More

    ಜೆಸ್ಕಾಂ ಅಧಿಕಾರಿಯಿಂದ ಮತದಾನ ಜಾಗೃತಿ ಗೀತೆ

    ರಾಯಚೂರು: ಕರಟಕ ದಮನಕ ಸಿನೆಮಾದ ಹಿತ್ತಲಾಕ ಕರಿಬ್ಯಾಡ ಮಾವ ಎನ್ನುವ ಹಾಡಿನ ಹಿನ್ನೆಲೆ ಸಂಗೀತವನ್ನಿಟ್ಟುಕೊಂಡು ಮತದಾನ ಜಾಗೃತಿ ಗೀತೆಯನ್ನು ಹಾಡುವ ಮೂಲಕ ಜೆಸ್ಕಾಂ ಅಧಿಕಾರಿಯೊಬ್ಬರು ಗಮನ ಸೆಳೆದಿದ್ದಾರೆ.
    ಜೆಸ್ಕಾಂ ಪ್ರಭಾರಿ ಅಧಿಕ್ಷಕ ಇಂಜಿನಿಯರ್ ಚಂದ್ರಶೇಖರ ದೇಸಾಯಿ ಸಾಹಿತ್ಯ ರಚಿಸಿ ತಾವೇ ಗೀತೆಯನ್ನು ಹಾಡಿದ್ದು, ಎಲ್ಲೆಡೆ ವೈರಲ್ ಆಗುವುದರ ಜತೆಗೆ ಪ್ರಶಂಸೆಗೆ ಕಾರಣವಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಾಡಿಗೆ ಮತ್ತಷ್ಟು ಪ್ರಾಮುಖ್ಯತೆ ಬರುವಂತಾಗಿದೆ.
    ಕೋವಿಡ್ ಸಂದರ್ಭದಲ್ಲಿ ದರ್ಶನ ಸಿನೆಮಾದ ಕಣ್ಣು ಹೊಡಿಯಾಕ ಹಾಡನ್ನು ರಿಮಿಕ್ಸ್ ಮಾಡಿ ಜನರು ಮನೆಯಿಂದ ಹೊರ ಬಾರದಂತೆ ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದ ಚಂದ್ರಶೇಖರ ದೇಸಾಯಿ, ಈಗ ಮತದಾನ ಜಾಗೃತಿಯ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ.
    ಮತದಾನದ ಮಹತ್ವವನ್ನು ಸಾರುವ ಸಾಹಿತ್ಯ ಮಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಪ್ರಗತಿಗೆ ಪ್ರತಿಯೊಬ್ಬರ ಮತ ಬಹಳ ಅಮೂಲ್ಯವಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗದಂತೆ ಮತ ಚಲಾಯಿಸಬೇಕು ಎಂದು ಹಾಡಿನ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
    ಹಾಡಿನ ವಿಡಿಯೋವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಒ ರಾಹುಲ್ ತುಕಾರಾರ್ಿ ಪಾಂಡ್ವೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಜತೆಗೆ ಅಧಿಕಾರಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts