More

    ವಿವೇಕರು ಪ್ರಭಾಶಾಲಿ ತತ್ವಜ್ಞಾನಿ

    ಮಹಾಲಿಂಗಪುರ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ಅಮೂಲ್ಯ ಆಲೋಚನೆ ಮತ್ತು ಸ್ಫೂರ್ತಿದಾಯಕ ಮಾತುಗಳಿಂದ ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ಈ ಕಾರಣಕ್ಕಾಗಿಯೇ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ನವಚೇತನ ಶಿಕ್ಷಣ ಸಂಸ್ಥೆಯ ಜೇಸಿ ಇಂಗ್ಲಿಷ್ ಮಿಡಿಯಂ ಸ್ಕೂಲ್ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು.

    ಪಟ್ಟಣದ ಜೇಸಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಶುಕ್ರವಾರ ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

    ತಮ್ಮ ಸಮಕಾಲಿನ ಭಾರತದಲ್ಲಿ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿ ಮತ್ತು ಸಮಾಜ ಸುಧಾಕರಾಗಿದ್ದರು ಎಂದರು. ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಮಾತನಾಡಿದರು. ಇದಕ್ಕೂ ಮುಂಚೆ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆ ನಡೆಯಿತು.

    ಸಂಸ್ಥೆ ಅಧ್ಯಕ್ಷ ಶಾಂತಿಲಾಲ ಪಟೇಲ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಅನೇಕ ವಿದ್ಯಾರ್ಥಿಗಳು ವಿವೇಕಾನಂದರ ಕುರಿತು ಮಾತನಾಡಿದರು.

    ಸಂಸ್ಥೆಯ ಸದಸ್ಯರಾದ ಈಶ್ವರ ಮುರಗೋಡ, ರಾಜು ಘಟ್ಟೆಪ್ಪನವರ, ಪ್ರಿನ್ಸಿಪಾಲ ಎಸ್.ಜಿ. ಕೌಜಲಗಿ, ವಿದ್ಯಾರ್ಥಿ ಪ್ರತಿನಿಧಿ ಜಗದೀಶ ನಾಗನೂರ, ಕಾನಿಪ ಸಂಘದ ಜಿಲ್ಲಾ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಪತ್ರಕರ್ತರಾದ ಮಹೇಶ ಆರಿ, ಮೀರಾ ತಟಗಾರ ಇತರರಿದ್ದರು.

    ಶಿಕ್ಷಕ ನಾರಣಗೌಡ ಉತ್ತಂಗಿ ಸ್ವಾಗತಿಸಿದರು. ಪಲ್ಲವಿ ಸಿಂಗಾಡಿ, ತನ್ಸುಮ್ ಮುಲ್ಲಾ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts