More

    ವೃತ್ತಿ ಆಧಾರಿತ ಶಿಕ್ಷಣ ಜಾರಿಗೆ ಬರಲಿ: ಮಾನ್ವಿ ಕರೂರು ಅಭಿಮತ

    ಸಾಗರ: ಇಂದಿನ ಶಿಕ್ಷಣ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆ ಆಗುತ್ತಿದೆಯೇ ಹೊರತು ಜೀವನಕ್ಕೊಂದು ಮೌಲ್ಯ ನೀಡುತ್ತಿಲ್ಲ. ಮಹಾತ್ಮ ಗಾಂಽÃಜಿ ಕಂಡ ಗ್ರಾಮ ರಾಜ್ಯದ ಮೂಲ ಕಲ್ಪನೆಯಿಂದಲೂ ದೂರ ಸರಿಯುತ್ತಿದ್ದೇವೆ. ವೃತ್ತಿ ಆಧಾರಿತ ಶಿಕ್ಷಣ ಕ್ರಮ ಜಾರಿಯಾಗದಿದ್ದರೆ ಮಾನವ ಸಂಪನ್ಮೂಲದ ಸದ್ಬಳಕೆ ಆಗುವುದಿಲ್ಲ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಪಿ.ಮಾನ್ವಿ ಕರೂರು ಅಭಿಪ್ರಾಯಪಟ್ಟರು.
    ಉಳ್ಳೂರಿನ ಶ್ರೀ ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಾಗರ ತಾಲೂಕು ಘಟಕದಿಂದ ಬುಧವಾರ ಆಯೋಜಿಸಿದ್ದ ಸಾಗರ ತಾಲೂಕು ಮಟ್ಟದ ೧೨ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮಂಕಳಲೆ ಸಂತ ಜೋಸೆ-ï ಆಂಗ್ಲಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕೆ.ಪಿ.ಮಾನ್ವಿ ಕರೂರು ೧೨ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಡಿಸಿದ ಅಧ್ಯಕ್ಷರ ಭಾಷಣ ಮನೋಜ್ಞವಾಗಿ ಮೂಡಿಬಂದಿತಲ್ಲದೆ ಮಕ್ಕಳು, ಸಾಹಿತ್ಯಾಸಕ್ತರನ್ನು ಸೆಳೆಯುಲ್ಲಿ ಯಶಸ್ವಿಯಾಯಿತು.
    ಹಿರಿಯ ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ಹಿರಿಯರನ್ನು ಅನುಸರಿಸಿ ಮಕ್ಕಳು ತಮ್ಮ ಬದುಕಿನ ವ್ಯವಹಾರವನ್ನು ಮುನ್ನಡೆಸುತ್ತಾರೆ. ಆದರೆ ಈಗಿನ ಮಕ್ಕಳು ತಮ್ಮ ಜವಾಬ್ದಾರಿ ಅರಿತು ಮುನ್ನಡೆಯುತ್ತಿದ್ದಾರೆ. ಮಕ್ಕಳು ಪಾಲಕರ ಪ್ರತಿಬಿಂಬವಿದ್ದAತೆ. ಹಾಗಾಗಿ ಹಿರಿಯರು ಸದಾ ಎಚ್ಚರ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು. ಆಡಂಬರದ ಬದುಕಿಗಿಂತ ಸರಳ, ವಿಧೇಯರಾಗಿ ಬದುಕುವುದೇ ಶ್ರೇಷ್ಠ. ಕನ್ನಡದ ಮನಸ್ಸುಗಳನ್ನು ಮನುಷ್ಯತ್ವದ ಮೂಲಕ ಕಟ್ಟುವ ಕೆಲಸಕ್ಕೆ ಇಂತಹ ಸಮ್ಮೇಳನಗಳು ಸಾಕ್ಷಿಯಾಗುತ್ತವೆ ಎಂದರು.
    ತಾಲೂಕು ಕಾಸಪ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನಗಳು ತಾಲೂಕಿನಿಂದ ರಾಜ್ಯ ಮಟ್ಟದವರೆಗೆ ನಡೆಯುತ್ತಿವೆ. ಈಗಾಗಲೇ ೧೫ ಮಕ್ಕಳ ಸಾಹಿತ್ಯ ಸಮ್ಮೇಳನಗಳು ರಾಜ್ಯಮಟ್ಟದಲ್ಲಿ ನಡೆದಿದ್ದು, ಇದರಲ್ಲಿ ೯ ಸಮ್ಮೇಳನಗಳಿಗೆ ಸಾಗರ ತಾಲೂಕಿನ ಮಕ್ಕಳು ಅಧ್ಯಕ್ಷರಾಗಿರುವುದು ನಮ್ಮ ಹೆಗ್ಗಳಿಕೆ ಎಂದರು.
    ಸಿಗAದೂರೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಬಿಳಗಲ್ಲೂರು ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕು. ಪ್ರಜಾಪ್ರಭುತ್ವ ಎನ್ನುವುದು ನಮ್ಮ ದೇಶದ ಗಟ್ಟಿತನ ಮತ್ತು ಸಾಮರ್ಥ್ಯವನ್ನು ಪ್ರಪಂಚಕ್ಕೆ ಪರಿಚಯಿಸಿದೆ. ಸಂವಿಧಾನದ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.
    ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕಸ್ತೂರಿ ಸಾಗರ್, ಮಾಜಿ ಸಮ್ಮೇಳನಾಧ್ಯಕ್ಷೆ ರಕ್ಷಿತಾ ಪಿ.ಕೆಲುವೆ, ಸಮ್ಮೇಳನದ ಉದ್ಘಾಟಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನ್ಯಾ, ಉಳ್ಳೂರು ಗ್ರಾಪಂ ಅಧ್ಯಕ್ಷೆ ಲೀಲಾವತಿ, ತಿರುಮಲೇಶ್, ಬಿಇಒ ಇ.ಪರಶುರಾಮಪ್ಪ, ಡಾ. ಅನ್ನಪೂರ್ಣ, ಮಹಾಬಲೇಶ್ವರ್, ಲಕ್ಷ÷್ಮಣ ನಾಯಕ, ಜಗನ್ನಾಥ್, ಜಿ.ಪರಮೇಶ್ವರಪ್ಪ, ಥೆರೇಜಾ, ಸತ್ಯನಾರಾಯಣ ಶಿರವಂತೆ, ಚಂದ್ರಶೇಖರ್, ಶ್ರೀಕಾಂತ್ ಇತರರಿದ್ದರು.
    ಮಕ್ಕಳಿಗಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಕುರಿತು ಪ್ರಬಂಧ, ಕಥೆ, ಕವನ ಸ್ಪರ್ಧೆಗಳು ನಡೆದವು. ಸಭಾ ಕಾರ್ಯಕ್ರಮದ ನಂತರ ಶಿಕ್ಷಣದ ಸವಾಲುಗಳು, ಪರಿಣಾಮಕಾರಿ ಪಠ್ಯಕ್ರಮ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಮುದಾಯಗಳ ಪಾತ್ರ, ಮಾರಕವಾಗುತ್ತಿರುವ ಸಾಮಾಜಿಕ ಜಾಲತಾಣ ಕುರಿತು ಗೋಷ್ಠಿಗಳು ನಡೆದವು. ವಿದ್ಯಾರ್ಥಿಗಳಾದ ಅಽಪ ಎ.ಗುಜ್ಜರ್, ಡಿ.ಪ್ರಾರ್ಥನಾ, ಬಿಂದುಶ್ರೀ, ಅನುಷಾ ವಿಷಯ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಎಚ್.ಎಸ್.ದೀಪಕ್ ವಹಿಸಿದ್ದರು.

    ಶಾಲಾ ಪಠ್ಯಕ್ಕೆ ರಾಜಕೀಯ ಬೇಡ
    ಜಾತಿ, ಧರ್ಮ, ಪಂಥ, ಪಂಗಡ ಎಲ್ಲವನ್ನು ಮೀರಿ ಮನುಷ್ಯತ್ವ, ಮಾನವತ್ವದೆಡೆಗೆ ಸಾಗುತ್ತಿರುವ ನಾವು ಇತ್ತೀಚಿನ ದಿನಗಳಲ್ಲಿ ಪಠ್ಯ ರಚನೆಯಲ್ಲಿಯೂ ವಿಷ ಬೀಜಗಳನ್ನು ಬಿತ್ತಿ ನಮ್ಮೊಳಗೆ ಆತಂಕ ಸೃಷ್ಟಿಸುವ ಮನಸ್ಸುಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಪಠ್ಯ ಪುಸ್ತಕ ಸಮಸ್ಯೆಯ ಗೊಂದಲ ಎಲ್ಲರಿಗೂ ಬೇಸರ ತಂದಿದೆ. ಪಠ್ಯ ಪುಸ್ತಕ ರಚನೆಗೆ ಒಂದು ಸ್ವತಂತ್ರವಾದ ಸಮಿತಿ ಅಥವಾ ಆಯೋಗ ರಚನೆಯಾಗಬೇಕು ಎಂದು ಮಾನ್ವಿ ಕರೂರು ಒತ್ತಾಯಿಸಿದರು.
    ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಬರೇ ಮನವಿಯಾಗಿ ಉಳಿಯುತ್ತಿವೆಯೇ ಹೊರತು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರ ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೆ ತರಬೇಕು. ಸರ್ಕಾರ ನಮ್ಮ ಭಾವನೆಗಳಿಗೂ ಬೆಲೆ ಕೊಡಬೇಕು. ಮಕ್ಕಳಿಗಾಗಿ ಬರೆದ ಸಾಹಿತ್ಯ ಮತ್ತು ಮಕ್ಕಳೇ ರಚಿಸಿದ ಸಾಹಿತ್ಯವನ್ನು ಪ್ರಕಟಿಸಲು ಸರ್ಕಾರ ಧನ ಸಹಾಯ ನೀಡುವಂತೆ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts