More

    ಗೆಜ್ಜಗಾರ ಘಟ್ಟಿವಾಳಯ್ಯ ವಚನಗಳು ಸಾರ್ವಕಾಲಿಕ


    ಮೈಸೂರು : ನಂಜನಗೂಡು ನಗರದ ಹೊರವಲಯದ ನಂಜುಂಡೇಶ್ವರ ಟೌನ್‌ಶಿಪ್‌ನಲ್ಲಿರುವ ಅನುರಾಗ್ ಮಕ್ಕಳ ಮನೆಯಲ್ಲಿ ಭಾನುವಾರ ಗೆಜ್ಜಗಾರ ಘಟ್ಟಿವಾಳಯ್ಯ ಜಯಂತಿ ಆಚರಿಸಲಾಯಿತು.


    ಶರಣ ಚಿಂತಕ ಹಲ್ಲರೆ ಶಿವಬುದ್ದಿ ಮಾತನಾಡಿ, ವಿಶ್ವಗುರು ಬಸವಣ್ಣ ಅವರ 770 ಅಮರಗಂಗಗಳಲ್ಲಿ ಶರಣ ಘಟ್ಟಿವಾಳಯ್ಯ ಕೂಡ ಒಬ್ಬರು. ಅವರು ಬರೆದಿರುವ 147 ವಚನಗಳು ಸಾರ್ವಕಾಲಿಕವಾಗಿವೆ ಎಂದರು.


    ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ಅಧ್ಯಕ್ಷ ಡಿ.ಪಿ.ಮಲ್ಲೇಶ್ ಮಾತನಾಡಿ, ಘಟ್ಟಿವಾಳಯ್ಯ ಅವರ ವಚನಗಳನ್ನು ಸಾರ್ವತ್ರಿಕವಾಗಿ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರ ಜಯಂತಿಯನ್ನು ರಾಜ್ಯಾದ್ಯಂತ ಆಯೋಜಿಸಿ ಪರಿಚಯಿಸುವ ಕಾರ್ಯ ಮಾಡಲಾಗುವುದು. ಜತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

    ಅನುರಾಗ್ ಮಕ್ಕಳ ಮನೆ ಸಂಸ್ಥಾಪಕ ಅಧ್ಯಕ್ಷ ಡಿ.ಜೆ.ಸೋಮಶೇಖರಮೂರ್ತಿ, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ, ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ಉಪಾಧ್ಯಕ್ಷ ಮಹದೇವ್ ಕೋಟೆ, ಗೌರವ ಅಧ್ಯಕ್ಷ ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿ ಗೋಳೂರು ಸ್ನೇಕ್ ಬಸವರಾಜು, ಪ್ರಧಾನ ಕಾರ್ಯದರ್ಶಿ ಮಹೇಶ್, ಖಜಾಂಚಿ ಶಶಿ ತಾರಕ್, ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರಮೇಶ್, ಮಹೇಶ್, ಅಶೋಕ್, ಶಿವನಂಜಶೆಟ್ಟಿ, ಸಿದ್ದಪ್ಪಾಜಿ, ಮೋಹನ್, ಮಲ್ಲಿಕಾರ್ಜುನ್, ಶೇಖರ್, ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts