More

    ಯಾವ ಬೂತ್​ನಲ್ಲಿ ಎಷ್ಟು ಮತ ಬಿದ್ದಿರ್ಬೋದು? ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಮತ ಲೆಕ್ಕಚಾರ ಜೋರು

    ಶಿವಮೊಗ್ಗ: ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಏರುಗತಿಯಲ್ಲಿದ್ದ ಗ್ರಾಪಂ ಮೊದಲ ಹಂತದ ಚುನಾವಣಾ ಕಾವು ಡಿ.22ರ ಮತದಾನದ ಪ್ರಕ್ರಿಯೆಯೊಂದಿಗೆ ತಣ್ಣಗಾಗಿದೆ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದ ಅಭ್ಯರ್ಥಿಗಳು ಈಗ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಬೆಂಬಲಿಗರು, ಕಾರ್ಯಕರ್ತರು ತೆರೆಮರೆಗೆ ಜಾರಿದ್ದಾರೆ.

    ಅಭ್ಯರ್ಥಿಗಳ ಮೇಲಿನ ಜನರ ಆಕ್ರೋಶ, ಪ್ರೀತಿ, ಎಲ್ಲ ರಾಗ ದ್ವೇಷಗಳೂ ಮತದಾನ ಪ್ರಕ್ರಿಯೆ ಮೂಲಕ ಮತ ಪೆಟ್ಟಿಗೆಯಲ್ಲಿ ಸೇರಿಕೊಂಡಿವೆ. ಮತ ಪೆಟ್ಟಿಗೆಗಳು ಎಲ್ಲ ರಹಸ್ಯಗಳನ್ನೂ ಗರ್ಭದಲ್ಲಿರಿಸಿಕೊಂಡು, ಅಮೂಲ್ಯ ಸಂಪತ್ತಿನ ರೂಪದಲ್ಲಿ ಸ್ಟ್ರಾಂಗ್ ರೂಂನಲ್ಲಿ ಸಕಲ ಭದ್ರತೆಯ ನಡುವೆ ಅಡಗಿ ಕುಳಿತಿವೆ.

    ಮೊದಲ ಹಂತದಲ್ಲಿ ಜಿಲ್ಲೆಯ ಮೂರು ತಾಲೂಕಿನ ಮತದಾರರ ಮನದಾಳದ ಇಂಗಿತ ಬಯಲಾಗಲು ಇನ್ನು ಒಂದು ವಾರ ಬಾಕಿ ಇದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡವರ ಎದೆಯಲ್ಲಿ ಢವಢವ ಸದ್ದು ಹೆಚ್ಚುತ್ತಿದೆ. ಡಿ.30ರ ಬೆಳಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಅದೃಷ್ಟವಂತರು ಯಾರು ಎಂಬುದು ನಿಚ್ಚಳವಾಗಲಿದೆ.

    ರಾಜಕೀಯ ಲೆಕ್ಕಾಚಾರ:

    ಇದುವರೆಗೆ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದ ಅಭ್ಯರ್ಥಿಗಳು ಮಂಗಳವಾರ ಸಂಜೆಯಿಂದಲೇ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದು, ಕೆಲ ಬೂತ್​ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಎಲ್ಲದರ ಆಧಾರದ ಮೇಲೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಕ್ಕೆ ಈಗ ಚಾಲನೆ ಸಿಕ್ಕಿದೆ.

    ಯಾವ ಬೂತ್​ಗಳಲ್ಲಿ ಎಷ್ಟು ಮತ ಬಿದ್ದಿರಬಹುದು. ನಮ್ಮ ಪಕ್ಷದ ಬೆಂಬಲಿತರು ಎಷ್ಟು ಸಂಖ್ಯೆಯಲ್ಲಿ ಗೆಲ್ಲಬಹುದು. ಎಷ್ಟು ಪಂಚಾಯಿತಿಗಳಲ್ಲಿ ಅಧಿಕಾರ ಸಿಗಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳಲ್ಲಿ ಆರಂಭವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts