More

    ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬೇಕಾ? ಬೇಡ್ವಾ? ಗ್ರಾಮ್ ಸಂಸ್ಥೆ ನಡೆಸಿದ ಸಮೀಕ್ಷಾ ವರದಿ ಇಲ್ಲಿದೆ ನೋಡಿ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಬೇಕಾ? ನಡೆಸಬಾರದಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಶೇ.64 ಜನರು ಪರೀಕ್ಷೆ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದ ಶೇ.36 ಮಾತ್ರವೇ ಪರೀಕ್ಷೆ ಬೇಡ ಎಂದಿದ್ದಾರೆ.

    ಗ್ರಾಸ್‌ರೂಟ್ ರಿಸರ್ಚ್ ಆ್ಯಂಡ್ ಅಡ್ವೋಕೆಸಿ ಮೂಮೆಂಟ್(ಗ್ರಾಮ್) ನಡೆಸಿದ ಸಮೀಕ್ಷೆಯಲ್ಲಿ ಶಿಕ್ಷಣ ತಜ್ಞರು, ಪಾಲಕರು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶೇ.78 ಶಿಕ್ಷಕರು, ಶೇ.60 ವಿದ್ಯಾರ್ಥಿಗಳು ಹಾಗೂ ಶೇ.60 ಮತ್ತು ಶೇ.65 ಸಾರ್ವಜನಿಕರು ಸೇರಿ ಒಟ್ಟಾರೆಯಾಗಿ ಶೇ.64 ಜನರು ಪರೀಕ್ಷೆ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಗ್ರಾಮೀಣ ಮತ್ತು ನಗರ ಎಂದು ವರ್ಗೀಕರಿಸಿ ನೋಡಿದಾಗ, ಗ್ರಾಮೀಣ ಭಾಗದ ಶೇ.71 ಜನರು ಹಾಗೂ ನಗರದಲ್ಲಿ ಶೇ.57 ಜನರು ಪರೀಕ್ಷೆ ಪರವಾಗಿದ್ದಾರೆ.

    ಇದನ್ನೂ ಓದಿ: ಕೆಲಸ ಖಾಲಿ ಇದೆ: ರಾಜ್ಯಾದ್ಯಂತ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

    ಮೂರು ದಿನಗಳು ಈ ಸಮೀಕ್ಷೆ ನಡೆಸಿದ್ದು, 1,487 ಜನರು ಭಾಗಹಿಸಿದ್ದರು. ಈ ಪೈಕಿ 737 ಗ್ರಾಮೀಣ ಹಾಗೂ 750 ನಗರ ಪ್ರದೇಶದವರಾಗಿದ್ದಾರೆ. 606 ವಿದ್ಯಾರ್ಥಿಗಳು, 254 ಶಿಕ್ಷಕರು, 278 ಸಾರ್ವಜನಿಕರು ಸೇರಿದ್ದಾರೆ.

    ಅಲ್ಲದೆ, ಪರೀಕ್ಷೆ ಮಾಡುವ ವೇಳೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಂಸ್ಥೆಯು ಸರ್ಕಾರಕ್ಕೆ ಸಲಹೆಗಳನ್ನು ನೀಡಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಖ್ಯೆ ಹೆಚ್ಚಳ ಮಾಡಬೇಕು. ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ನೀಡಬೇಕು. ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಬೇಕು. ಆರೋಗ್ಯ ಸಿಬ್ಬಂದಿಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮ್ ಸಂಸ್ಥೆ ನಿರ್ವಾಹಕ ನಿರ್ದೇಶಕ ಡಾ.ಬಸರಾಜು ಆರ್.ಶ್ರೇಷ್ಠ ಸಲಹೆ ನೀಡಿದ್ದಾರೆ.

    ಆಗಾಗ ಮುಖ್ಯಮಂತ್ರಿಗಳಿಗೆ ಪಾಠ ಮಾಡಲು ನೀವೇನು ಹೆಡ್​ಮಾಸ್ಟರ್​ ಅಲ್ಲ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಟಾಂಗ್

    Video: ತಾನೇನು ಕಡಿಮೆ ಎಂದು ಟ್ರ್ಯಾಕ್​ಗೆ ನುಗ್ಗಿದ ಶ್ವಾನ: ಓಟಗಾರರ ನಡುವೆ ನಂಬರ್ 1 ಸ್ಥಾನ ಗಿಟ್ಟಿಸಿಯೇ ಬಿಟ್ಟಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts