More

    ಮಾ.21 ರಂದು ‘ಮೊಳೆ ಮುಕ್ತ ಮರ’ ವಾಕಥಾನ್

    ಬೆಂಗಳೂರು : ಉದ್ಯಾನನಗರಿ ಬೆಂಗಳೂರಿನ ಸೌಂದರ್ಯಕ್ಕೆ ಕಾರಣವಾಗಿರುವ ಮರಗಳನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಮರಗಳ ಮೇಲೆ ಮೊಳೆ ಹೊಡೆದು ಫಲಕಗಳನ್ನು ಹಾಕುತ್ತಿದ್ದಾರೆ, ಭಿತ್ತಿ ಪತ್ರಗಳನ್ನು ಸ್ಟಾಪ್ಲರ್ ಬಳಸಿ ಅಂಟಿಸುತ್ತಿದ್ದಾರೆ. ಇದರಿಂದ ಮರಗಳಿಗೆ ಗಾಸಿಯುಂಟಾಗುತ್ತಿದ್ದು, ಪರಿಸರ ಮತ್ತು ಮರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಬೆಂಗಳೂರು ಹುಡುಗರು ಸಂಸ್ಥೆಯ ಸದಸ್ಯರು ಹೇಳಿದ್ದಾರೆ.

    ನಗರದ ವಿವಿಧೆಡೆ ಮರಗಳ ಮೇಲಿರುವ ಮೊಳೆ ಹಾಗೂ ಪಿನ್‌ಗಳನ್ನು ತೆಗೆಯುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 1250 ಮರಗಳಲ್ಲಿ ಹನ್ನೆರಡೂವರೆ ಕೆಜಿಯಷ್ಟು ಮೊಳೆ ಹಾಗೂ 8 ಕೆಜಿಯಷ್ಟು ಸ್ಟಾಪ್ಲರ್ ಪಿನ್ ತೆಗೆದಿದ್ದೇವೆ. ಈ ಕಾರ್ಯದಲ್ಲಿ ಸಮಾಜದ ಹಲವು ಗಣ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಸಂಸ್ಥೆಯ ಸದಸ್ಯ ಪ್ರೇಮ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಶಾಲಾ ಕಾಲೇಜುಗಳು ಬಂದ್, 11 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ

    ಈ ಹಿನ್ನೆಲೆಯಲ್ಲಿ ಮರಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾ.21 ರ ಭಾನುವಾರ ನಗರದಲ್ಲಿ ‘ಮೊಳೆ ಮುಕ್ತ ಮರ ‘ ಎಂಬ ಶೀರ್ಷಿಕೆಯಡಿ ಬೆಂಗಳೂರು ಹುಡುಗರು ಸಂಸ್ಥೆಯು ವಾಕಥಾನ್ ಆಯೋಜಿಸಿದೆ. ಬೆಳಿಗ್ಗೆ 7 ಗಂಟೆಗೆ ಎಂ.ಜಿ.ರಸ್ತೆಯ ಬಾಲಭವನದಿಂದ ಆರಂಭವಾಗುವ ಈ 3 ಕಿಲೋಮೀಟರ್ ಕಾಲ್ನಡಿಗೆ​, ಬಿಬಿಎಂಪಿ ಕೇಂದ್ರ ಕಚೇರಿವರಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗವಹಿಸಲಿವೆ.

    ವಾಕಥಾನ್‌ನಲ್ಲಿ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಮತ್ತು ರೈಲ್ವೆ ಇಲಾಖೆ ಎಡಿಜಿಪಿ ಭಾಸ್ಕರ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಮರಗಳಿಂದ ಮೊಳೆ ಮತ್ತು ಸ್ಟಾಪ್ಲರ್ ಪಿನ್ ತೆಗೆಯುವ ಕಾರ್ಯಾಚರಣೆಯಲ್ಲಿ ಸಹಕಾರಿಗಳಾಗಿರುವ ಎಸಿಪಿ ಸಜ್ಮಾ ಮತ್ತು ಪಿಎಸ್‌ಐ ರಾಜೇಶ್ ಎಲ್.ವೈ, ಅವರು ವಿಶೇಷ ಅತಿಥಿಗಳಾಗಲಿದ್ದಾರೆ ಎಂದು ಪ್ರೇಮ್ ತಿಳಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!

    ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…

    ಬಿಜೆಪಿ ಸೇರಿದ ತೆರೆಯ ಮೇಲಿನ ‘ರಾಮ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts