More

    ಪಡಿತರಕ್ಕಾಗಿ ಪ್ರತಿ ತಿಂಗಳು ಗ್ರಾಹಕರ ಪರೇಡ್

    ಶಿಗ್ಗಾಂವಿ(ಗ್ರಾ): ತಾಲೂಕಿನ ಅವಳಿ ಗ್ರಾಮಗಳಾದ ಹುಲಿಕಟ್ಟಿ, ಶಿಡ್ಲಾಪುರ ಗ್ರಾಮಸ್ಥರು ನಾಲ್ಕು ಕಿ.ಮೀ. ದೂರದ ಹೋತನಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗಿ ಪಡಿತರ ಪಡೆಯುವ ಸ್ಥಿತಿ ಎದುರಾಗಿದೆ.

    ಹುಲಿಕಟ್ಟಿ ಮತ್ತು ಶಿಡ್ಲಾಪುರ ಗ್ರಾಮಗಳಲ್ಲಿ ಅಂದಾಜು 240 ಬಿಪಿಎಲ್ ಕಾರ್ಡ್​ಗಳಿವೆ. ಸರ್ಕಾರ ಮತ್ತು ಆಹಾರ ಇಲಾಖೆ ನಿಯಮದನ್ವಯ 500ಕ್ಕೂ ಹೆಚ್ಚು ಕಾರ್ಡ್​ಗಳಿದ್ದರೆ ಮಾತ್ರ ಗ್ರಾಮದಲ್ಲಿ ಪಡಿತರ ವಿತರಣೆ ಕೇಂದ್ರ ತೆರೆಯಲು ಅವಕಾಶವಿದೆ. ಈ ನಿಯಮವೇ ಎರಡು ಗ್ರಾಮಗಳಿಗೆ ಕಂಟಕವಾಗಿದೆ.

    ಬಿಪಿಎಲ್ ಕಾರ್ಡ್ ಕಡಿಮೆ ಇರುವ ಗ್ರಾಮಗಳು ಪಡಿತರ ಕೇಂದ್ರದಿಂದ ದೂರ ಇದ್ದಲ್ಲಿ ಕೇಂದ್ರದವರು ಆಯಾ ಗ್ರಾಮಗಳಲ್ಲಿ ಗ್ರಾಮಸ್ಥರ ಸಹಕಾರ ಪಡೆದು ಪಡಿತರ ದಾಸ್ತಾನು ಮಾಡಿ ವಿತರಿಸಲು ಅವಕಾಶವಿದೆ. ಆದರೂ, ಪಡಿತರ ಕೇಂದ್ರದವರಾಗಲಿ ಅಥವಾ ತಾಲೂಕಾಡಳಿತವಾಗಲಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ನಿಯಮ ಸಡಿಲಿಕೆಗೆ ಮುಂದಾಗದ ತಾಲೂಕಾಡಳಿತ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಹಠಕ್ಕೆ ತಾಲೂಕಿನ ಎರಡೂ ಗ್ರಾಮಸ್ಥರು ಪರದಾಡುವಂತಾಗಿದೆ.

    ಪ್ರತಿ ತಿಂಗಳು ಹುಲಿಕಟ್ಟಿ, ಶಿಡ್ಲಾಪುರ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯ ಬಿಟ್ಟು ಪಡಿತರ ತರಲು ಹೋತನಹಳ್ಳಿ ಗ್ರಾಮಕ್ಕೆ ಹೋಗಬೇಕು. ಕೆಲವರು ಸ್ವಂತ ವಾಹನಗಳಲ್ಲಿ ತೆರಳಿ ಪಡಿತರ ತರುತ್ತಿದ್ದರೆ, ಬಡವರು ನಾಲ್ಕು ಕಿ.ಮೀ. ನಡೆದುಕೊಂಡು ಹೋಗಿ ಪಡಿತರ ತರಬೇಕಾಗಿದೆ. ಮಳೆಗಾಲದಲ್ಲಂತೂ ಪಡಿತರ ಪಡೆಯಲು ಹರಸಾಹಸಪಡಬೇಕು.

    ಹುಲಿಕಟ್ಟಿ ಮತ್ತು ಶಿಡ್ಲಾಪುರ ಗ್ರಾಮಗಳಲ್ಲಿ ಪಡಿತರ ಕೇಂದ್ರ ತೆರೆಯುವಂತೆ ಗ್ರಾಮಸ್ಥರು ಹಲವು ಬಾರಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಗ್ರಾಮಸ್ಥರ ಮನವಿಗೆ ತಾಲೂಕಾಡಳಿತ ಸ್ಪಂದಿಸಿಲ್ಲ.

    | ಬಾಬಣ್ಣ ಸುಂಕದ ಶಿಡ್ಲಾಪುರ ಗ್ರಾಮಸ್ಥ

    ಸರ್ಕಾರದ ನಿಯಮದಂತೆ ಪಡಿತರ ಕೇಂದ್ರ ತೆರೆಯಲು ಕನಿಷ್ಠ 500 ಕಾರ್ಡ್ ಗಳು ಬೇಕು. ಆದ್ದರಿಂದ ಎರಡೂ ಗ್ರಾಮಗಳ ಬಿಪಿಎಲ್ ಕಾರ್ಡ್​ಗಳ ಕುರಿತು ಹೋತನಹಳ್ಳಿ ಕೇಂದ್ರದಿಂದ ಮಾಹಿತಿ ಪಡೆದು ಪರ್ಯಾಯ ವ್ಯವಸ್ಥೆ ಕುರಿತು ಪರಿಶೀಲಿಸಲಾಗುವುದು.

    | ಮಂಜುನಾಥ ಮುನ್ನೋಳಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts