More

    ಮೂಡಿಗೆರೆ ಟಿಎಪಿಸಿಎಂಎಸ್ ಅವ್ಯವಹಾರ ಲೋಕಾಯುಕ್ತಕ್ಕೆ ದೂರು

    ಮೂಡಿಗೆರೆ: ಟಿಎಪಿಸಿಎಂಎಸ್​ನಲ್ಲಿ 10 ವರ್ಷದಿಂದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಬೆಂಬಲಿಗರು ಅವ್ಯವಹಾರ ನಡೆಸಿರುವುದು ಆಂತರಿಕ ತನಿಖೆಯಿಂದ ಬೆಳಕಿಗೆ ಬಂದಿದ್ದು, ಶೀಘ್ರದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಆಧ್ಯಕ್ಷ ವಿ.ಕೆ.ಶಿವೇಗೌಡ ಹೇಳಿದರು.

    ಚಂದ್ರೇಗೌಡ ಬಡಾವಣೆ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ 6 ಲಕ್ಷ ರೂ. ಅನುದಾನ ಪಡೆದು ರಸ್ತೆ ನಿರ್ವಿುಸದೆ ವಂಚಿಸಿದ್ದಾರೆ. 1.17 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗಿರುವ ರೈತ ಭವನ, ಇಂಟರ್​ಲಾಕ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ರೈತಭವನ ಆವರಣದಲ್ಲಿ ನಿರ್ವಿುಸಿರುವ 5 ವಾಣಿಜ್ಯ ಮಳಿಗೆಯನ್ನು ವಾರ್ಷಿಕ 25 ಸಾವಿರ ಬಾಡಿಗೆಗೆ ಕೇಳಿದರೂ ಮಾಜಿ ಅಧ್ಯಕ್ಷರು ಸಂಸ್ಥೆಗೆ ವಾರ್ಷಿಕ 36 ಲಕ್ಷ ರೂ. ನಷ್ಟವಾಗುವಂತೆ ಮಾಡಿದ್ದಾರೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಮಾಜಿ ಅಧ್ಯಕ್ಷ ಎಂ.ಆರ್.ಜಗದೀಶ್ ಮಾತನಾಡಿ, ಕಾಮಗಾರಿಗೆ ಬಳಸಿದ ಸಲಕರಣೆಗಳಿಗೆ ಅಧಿಕ ಮೊತ್ತದ ಬಿಲ್ ಹಾಕಿ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ. 1.17 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಯಲ್ಲಿ ಕನಿಷ್ಟ 35ಲಕ್ಷ ರೂ. ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಿಇಒ ರಾಮಕೃಷ್ಣ 3 ಬಾರಿ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಹೇಳದರು. ಮಾಜಿ ನಿರ್ದೇಶಕ ಒ.ಜಿ.ರವಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts