More

    ಕಾರ್ಮಿಕರಿಂದ ಮತದಾನ ಬಹಿಷ್ಕಾರ

    ದಾಂಡೇಲಿ: ನಗರದ ಶ್ರೇಯಸ್ ಶ್ರೀನಿಧಿ ಕಾರ್ಖಾನೆ ಕಾರ್ಮಿಕರು ವಿಧಾನ ಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ನಿರ್ಧಾರ ಕೈಗೊಂಡರು.

    ಭಾನುವಾರ ಕಾರ್ಖಾನೆಯ ಆವರಣದಲ್ಲಿ ಮುಷ್ಕರ ನಡೆಸಿದ ಕಾರ್ಮಿಕರು ಶ್ರೇಯಸ್ ಶ್ರೀನಿಧಿ ಕಾರ್ಖಾನೆ ಬಂದಾಗಿ 2 ವರ್ಷ ಕಳೆದಿವೆ ಇಲ್ಲಿ ದುಡಿದ ಕಾರ್ಮಕರಿಗೆ ವೇತನ,

    ಪಿ.ಎಫ್, ಗ್ರಾಚ್ಯುಟಿ, ಇ.ಸ್.ಐ ಇತರೆ ಯಾವುದೇ ಆರ್ಥಿಕ ಸೌಲಭ್ಯ ನೀಡದೆ ಕಾರ್ಖಾನೆಯ ಮಾಲಿಕರು ಪಲಾಯನ ಮಾಡಿದ್ದಾರೆ ಎಂದು ಆರೋಪಿಸಿದರು.

    ಈ ಕುರಿತು ಮಾತನಾಡಿದ ಕಾರ್ಮಿಕರ ಮುಖಂಡ ಗಜಾನನ ಮಾಳೋದೆ, ಕಾರ್ಖಾನೆಯನ್ನು ಅವಲಂಬಿಸಿದ ಸುಮಾರು 400 ಕುಟಂಬಗಳು ಬಿದಿಪಾಲಾಗಿವೆ.

    ಕಾರ್ಮಿಕರ ನೋವು, ಸಂಕಷ್ಟಕ್ಕೆ ಯಾವ ಚುನಾಯಿತ ಪ್ರತಿನಿಧಿಯಾಗಲಿ, ಕಾರ್ಮಿಕ ಇಲಾಖೆಯಾಗಲಿ ಮುಂದಾಗಿಲ್ಲ ಹಾಗಾಗಿ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
    ಬಿ.ಎಂ.ಎಸ್.ನ ಮುಖಂಡ ಭರತ ಪಾಟೀಲ, ಲಕ್ಷಣ ಉಪ್ಪಾರ, ಬಾಬು ಸಿ. ಗವಾಸ್ಕರ, ಮಹೇಂದ್ರ ಕದಂ, ರುಪಾ ಚಂದ್ರಕಾಂತ ಶಿಂಧೆ, ರೀಹಾನಾ ಇಸ್ಮಾಯಿಲ್ ಕಾರ್ಮಿಕರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts