More

    ಹೊರಗುತ್ತಿಗೆ ನೌಕರರ ಕಾಯಂಗೆ ಆಗ್ರಹಿಸಿ ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರದಲ್ಲಿ ಪ್ರತಿಭಟನೆ

    ಶೃಂಗೇರಿ: ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ವೇತನ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಪಡಿಸಿ ಶೃಂಗೇರಿ, ಮೂಡಿಗೆರೆ, ತರೀಕೆರೆ ಮತ್ತು ಎನ್.ಆರ್. ಪುರಗಳಲ್ಲಿ ಮಂಗಳವಾರ ವಾಹನ ಚಾಲಕರು, ವಾಟರ್​ವೆುನ್​ಗಳು ಪಪಂ, ಪುರಸಭೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

    ಪಟ್ಟಣ ಪಂಚಾಯಿತಿ ಬಳಿ ಪ್ರತಿಭಟನೆ ಮಾಡಿದ ಹೊರಗುತ್ತಿಗೆ ನೌಕರರು ಶೃಂಗೇರಿಯಲ್ಲಿ ತಹಸೀಲ್ದಾರ್ ಅಂಬುಜಾ ಅವರಿಗೆ ಮೂಡಿಗೆರೆಯಲ್ಲಿ ಆಡಳಿತಾಧಿಕಾರಿ ಎಚ್.ಎಂ. ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ಶೃಂಗೇರಿಯಲ್ಲಿ ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, 20 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಪ್ರವಾಸಿ ತಾಣವಾದ ಶೃಂಗೇರಿಗೆ ವರ್ಷಕ್ಕೆ ಸುಮಾರು 40 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಪಟ್ಟಣದ ನಾಗರಿಕರು ಮತ್ತು ಪ್ರವಾಸಿಗರಿಗೆ ಸ್ವಚ್ಛತೆ ಮತ್ತು ನೀರು ಪೂರೈಕೆ ವ್ಯವಸ್ಥೆಯಲ್ಲಿ ಸಮಸ್ಯೆಯಾಗದಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಸ್ವಚ್ಛತೆ ನಿರ್ವಹಣೆ, ನೀರು ಸರಬರಾಜು ಹಾಗೂ ಚಾಲಕರ ವಿಭಾಗಗಳಲ್ಲಿ ಕೆಲಸ ಮಾಡುವ ಎಲ್ಲರನ್ನೂ ಪೌರಕಾರ್ವಿುಕರು ಎಂದು ಪರಿಗಣಿಸಲಾಗಿತ್ತು. ಆದರೆ ಸಫಾಯಿ ಕರ್ಮಚಾರಿ ಆಯೋಗ ರಚನೆ ಬಳಿಕ ನೀರು ಸರಬರಾಜು ಹಾಗೂ ಚಾಲಕರ ವಿಭಾಗವನ್ನು ಕೈಬಿಡಲಾಗಿದೆ. ಸರಕಾರ ಕೂಡಲೇ ಕಾರ್ವಿುಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಪೌರ ನೌಕರರ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಎಂ.ವಿಜೇಂದ್ರ ಒತ್ತಾಯಿಸಿದರು.

    ಹೊರಗುತ್ತಿಗೆ ನೌಕರರಾದ ರವಿಶೆಟ್ಟಿ, ರಹಮತ್, ಪ.ಪಂ ಮಾಜಿ ಸದಸ್ಯರು, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಎಂ.ಗೋಪಾಲ್ ಹಾಗೂ ಪೌರಕಾರ್ವಿುಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts