More

    ಟಿಕೆಟ್ ಸಿಗುತ್ತದೆ ಕಾದು ನೋಡಿ

    ಹುಬ್ಬಳ್ಳಿ: ಟಿಕೆಟ್ ವಿಷಯವಾಗಿ ದೆಹಲಿಯಲ್ಲಿ ವರಿಷ್ಠರೊಂದಿಗೆ ಮಾತನಾಡಿ, ಹುಬ್ಬಳ್ಳಿಗೆ ಗುರುವಾರ ರಾತ್ರಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮುಖದಲ್ಲಿ ಗೆಲುವಿನ ನಗೆ ಕಂಡುಬಂದಿತು.
    ವಿಮಾನ ನಿಲ್ದಾಣ ಹಾಗೂ ತಮ್ಮ ನಿವಾಸಕ್ಕೆ ಆಗಮಿಸಿದ ವೇಳೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಕಾರ ಮೊಳಗಿಸಿದರು.

    ಇನ್ನಷ್ಟು ಖುಷಿಪಟ್ಟ ಶೆಟ್ಟರ್ ಕೈ ಮೇಲೆತ್ತಿ ‘ವಿಕ್ಟರಿ’ ಚಿಹ್ನೆ ತೋರಿಸಿದರು. ನಂತರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ. ಕಾದು ನೋಡಿ ಎಂದು ಖುಷಿ ಹಂಚಿಕೊಂಡರು.
    ಬೇರೆಯವರಿಗೆ ಟಿಕೆಟ್ ಕೊಡಿ ಎಂದು ನಾನು ಕೇಳಿಲ್ಲ. ಟಿಕೆಟ್‌ಗೆ ನನ್ನ ಮಗನ ಹೆಸರನ್ನೂ ಪ್ರಸ್ತಾಪಿಸಿಲ್ಲ.

    ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಗೆ ಸುದೀರ್ಘವಾಗಿ ಸಭೆ ಆಗಿದೆ. ಅವರ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದೇನೆ. ಎರಡು ದಿನ ಕಾದು ನೋಡಿ ಎಂದರು.

    ದೆಹಲಿಯಿಂದ ಬಂದು ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದೆ. ಅವರು ಕೂಡ ಶೆಟ್ಟರ್ ಅವರಿಗೆ ಟಿಕೆಟ್ ಕೊಡಬೇಕೆಂದು ವರಿಷ್ಠರಿಗೆ ಹೇಳಿದ್ದಾರೆ.

    ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಕೊಡದೇ ಹೋದರೆ, ಉತ್ತರ ಕರ್ನಾಟಕದ ಬಹಳಷ್ಟು ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಜೆ.ಪಿ. ನಡ್ಡಾ ಅವರ ಮುಂದೆ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇದೆಲ್ಲವನ್ನೂ ವರಿಷ್ಠರು ಆಲಿಸಿದ್ದಾರೆ. ನನಗೆ ಟಿಕೆಟ್ ಸಿಗುವ ಖಾತರಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಿಕೆಟ್ ತಪ್ಪಿಸಲು ಯಾರು ಪ್ರಯತ್ನಿಸಿದರು ಎಂಬುದು ಈಗ ಅಪ್ರಸ್ತುತ. ಸಮಯ ಬಂದಾಗ ಹೇಳುತ್ತೇನೆ. ಈಗ ಅದರ ಬಗ್ಗೆ ಕಮೆಂಟ್ ಮಾಡುವುದಿಲ್ಲ.

    ಎರಡನೇ ಪಟ್ಟಿ ಆಗಲೇ ಸಿದ್ಧವಾಗಿದ್ದರಿಂದ ಹೆಸರು ಪ್ರಕಟವಾಗಿಲ್ಲ. ಇನ್ನೊಂದು ಲಿಸ್ಟ್‌ನಲ್ಲಿ ನನ್ನ ಹೆಸರು ಇರಲಿದೆ ಎಂದರು. ಸಿಗದೆ ಹೋದರೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಸ್ಪರ್ಧಿಸುವುದಂತೂ ಖಚಿತ ಎಂದು ಶೆಟ್ಟರ್ ಪುನರುಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts