More

    ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು

    ನವದೆಹಲಿ: ಲಾಕ್​ಡೌನ್​ ಅವಧಿಯ ನಿರ್ಬಂಧಗಳನ್ನು ಸಡಿಲಿಸಿದ್ದರೂ ಚಿತ್ರಮಂದಿರಗಳ ಪುನರಾರಂಭ ಯಾವಾಗ ಎನ್ನುವುದು ಇನ್ನೂ ಅನಿಶ್ಚಿತವಾಗಿದೆ. ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರೂ ಕರೊನಾ ಗುಮ್ಮ ಯಾರನ್ನೂ ಬಿಡುತ್ತಿಲ್ಲ.

    ಚಿತ್ರಗಳು ಓಟಿಟಿ ಪ್ಲಾಟ್​ಫಾರಂನತ್ತ ಚಿತ್ತ ಹರಿಸಿರುವುದರಿಂದ ಚಿತ್ರಮಂದಿರಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಅಮೆರಿಕದಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗಿದೆ. ಅದೇ ಡ್ರೈವ್​ ಇನ್​ ಥಿಯೇಟರ್​ ಅರ್ಥಾತ್​ಬಯಲು ಚಿತ್ರಮಂದಿರಗಳು.

    ಇದನ್ನೂ ಓದಿ; ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ

    ಡ್ರೈವ್​ ಇನ್​ ರೆಸ್ಟೋರಂಟ್​ ಇದ್ದಂತೆಯೇ ಈ ಡ್ರೈವ್​ ಇನ್​ ರೆಸ್ಟೋರಂಟ್​ಗಳು. ಒಂದು ಕಾಲದಲ್ಲಿ ಅಮೆರಿಕದಲ್ಲಿ ಜನಪ್ರಿಯವಾಗಿದ್ದವು. ಆದರೆ, ಚಿತ್ರಮಂದಿರಗಳ ಅದ್ದೂರಿತನ, ಐಷಾರಾಮಿ ಹಾಗೂ ತಾಂತ್ರಿಕತೆ ನಡುವೆ ಸೊರಗಿ ಹೋಗಿದ್ದವು. ಲಾಕ್​ಡೌನ್​ ಅವಧಿಯಲ್ಲಿ ಮತ್ತೆ ಇವುಗಳಿಗೆ ಶುಕ್ರದೆಸೆ ಬಂದಿವೆ.

    ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಸಾವಿರಾರು ಕಾರುಗಳು ನಿಲ್ಲುವಷ್ಟು ಜಾಗದಲ್ಲಿ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಜನರು ಕಾರಿನಲ್ಲಿಯೇ ಕುಳಿತು ಅಥವಾ ಕಾರಿನ ಮುಂದೆ ತಾವೇ ಮನೆಯಿಮದ ತಂದ ಕುರ್ಚಿ ಮೇಜುಗಳನ್ನಿಟ್ಟುಕೊಂಡು ವಿಶಾಲ ಪರದೆ ಮೇಲೆ ಚಿತ್ರ ಪ್ರದಶನ ವೀಕ್ಷಿಸುತ್ತಾರೆ.

    ಇದನ್ನೂ ಓದಿ; ಝೂಮ್​ಗೆ ಟಕ್ಕರ್​ ಕೊಡಲಿದೆ ಅಂಬಾನಿಯ ‘ಜಿಯೋ ಮೀಟ್​’ 

    ಇದನ್ನೇ ಲಾಭದ ದಾರಿ ಮಾಡಿಕೊಳ್ಳಲು ವಾಲ್​ ಮಾರ್ಟ್​ ಕೂಡ ಮುಂದಾಗಿದೆ. ಅಮೆರಿಕದಲ್ಲಿರುವ 160 ಸೂಪರ್​ ಮಾರ್ಕೆಟ್​ಗಳ ಎದುರಿನ ಪಾರ್ಕಿಂಗ್​ ಪ್ರದೇಶವನ್ನು ಡ್ರೈವ್​ ಇನ್​ ಥಿಯೇಟರ್​ ಆಗಿ ಪರಿವರ್ತಿಸುತ್ತಿದೆ. ಇಲ್ಲಿ ಪ್ರತಿ ಸೂಪರ್​ ಮಾರ್ಕೆಟ್​ ಎದುರು ನೂರಾರು ಕಾರುಗಳು ನಿಲ್ಲುವಷ್ಟು ಜಾಗವಿರುತ್ತದೆ. ಇದನ್ನೇ ಬಯಲು ಚಿತ್ರಮಂದಿರವಾಗಿ ಪರಿವರ್ತಿಸಲಾಗುತ್ತಿದೆ.

    ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳು ಆರಂಭವಾಗುವುದು ವಿಳಂಬವಾದರೆ ಭಾರತದಲ್ಲೂ ಬಯಲು ಚಿತ್ರಮಂದಿರಗಳ ಯುಗ ಆರಂಭವಾಗಬಹುದೇನೋ?

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts