More

    ರಷ್ಯಾ ಅಧ್ಯಕ್ಷರಿಗೆ ಗಂಭೀರ ಕಾಯಿಲೆ? ಜನವರಿಯಲ್ಲೇ ರಾಜೀನಾಮೆ ನೀಡಲಿದ್ದಾರಂತೆ ಪುತಿನ್​ !

    ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರ ಅವಧಿ 2024ಕ್ಕೆ ಮುಕ್ತಾಯವಾಗಲಿತ್ತು. ಆದರೆ 2036ರವರೆಗೂ ಅವರೇ ಅಧ್ಯಕ್ಷರಾಗಿ ಮುಂದುವರಿಯಲು ರಷ್ಯಾ ಜನತೆ ಮತಕೂಡ ಚಲಾಯಿಸಿತ್ತು. ಆದರೆ ಪುತಿನ್​ 2024ರವರೆಗೂ ಮುಂದುವರಿಯುವುದು ಅನುಮಾನ, ಮುಂಬರುವ ಜನವರಿಯಲ್ಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

    ರಷ್ಯಾ ಅಧ್ಯಕ್ಷ ಪುತಿನ್​ ಪಾರ್ಕಿನ್​ಸನ್​ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ರೋಗದ ಲಕ್ಷಣಗಳು ಈಗಾಗಲೇ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಕುಟುಂಬದವರು ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾರಣವನ್ನೇ ಹೇಳದೆ ಮೂವರು ಸೋದರಿಯರ ಮದುವೆಯಾದವನಿಗೆ ‘ಕರ್ವಾ ಚೌತ್’ ಸಂಭ್ರಮ​

    ಪುತಿನ್​ಗೆ 68 ವರ್ಷ. ಅವರ 37ವರ್ಷದ ಗೆಳತಿ ಅಲೀನಾ ಕಬೈವಾ ಮತ್ತು ಇಬ್ಬರು ಹೆಣ್ಣುಮಕ್ಕಳು ನಿವೃತ್ತಿ ಪಡೆಯುವಂತೆ ಪುತಿನ್​ಗೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಸ್ಕೋ ರಾಜಕೀಯ ವಿಜ್ಞಾನಿ ವ್ಯಾಲೆರಿ ಸೊಲೊವಿ ತಿಳಿಸಿದ್ದಾರೆ ಎಂದು ನ್ಯೂಯಾರ್ಕ್​ ಪೋಸ್ಟ್​ ಉಲ್ಲೇಖಿಸಿದೆ.

    ಪುತಿನ್​ ಪಾರ್ಕಿನ್​ಸನ್​ ರೋಗದಿಂದ ಬಳಲುತ್ತಿದ್ದಾರೆ. ಅದಾಗಲೇ ಕೆಲವು ಲಕ್ಷಣಗಳು ಅವರಲ್ಲಿ ಗೋಚರಿಸುತ್ತಿವೆ.
    ಇತ್ತೀಚೆಗೆ ಅವರ ಕಾಲುಗಳು ನಡುಗುತ್ತಿರುತ್ತವೆ. ಖುರ್ಚಿಯ ಕೈಯಗಳ ಮೇಲೆ ತಮ್ಮ ಕೈಗಳನ್ನು ಇಟ್ಟಾಗ ಅವರಿಗೆ ನೋವಾಗುತ್ತದೆ ಎಂಬುದನ್ನು ಹಲವರು ಗಮನಿಸಿದ್ದಾರೆ. ಕೈಬೆರಳುಗಳಲ್ಲೂ ಸೆಳೆತ ಶುರುವಾಗಿದ್ದು, ಪುತಿನ್​ ಪೆನ್​ ಹಿಡಿದಾಗ ಬದಲಾವಣೆ ಗೊತ್ತಾಗುತ್ತದೆ ಎಂದು ಸನ್​ ಮಾಧ್ಯಮ ವರದಿ ಮಾಡಿದೆ.

    ಆದರೆ ರಷ್ಯಾ ಅಧ್ಯಕ್ಷರ ಕಚೇರಿ ಈ ವರದಿಯನ್ನು ತಳ್ಳಿಹಾಕಿದೆ. ವ್ಲಾದಿಮಿರ್ ಪುತಿನ್​ ಯಾವುದೇ ಕಾಯಿಲೆಯಿಂದಲೂ ಬಳಲುತ್ತಿಲ್ಲ ಎಂದು ತಿಳಿಸಿದೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಗೆಲುವಿನ ಸನಿಹದಲ್ಲಿದ್ದಾರೆ ಬಿಡೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts