More

    ನಕಲಿ ಮತದಾರರಿಂದ ಗೆಲ್ಲುವ ತಂತ್ರ ಬುಡಮೇಲು, ಕಾಂಗ್ರೆಸ್​ಗೆ ಆತಂಕ: ಸಿಎಂ ಬಸವರಾಜ ಬೊಮ್ಮಾಯಿ‌ ಚಾಟಿ

    ಬೆಂಗಳೂರು: ನಕಲಿ ಮತದಾರರನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆಲ್ಲುವ ತಂತ್ರ ಬುಡಮೇಲು ಆಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಆತಂಕಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಚಾಟಿ ಬೀಸಿದರು.

    ಕಾವೇರಿ ನಿವಾಸದ ಬಳಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ಮತದಾರರನ್ನು ಪತ್ತೆ ಹಚ್ಚುವ ಕಾರ್ಯ ಚುನಾವಣಾ ಆಯೋಗ ಕೈಗೆತ್ತಿಕೊಂಡಿದೆ. ಎಲ್ಲೋ ಆಂಧ್ರ, ತಮಿಳುನಾಡಿನಲ್ಲಿ ಇದ್ದುಕೊಂಡು ಇಲ್ಲಿ ಹೆಸರು ನೋಂದಣಿ, ಎರಡೆರಡು ಕಡೆ ಹೆಸರು, ತಪ್ಪು ವಿಳಾಸ ಮುಂತಾದ ದೋಷಗಳು ಆಯಾ ಮತದಾರರ ಭಾವಚಿತ್ರ ಹಾಕಿದ ತಕ್ಷಣ ಪತ್ತೆಯಾಗಲಿದ್ದು, ನಕಲಿ ಮತದಾರರು ಹೊರಬೀಳಲಿದ್ದಾರೆ. ಇದು, ಕಾಂಗ್ರೆಸ್ ನ ದಿಗಿಲಿಗೆ ಮೂಲ ಕಾರಣ. ಈ ಹಿನ್ನೆಲೆಯಲ್ಲಿ ಮತದಾರರ ಮಾಹಿತಿ ಕಳವಿನಂತಹ ದೊಡ್ಡ ಹಗರಣ ಬಯಲಿಗೆ ಎಳೆದಿದ್ದೇವೆ ಎಂದು ಬೀಗುತ್ತಿರುವ ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ ಕಾದುನೋಡಿ.

    ಅಜಗಜಾಂತರ
    ಮತದಾರರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ಚಿಗುರು ಸಂಸ್ಥೆಗೆ ಒಪ್ಪಿಸಿದ್ದು, ಯಾವುದೇ ರಾಜಕೀಯ ಪಕ್ಷಗಳ ಜತೆಗೆ ಸಂಬಂಧ ಹೊಂದಿರಬಾರದು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೇ ಸಂಸ್ಥೆಗೆ‌ 2017ರಲ್ಲಿ ಇದೇ ಸಂಸ್ಥೆಗೆ ಆದೇಶ ನೀಡಿ ಮತದಾರರ ಯಾದಿ ಪರಿಷ್ಕರಣೆಗೆ ಅವಕಾಶ ಕೊಟ್ಟಿದ್ದು, ಚುನಾವಣಾ ಆಯೋಗ ಮಾಡಬೇಕಾದ ಕೆಲಸವನ್ನು ಒಪ್ಪಿಸಿರುವುದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ 2013ರಿಂದಲೂ ಸಮಗ್ರ ತನಿಖೆಗೆ ಸೂಚಿಸಿದ್ದು, ನಿಜಾಂಶ ಬಯಲಾಗಲಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಮಂಗಳೂರು ಆಟೋ ಸ್ಫೋಟ ಪ್ರಕರಣ: ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ ಪ್ರವೀಣ್ ಸೂದ್

    ಬಿಜೆಪಿ ಮಾಜಿ ಸಚಿವರ ಕಾರನ್ನು ಅಡ್ಡಗಟ್ಟಿದ ಟೀ ವ್ಯಾಪಾರಿ: ಬಾಕಿ ಹಣ ಕೊಟ್ಟು ತೆರಳುವಂತೆ ಪಟ್ಟು, ವಿಡಿಯೋ ವೈರಲ್​

    ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ಮೂಲವ್ಯಾಧಿ ದೂರ; ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಕ್ಯಾನ್ಸರ್ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts