಕಸರತ್ತು ನಡೆಸುತ್ತಲೇ ಇರುತ್ತಾರೆ. ಆದರೂ ಹೆಚ್ಚು ತೂಕ ಕಡಿಮೆಯಾಗದೇ ತೊಳಲಾಡುತ್ತಾರೆ. ಅಂಥವರು ಈ ಬರಹವನ್ನು ಒಮ್ಮೆ ಓದಲೇಬೇಕು.

    ನಿಯಮಿತ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಆಹಾರ ಸೇವನೆಯೇ ಫಿಟ್‌ನೆಸ್‌ನ ಮೂಲಮಂತ್ರಗಳು. ತೂಕ ಕಡಿಮೆ ಮಾಡಿಕೊಳ್ಳುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಬೇರೆ ಕೆಲವು ಉಪಾಯಗಳೂ ಇವೆ. ಅವುಗಳಲ್ಲಿ ಪಾನೀಯಗಳ ಸೇವನೆಯೂ ಒಂದು. ರುಚಿಯಾದ ಮತ್ತು ಆರೋಗ್ಯಕರವಾದ ಅಂತಹ ಪಾನೀಯಗಳ ತಯಾರಿಕೆ ಕುರಿತ ಟಿಪ್ಸ್ ಇಲ್ಲಿವೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದಲ್ಲದೆ, ದೇಹದ ಕೊಬ್ಬನ್ನು ವೇಗವಾಗಿ ಕರಗಿಸುವುದಕ್ಕೂ ಸಹಾಯ ಮಾಡುತ್ತದೆ.

    ತೂಕ ಕಡಿಮೆ ಮಾಡುವ ಈ ಪಾನೀಯಗಳನ್ನು ಅಡುಗೆಮನೆಯಲ್ಲಿ ಈಗಾಗಲೇ ಇರುವ ಸರಳ ಪದಾರ್ಥಗಳಿಂದಲೇ ತಯಾರಿಸಬಹುದು. ಹೆಚ್ಚು ಸಕ್ಕರೆ ಅಥವಾ ಹೆಚ್ಚಿನ ಉಪ್ಪು ಬೆರೆಸದೆಯೇ ಮಾಡಿಕೊಳ್ಳಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಸ್ಥಿತಿಯಲ್ಲಿ ಇಡಲು ಸಹಾಯವಾಗುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ಕೂಡ ಕಡಿಮೆ ಮಾಡಬಹುದು. ಈ ಪಾನೀಯಗಳು ಹಸಿವಿನಿಂದ ಉಂಟಾಗುವ ಸಂಕಟವನ್ನು ಕಡಿಮೆ ಮಾಡಿ ಹೆಚ್ಚು ಶಕ್ತಿಯನ್ನೂ ನೀಡುತ್ತವೆ.

    ದಾಲ್ಚಿನ್ನಿ ಜೇನು ಮಿಶ್ರಣ

    ದೇಹದ ತೂಕ ಇಳಿಸಿಕೊಳ್ಳಬೇಕೇ? ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ...

    ದಾಲ್ಚಿನ್ನಿ ದೇಹದ ಶಾಖ ಉತ್ಪಾದನೆಯನ್ನು ಶೇಕಡಾ 20ರಷ್ಟು ಹೆಚ್ಚಿಸುತ್ತದೆ. ಜತೆಗೆ ಹೆಚ್ಚಿನ ಕ್ಯಾಲರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ಹಸಿವನ್ನು ನಿಯಂತ್ರಿಸುವುದಲ್ಲದೆ, ಹೆಚ್ಚು ತಿನ್ನುವ ಬಯಕೆಗೂ ಬ್ರೇಕ್ ಹಾಕುತ್ತದೆ. ಹೀಗಾಗಿ ಸುಲಭವಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಪಾನೀಯ ತಯಾರಿಸಲು, ಒಂದು ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ದಾಲ್ಚಿನ್ನಿ ಪುಡಿ ಸೇರಿಸಿ. ಸ್ವಲ್ಪ ತಣಿಯಲು ಬಿಡಿ. ನೀರು ಬೆಚ್ಚಗಿರುವಾಗ 1 ಚಮಚ ಜೇನುತುಪ್ಪವನ್ನು ಸೇರಿಸಿ. ಇದಕ್ಕೆ ನಿಂಬೆ ರಸದ ಕೆಲವು ಹನಿಗಳನ್ನು ಸೇರಿಸಿ ಕುಡಿದು, ಆನಂದಿಸಿ.

    ಪುದೀನಾ ಮತ್ತು ನಿಂಬೆಯೊಂದಿಗೆ ಗ್ರೀನ್ ಟೀ

    ದೇಹದ ತೂಕ ಇಳಿಸಿಕೊಳ್ಳಬೇಕೇ? ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ...


    ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಗ್ರೀನ್ ಟೀ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡುವುದಲ್ಲದೆ ಹಸಿರು ಚಹಾದಲ್ಲಿರುವ ಕ್ಯಾಟೆಚಿನ್ ಕೊಬ್ಬಿನ ಅಣುಗಳನ್ನು ಒಡೆಯುತ್ತದೆ. ಬಾಣಲೆಗೆ ಒಂದು ಕಪ್ ನೀರು ಮತ್ತು ಆರೇಳು ಪುದೀನಾ ಎಲೆಗಳನ್ನು ಸೇರಿಸಿ ಕಾಯಿಸಿ. ನೀರು ಕುದಿಯಲು ಆರಂಭವಾದಾಗ ಒಲೆ ಆಫ್ ಮಾಡಿ ಆ ನೀರಿಗೆ 2 ಚಮಚ ಗ್ರೀನ್ ಟೀ ಎಲೆಗಳನ್ನು ಸೇರಿಸಿ. ಸುಮಾರು 5 ನಿಮಿಷಗಳ ಕಾಲ ಎಲೆಗಳನ್ನು ನೆನೆಯಲು ಬಿಡಿ. ಬಳಿಕ ಎಲೆಗಳನ್ನು ತೆಗೆದುಹಾಕಿ ನೀರನ್ನು ಬಸಿದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿ ಬಿಸಿಯಾಗಿರುವಾಗಲೇ ಕುಡಿಯಬೇಕು.

    ಶುಂಠಿ, ನಿಂಬೆ ನೀರು

    ದೇಹದ ತೂಕ ಇಳಿಸಿಕೊಳ್ಳಬೇಕೇ? ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ...

    ಶುಂಠಿಯ ಸೇವನೆಯು ದೇಹದಲ್ಲಿನ ಉರಿಯನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಈ ಪಾನೀಯವು ಹಸಿವನ್ನು ನಿಗ್ರಹಿಸಿ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಉತ್ತೇಜನ ನೀಡುತ್ತದೆ. ಈ ಪಾನೀಯವನ್ನು ತಯಾರಿಸಲು ಹೀಗೆ ಮಾಡಿ. ಸ್ವಲ್ಪ ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅದಕ್ಕೆ ಒಂದು ಲೋಟ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ಆ ಶುಂಠಿ ನೀರನ್ನು ಒಂದು ಲೋಟಕ್ಕೆ ಸುರಿದು ಮುಕ್ಕಾಲು ಟೀ ಸ್ಪೂನ್ ಹುರಿದ ಜೀರಿಗೆ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

    ದಾಲ್ಚಿನ್ನಿ ಜತೆ ಅನಾನಸ್ ಪಾನೀಯ

    ದೇಹದ ತೂಕ ಇಳಿಸಿಕೊಳ್ಳಬೇಕೇ? ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ...

    ಒಂದು ಪೈನಾಪಲ್‌ನ ಸಣ್ಣ ಪೀಸ್ ಕೇವಲ 42 ಕ್ಯಾಲರಿ ಹೊಂದಿದ್ದು, ಶೇಕಡಾ 4ರಷ್ಟು ಮಾತ್ರ ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತದೆ. ಅನಾನಸ್‌ನಲ್ಲಿ ಮ್ಯಾಂಗನೀಸ್ ಸಮೃದ್ಧವಾಗಿದ್ದು, ಇದು ಕೊಬ್ಬು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ತೂಕ ಕಡಿಮೆಯಾಗಲು ಕಾರಣವಾಗುತ್ತದೆ. ಈ ಪಾನೀಯ ತಯಾರಿಕೆಗೆ ಅನಾನಸ್ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ನಯವಾಗಿ ರುಬ್ಬಿಕೊಳ್ಳಬೇಕು. ಈ ರಸವನ್ನು ಗಾಜಿನ ಲೋಟಕ್ಕೆ ಹಾಕಿಕೊಂಡು ಅದಕ್ಕೆ ನಿಂಬೆ ರಸ, ಅರ್ಧ ಟೀ ಸ್ಪೂನ್ ದಾಲ್ಚಿನ್ನಿ ಪುಡಿ ಮತ್ತು ರುಚಿಗೆ ಕಪ್ಪು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಕುಡಿಯಬೇಕು.

    ಡಾರ್ಕ್ ಚಾಕೊಲೇಟ್ ಬ್ಲ್ಯಾಕ್ ಕಾಫಿ

    ದೇಹದ ತೂಕ ಇಳಿಸಿಕೊಳ್ಳಬೇಕೇ? ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಸೇವಿಸಿ...

    ಬ್ಲ್ಯಾಕ್ ಕಾಫಿಯಲ್ಲಿ ಕ್ಲೋರೊಜೆನಿಕ್ ಆಮ್ಲವಿದ್ದು, ಇದು ಉತ್ತಮ ಆ್ಯಂಟಿಆಕ್ಸಿಡೆಂಟ್ ಕೂಡ ಹೌದು. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಕಪ್‌ಗೆ 1 ಟೀ ಸ್ಪೂನ್ ಬ್ಲ್ಯಾಕ್ ಕಾಫಿ ಮತ್ತು ಬಿಸಿಬಿಸಿ ನೀರನ್ನು ಸೇರಿಸಿ. ಇದಕ್ಕೆ ಅರ್ಧ ಸ್ಪೂನ್ ಅಗಸೆಬೀಜ ಹಾಕಿ, ಬಳಿಕ ಇದರ ಮೇಲೆ 1 ಸ್ಪೂನ್ ತುರಿದ ಡಾರ್ಕ್ ಚಾಕೊಲೇಟ್ ಹಾಕಿ ಸೇವಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts