More

    ಬೆಳೆ ರಕ್ಷಣೆಗೆ ಟ್ಯಾಂಕರ್ ಮೊರೆ ಹೋದ ರೈತ

    ವಡಗೇರಾ: ಕೈಕೊಟ್ಟ ಮಳೆ, ಕಾಲವೆಗಳಿಗೆ ನೀರು ಬಾರದ ಕಾರಣ ಬೆಳೆ ಒಣಗುವ ಹಂತಕ್ಕೆ ತಲುಪಿದ್ದರಿಂದ ಗುರುವಾರ ಹತ್ತಿ ಮತ್ತು ತೊಗರಿ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸಲು ಪಟ್ಟಣದ ಯುವ ರೈತ ಕಾಶೀನಾಥ ಕಲ್ಲಪ್ಪನೋರ್ ಮುಂದಾಗಿದ್ದಾರೆ.

    ಈ ವಿಷಯ ಅರಿತ ವಡಗೇರಾ ತಾಲೂಕು ರೈತ ಸಂಘ ಹಸಿರು ಸೇನೆಯ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕಾ ನೇತೃತ್ವದಲ್ಲಿ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ರೈತರು ಸಾಲ ಮಾಡಿ ಹೊಲಗಳಿಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕಳೆ ತೆಗೆಸುವುದು ಸೇರಿ ಇನ್ನಿತರ ಕೆಲಸಗಳಿಗೆ ಲಕ್ಷಾನುಗಟ್ಟಲೇ ಹಣ ಖರ್ಚು ಮಾಡಿದ್ದಾರೆ. ಮತ್ತೆ ಈಗ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ಹರಿಸಬೇಕಾದರೆ ಕನಿಷ್ಠ ಒಂದು ಎಕರೆಗೆ ೨೦ ಸಾವಿರ ರೂ.ಖರ್ಚಾಗುತ್ತಿದೆ. ಇದಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಬಿಡದೇ ಇರುವುದು ಇದಕ್ಕೆ ಮೂಲ ಕಾರಣವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ ಕೆಲ ದಿನಗಳ ಹಿಂದೆ ಸರ್ಕಾರ ವಡಗೇರಾ ತಾಲೂಕನ್ನು ಬರಪೀಡಿತ ಎಂದು ಹೆಸರಿಗೆ ಅಷ್ಟೇ ಘೋಷಣೆ ಮಾಡಿದೆ. ಈವರೆಗೆ ಯಾವುದೇ ರೀತಿ ಬರ ಪರಿಹಾರದ ಕಾರ್ಯ ಆರಂಭವಾಗಿಲ್ಲ. ಹಣ ಕೂಡ ರೈತರಿಗೆ ಜಮೆಯಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಡಗೇರಾ ಕೊನೇ ಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಬೇಕು ಮತ್ತು ರೈತರ ಪಂಪ್‌ಸೈಟ್‌ಗಳಿಗೆ ಕನಿಷ್ಠ ೮ಗಂಟೆ ವಿದ್ಯುತ್ ಪೂರೈಸಬೇಕು. ಒಂದು ವೇಳೆ ನಿರ್ಲಕ್ಷÈ ವಹಿಸಿದ್ದಲ್ಲಿ ತಹಸಿಲ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ಶರಣು ಜಡಿ, ಮಹ್ಮದ್ ಖುರೇಶಿ, ಕೃಷ್ಣಾ ಟೇಲರ್, ವೆಂಕಟೇಶ ಇಟಗಿ, ನಿಂಗಪ್ಪ, ಮಲ್ಲು ನಾಟೇಕರ್, ಮರಲಿಂಗ ಗೋನಾಲ್, ತಿರುಮಲ ಮುಸ್ತಾಜೀರ್, ಮಲ್ಲು ಬಾಡದ, ರಾಘವೇಂದ್ರ ಗುತ್ತೇದಾರ್, ನಾಗರಾಜ ಸ್ವಾಮಿ, ಸುರೇಶ ಬಾಡದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts