More

    ಅರ್ಹ ಯುವ ಮತದಾರರ ಹೆಸರು ಸೇರ್ಪಡೆಗೆ ಕ್ರಮ ವಹಿಸಿ: ಜಿಲ್ಲಾ ಚುನಾವಣಾಧಿಕಾರಿಗಳು

    ಗದಗ: ಜಿಲ್ಲೆಯಲ್ಲಿನ ಪಿಯು ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿನ  17 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳ ಹೆಸರುಗಳನ್ನು ವೋಟರ್ ಹೆಲ್ಪ್‍ಲೈನ್ ಆಪ್‍ನಲ್ಲಿ  ಫಾರ್ಮ 6 ಮೂಲಕ ದಾಖಲಿಸಬೇಕು.  ಹಾಗೆಯೇ  18  ವರ್ಷ ಪೂರ್ಣಗೊಂಡ  ಅರ್ಹ ಯುವ ಮತದಾರರ   ಹೆಸರು ಮತದಾರರ ಯಾದಿಗಳಲ್ಲಿ ಹೆಸರು ಇಲ್ಲದವರು ತಮ್ಮ ಹೆಸರುಗಳನ್ನು ನಮೂನೆ 6 ರಲ್ಲಿ ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಯುವ ಮತದಾರರ ನೊಂದಣಿ  ಕುರಿತು ಜಿಲ್ಲೆಯ ಪಿಯು ಕಾಲೇಜು, ಪದವಿ ಕಾಲೇಜು, ಇಂಜನೀಯರಿಂಗ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರೊಂದಿಗೆ ಸಭೆ ಜರುಗಿಸಿ ಮಾತನಾಡಿದರು. ವೋಟರ್ ಹೆಲ್ಪಲೈನ್ ಆಪ್‍ನಲ್ಲಿ  ಈಗಾಗಲೇ ಹೆಸರು ದಾಖಲಿಸಿದ ಹಾಗೂ ಬಾಕಿ ಉಳಿದ ಕಾಲೇಜಿನ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದು  ಮಾತನಾಡಿದರು.

    ಆಯಾ ಕಾಲೇಜುಗಳಲ್ಲಿ 17 ವರ್ಷ ತುಂಬಿದ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ  ಜನ್ಮ ದಿನಾಂಕದ ದಾಖಲೆ ಸೇರಿದಂತೆ  ಸರಿಯಾದ ದಾಖಲೆಗಳನ್ನು ತರಿಸಿಕೊಂಡು ಹೆಸರು ದಾಖಲಿಸಬೇಕು.  ಯಾವೊಬ್ಬ ಅರ್ಹ ಯುವ ಮತದಾರರ ಹೆಸರು ಬಿಟ್ಟುಹೋಗದಂತೆ ಕಾಲೇಜಿನ ಮುಖ್ಯಸ್ಥರು ಕ್ರಮ ವಹಿಸಬೇಕೆಂದರು. ನವೆಂಬರ್ 23 ರೊಳಗೆ ಹೆಸರು ಅಪ್‍ಲೋಡ್ ಮಾಡುವ ಕಾರ್ಯ ಪೂರ್ಣಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಬಾರದು ಎಂದು  ಕಾಲೇಜಿನ ಮುಖ್ಯಸ್ಥರಿಗೆ ಸೂಚಿಸಿದರು.  

    ಗದಗ  ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ  ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ, 67-ರೋಣ ಮತ್ತು 68-ನರಗುಂದ ನೇದ್ದವುಗಳಿಗೆ ಸಂಬಂಧಿಸಿದಂತೆ ಕರಡು ಮತದಾರರ ಯಾದಿಗಳನ್ನು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್  www.ceokarnataka.kar.nic.in www.ceokarnataka.kar.nic.in  ನೇದ್ದರಲ್ಲಿ  ಈಗಾಗಲೇ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

    ದಿನಾಂಕ: 01-01-2024 ಕ್ಕೆ ಇರುವಂತೆ 18 ವರ್ಷ ವಯಸ್ಸು ಪೂರ್ಣಗೊಂಡಿರುವವರು ಮತದಾರರ ಯಾದಿಗಳಲ್ಲಿ ಹೆಸರು ಇಲ್ಲದವರು ಈ ಅವಧಿಯಲ್ಲಿ ತಮ್ಮ ಹೆಸರುಗಳನ್ನು ನಮೂನೆ ನಂ. 6 ರಲ್ಲಿ ಸಲ್ಲಿಸಬಹುದು ಹಾಗೂ 2024 ನೇ ವರ್ಷದ ಅರ್ಹತಾ ದಿನಾಂಕಗಳಾದ 1ನೇ ಏಪ್ರಿಲ್, 2024, 1ನೇ ಜುಲೈ, 2024 ಅಥವಾ 1ನೇ ಅಕ್ಟೋಬರ್, 2024 ನೇದ್ದಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು, ಕರಡು ಮತದಾರ ಪಟ್ಟಿ ಪ್ರಕಟಣೆ ದಿನಾಂಕದಿಂದ ನಮೂನೆ 6 ರಲ್ಲಿ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇಂತಹ ಅರ್ಜಿಗಳನ್ನು ಆಯಾ ತ್ರೈಮಾಸಿಕಗಳಲ್ಲಿ ಅರ್ಹತೆಯನ್ನು ಪರಿಶೀಲಿಸಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲಾಗುವುದು. ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಲು ನಮೂನೆ 6 ರಲ್ಲಿ ಅರ್ಜಿಸಲ್ಲಿಸುವ ಅರ್ಜಿದಾರನು ಅರ್ಜಿಗೆ ಇತ್ತೀಚಿನ ಪಾಸ್ಪೋರ್ಟ ಸೈಜ್ ಪೆÇೀಟೋ ಹಾಗೂ ವಿಳಾಸದ ಬಗ್ಗೆ ದಾಖಲೆಗಳು ಹಾಗೂ ವಯಸ್ಸಿನ ಬಗ್ಗೆ ದಾಖಲೆಗಳನ್ನು ನೀಡಲು ತಿಳಿಸಲಾಗಿದೆ.    

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ನಿರ್ಮಲಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ವಿವಿಧ ಪಿಯು ಕಾಲೇಜು, ಪದವಿ ಕಾಲೇಜು, ಇಂಜನೀಯರಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಜರಿದ್ದರು.     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts