More

    ಮತದಾನ ಬಹಿಷ್ಕಾರಕ್ಕೆ ಮುಂದಾದ ಅಮಾಸೆಬೈಲು ಗ್ರಾಮಸ್ಥರು

    ಅಮಾಸೆಬೈಲು: ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲು, ಮಜ್ನಿ, ಕೊರ್ತುಗುಂಡಿ, ದ್ಯಾಸ ಪರಿಸರದ ಮತದಾರರು ಹಲವಾರು ವರ್ಷಗಳಿಂದ ಮೂಲ ಸೌಕರ್ಯ ಸೇರಿದಂತೆ ಹಲವು ಭಿವೃದ್ಧಿ ಬೇಡಿಕೆಗಳು ಈಡೇರಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.
    ಕೆಲವು ವರ್ಷಗಳಿಂದ ಇಲ್ಲಿನ ಬಸ್ಸು ತಂಗುದಾಣ, ಒಳ ಭಾಗದ ರಸ್ತೆಗಳು, ಚರಂಡಿ, ಮೊಬೈಲ್ ನೆಟ್‌ವರ್ಕ್, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಬೇಸತ್ತು ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಬಹಿಷ್ಕರಿಸುವ ಮೂಲಕ ಹೋರಾಟಕ್ಕೆ ನಿರ್ಧಾರಿಸಿದ್ದಾರೆ.

    ಇಂದು ಅಂತಿಮ ನಿರ್ಧಾರ
    ಗ್ರಾಮದ ಸಮಸ್ಯೆಗಳು ಹಾಗೂ ಮತದಾನ ಬಹಿಷ್ಕರಿಸುವ ನಿರ್ಧಾರಗಳ ಕುರಿತು ಭಾನುವಾರ ಹೊಳೆಬಾಗಿಲು ಬಳಿ ನಡೆದ ಸಭೆಯಲ್ಲಿ ಗ್ರಾಮಸ್ಥರಾದ ವಿಜಯ ಶೆಟ್ಟಿ, ಚಂದ್ರ ಶೆಟ್ಟಿ ದ್ಯಾಸ ಮಾತನಾಡಿದರು. ವಿಕ್ರಮ ಶೆಟ್ಟಿ, ಉದಯ ಶೆಟ್ಟಿ, ಸತೀಶ, ಸಂಜೀವ ಶೆಟ್ಟಿ, ಮಂಜುನಾಥ ಶೆಟ್ಟಿ, ರಾಜೀವ ಶೆಟ್ಟಿ, ಮಂಜು ಪೂಜಾರಿ, ಮಹಿಳೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಥಳಕ್ಕೆ ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿ ಅನಿಲ್‌ಕುಮಾರ್ ನಾಯಕ್ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಮನವಿ ಪಡೆದುಕೊಂಡರು. ಚುನಾವಣೆ ಮತ ಬಹಿಷ್ಕರಿಸುವ ಕುರಿತು ಸೋಮವಾರ ಮುಂದಿನ ನಿರ್ಧಾರವನ್ನು ಕೈಗೊಳ್ಳುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts