More

    ಮತದಾನ ಜಾಗೃತಿ ಮಾಡಿದ ಸಿಇಒ ರಾಹುಲ್ ಶರಣಪ್ಪ ಸಂಕನೂರು

    ಸಿರಿಗೇರಿ: ಗ್ರಾಮದ ಸಮೀಪ ಇರುವ ಮಾಳಾಪುರ ಕೆರೆಯಲ್ಲಿ 27 ಗ್ರಾಮ ಪಂಚಾಯಿತಿಗಳು ಆಯೋಜಿಸಿದ್ದ ಮಹಾತ್ಮಾ ಗಾಂಧಿ ನರೇಗಾದಡಿಯಲ್ಲಿ ಕೂಲಿ ಕಾರ್ಮಿಕರಿಗೆ ಶುಕ್ರವಾರ ಜಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಮತದಾನದ ಜಾಗೃತಿಯನ್ನು ಸಿಇಒ ರಾಹುಲ್ ಶರಣಪ್ಪ ಸಂಕನೂರು ಪ್ರಮಾಣವಚನ ಮಾಡುವುದರ ಮೂಲಕ ಜಾಗೃತಿ ಮೂಡಿಸಿ ಮತನಾಡಿದರು.

    ಇದನ್ನೂ ಓದಿ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ

    ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ ನಿಮ್ಮ ಹಕ್ಕನ್ನು ನೀವು ಚಲಾಯಿಸಿ,ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಮತ್ತು ಅಕ್ಕ ಪಕ್ಕದ ಮನೆಯವರಿಗೆ ಮೇ10 ರಂದು ಮತದಾನ ಮಾಡುವಂತೆ ತಿಳಿಸಿ ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ ಎಂದು ತಿಳಿಸಿದರು.

    ನರೇಗಾದಲ್ಲಿ ಹೆಣ್ಣು ಗಂಡು ಎನ್ನದೇ ಒಂದೇ ರೀತಿ ಕೆಲಸ ನಿರ್ವಹಿಸುತ್ತೀರಿ ಅದೇ ರೀತಿ ಮತದಾನದ ಕೂಡ ಒಂದೇ ಎಂದು ತಿಳಿಸಿದರು.ಮತದಾನವನ್ನು ಮಾಡುವಾಗ ಯಾವುದೇ ಆಮಿಷಗಳಿಗೆ ಬಲಿಯಾಗದೇ ಸ್ವಚ್ಚವಾದ ಮತದಾನವನ್ನು ಮಾಡಿ ಎಂದು ಪ್ರಮಾಣವಚನ ಬೋದಿಸಿದರು.

    ತಾ.ಪಂ ಇಒ ಮಡಗಿನ ಬಸಪ್ಪ ಮಾತನಾಡಿ ಅಸಾಯಕರು,ವೃದ್ದರನ್ನು ಮತದಾನ ಮಾಡದೇ ಇರುವವರನ್ನು ಯುವಕರು,ಪ್ರಜ್ಞಾವಂತರು ತಿಳಿಸಿ ಬೂತ್‌ಗಳಿಗೆ ಕರೆತನ್ನಿ ಮತದಾನ ಮಾಡಿಸಿ ಎಂದು ತಿಳಿಸಿದರು. ನಂತರ ಬೀದಿ ನಾಟಕ ಗೀಗೀ ಪದಗಳು ಮೂಲಕ ಸನ್ಮಾರ್ಗ ಕಲಾ ಬಳಗ ತಂಡದಿಂದ ಮತದಾನ ಜಾಗೃತಿ ಮೂಡಿಸಿ ರಂಜಿಸಿದರು.

    ನಂತರ ಕೂಲಿ ಕಾರ್ಮಿಕರು ಅಗೆದ ಗುಂಡಿಯಲ್ಲಿ ಕರ್ನಾಟಕ ಮ್ಯಾಪ್,ತಪ್ಪದೇ ಮತದಾನ ಮಾಡಿ ಎಂದು ಬಿಡಿಸಿರುವ ರಂಗೋಲಿಯನ್ನು ವೀಕ್ಷೀಸಿದರು.

    ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕರಾದ ಪ್ರಮೋದ್,ಸಹಾಯಕ ಅಧಿಕಾರಿ ರಾಜೇಶ್ವರಿ,ಹಿರಿಯ ತೋಟಗಾರಿಕೆ ಅಧಿಕಾರಿ ಮಹೇಶ್ ಹೀರೆಮಠ,ಅರಣ್ಯ ಅಧಿಕಾರಿ ಮೆಹಬೂಬ್ ಸಾಬ್,ಪಿಡಿಒಗಳಾದ ಶಿವಕುಮಾರ್ ಕೋರಿ,ಬಸವರಾಜ್,ಸಾಕೀರ್,ಬಸವನಗೌಡ, ಐಇಸಿ ಸಂಯೋಜಕರಾದ ಸುರೇಶ್,ಟಿಸಿ,ಪ್ರದೀಪ್,ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯರಾದ ಎರ‌್ರಿಸ್ವಾಮಿ,ಮೆಹತಾಬ್,ಸತ್ಯನಾರಾಯಣ,ತಾಂತ್ರಿಕ ಸಹಾಕರು,ಬಿಎಫ್‌ಟಿ ಕಾಯಕ ಮಿತ್ರರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts