More

    ನೀವು ಮತದಾನ ಮಾಡಿ ಇತರರಿಗೂ ಜಾಗೃತಿ ಮೂಡಿಸಿ

    ಮೂಡಿಗೆರೆ: ಯಾವುದೇ ಆಸೆಗೆಒಳಗಾಗದೆ 18ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ತಾಪಂ ಇಒ ದಯಾವತಿ ಹೇಳಿದರು.
    ಶುಕ್ರವಾರ ತಾಪಂ ಕಚೇರಿ ಆವರಣದಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ನಡೆದ ಮತದಾನ ಜಾಗೃತಿ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏ. 26ರಂದು ಆಯಾ ಗ್ರಾಮದ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದರು.
    18 ವರ್ಷ ತುಂಬಿದ ಯುವ ಸಮೂಹ ಮೊದಲ ಮತದಾನ ಮಾಡುವ ಸಂಭ್ರಮದಲ್ಲಿ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ ನಂತರ ಗ್ರಾಮದ ಇತರ ಮತದಾರರಿಗೆ ಕಡ್ಡಾಯ ಮತದಾನದ ಬಗ್ಗೆ ತಿಳಿಹೇಳುವ ಕೆಲಸ ಮಾಡಿದರೆ ಮತದಾನದ ಶೇಕಡವಾರು ಪ್ರಮಾಣದಲ್ಲಿ ಏರಿಕೆಯಾಗಲಿದೆ. ಶೇ.100ರಷ್ಟು ಮತದಾನವಾದರೆ ಚುನಾವಣಾ ಆಯೋಗ ಮಾಡಿದ ಪ್ರಯತ್ನಕ್ಕೆ ಯಶಸ್ಸು ದೊರೆಯುತ್ತದೆ ಎಂದು ತಿಳಿಸಿದರು.
    ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತ್ರಿಪಡಿಸಿಕೊಳ್ಳಲು ವೋಟರ್ ಹೆಲ್ಪ್ ಲೈನ್ ಆ್ಯಫ್ ಮೂಲಕ ಪರಿಶೀಲನೆ ನಡೆಸಬಹುದಾಗಿದೆ. ಹಣ ಅಥವಾ ಇತರೆ ಯಾವುದೆ ಬೆಲೆ ಬಾಳುವ ವಸ್ತು ಮತದಾರಿಗೆ ಹಂಚುತ್ತಿರುವುದು ಕಂಡು ಬಂದರೆ 1905ಕ್ಕೆ ಕರೆ ಮಾಡಿ ತಿಳಿಸಿದರೆ ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
    ಬಿದರಹಳ್ಳಿ ಪಿಡಿಒ ದುಗ್ಗಮ್ಮ, ಕಿರುಗುಂದ ಪಿಡಿಒ ಸಾಹಿತ್ಯ, ಚಿನ್ನಿಗ ಪಿಡಿಒ ಪುನರ್ವ, ಪ್ರಶಾಂತ್ ಆಮಿನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts