More

    ಈ ಬಾರಿಯೂ ಮತದಾರರು ಕೈಹಿಡಿಯುವರು: ಆಯನೂರು ಮಂಜುನಾಥ್ ವಿಶ್ವಾಸ

    ಭದ್ರಾವತಿ: ನೈಋತ್ಯ ಪದವೀಧರರ ಕ್ಷೇತ್ರದಿಂದ ಕಳೆದ ಬಾರಿ ಅತ್ಯಂತ ಭಾರಿ ಬಹುಮತದಿಂದ ಗೆಲುವು ಸಾಽಸಿದ್ದು ಈ ಬಾರಿಯೂ ಅವಕಾಶ ಸಿಗುವ ಭರವಸೆ ಕಾಂಗ್ರೆಸ್ ರಾಜ್ಯ ವರಿಷ್ಠರಿಂದ ಸಿಕ್ಕಿದೆ. ಚಿಹ್ನೆ ಇಲ್ಲದೆ ನಡೆಯುವ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ವಿದ್ಯಾವಂತ ಮತದಾರರು ಈ ಬಾರಿಯೂ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿರು.
    ಕಳೆದ 42 ವರ್ಷಗಳಿಂದ ಕಾರ್ಮಿಕರು, ನೌಕರರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಸದನಗಳಲ್ಲಿ ಧ್ವನಿ ಎತ್ತಿದ್ದೇನೆ. ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ನಿರ್ಭೀತಿಯಿಂದ ಮಾತನಾಡಿದ್ದೇನೆ. ಗುತ್ತಿಗೆ ನೌಕರರ ವೇತನ ಹೆಚ್ಚಲು ನನ್ನ ಶ್ರಮವಿದೆ. ಅತಿಥಿ ಉಪನ್ಯಾಸಕರ ಸಂಬಳ ೧೩ ಸಾವಿರದಿಂದ ೩೨ ಸಾವಿರ ರೂ.ಗೆ ಏರಿಕೆಯಾಗುವಂತೆ ಮಾಡಿದ್ದೇನೆ. ಕರೊನಾ ಸಂದರ್ಭದಲ್ಲಿ ಕೆಲಸ ಇಲ್ಲದ ಕಾರಣ ವೇತನ ಇಲ್ಲ ಎಂದಾಗ ಸರ್ಕಾರದ ವಿರುದ್ಧ ಬಲವಾದ ಹೋರಾಟ ಮಾಡಿ ವೇತನ ಕೊಡಿಸಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಗುತ್ತಿಗೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕು ಎಂಬ ನಿಯಮವಿದೆ. ಆದರೆ ಹೊರ ಗುತ್ತಿಗೆ ಮೂಲಕ ಸರ್ಕಾರವೇ ಜನರಿಗೆ ವಂಚನೆ ಮಾಡುತ್ತಿದೆ. ಇದನ್ನು ಮ್ಯಾನ್ ಪವರ್ ಏಜೆನ್ಸಿ ಅವರು ದುರುಪಯೋಗ ಮಾಡಿಕೊಂಡು ನೌಕರರಿಗೆ ವಂಚಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡಿದಂತೆ ಅಥಿತಿ ಶಿಕ್ಷಕರಿಗೂ ಹೆಚ್ಚಿಸಬೇಕು. ಕೇಂದ್ರ ಸರ್ಕಾರ ಆರೋಗ್ಯ ಅಭಿಯಾನದಡಿ ಕೆಲಸ ಮಾಡುತ್ತಿರುವ ನೌಕರರಿಗೆ ಸಹ ವೇತನ ಹೆಚ್ಚಳ ಮಾಡಿಸಿದ್ದೇನೆ. ಕೆಲಸದ ಅವಽಯನ್ನು ಯಾವುದೋ ಒಂದು ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ೮ ಗಂಟೆ ಇದ್ದಿದ್ದು ೧೨ ಗಂಟೆಗೆ ಮಾಡಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿ ಅದನ್ನು ೮ ಗಂಟೆಗೆ ನಿಗದಿಪಡಿಸುವಲ್ಲಿ ನನ್ನ ಪಾತ್ರವಿದೆ ಎಂದರು.
    ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳಾ, ಸ್ಥಾಯಿ ಸಮಿತಿ ಸದಸ್ಯ ಕಾಂತರಾಜ್, ಸದಸ್ಯರಾದ ಬಿ.ಕೆ.ಮೋಹನ್, ಚನ್ನಪ್ಪ, ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಎಸ್.ಕುಮಾರ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಮಣಿಶೇಖರ್ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts