More

    ಕೊನೆಗೂ ಸ್ವದೇಶಕ್ಕೆ ಪ್ರಯಾಣ ಆರಂಭಿಸಿದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್

    ಚೆನ್ನೈ:ಲಾಕ್​ಡೌನ್​​ನಿಂದಾಗಿ ಮೂರು ತಿಂಗಳು ಜರ್ಮನಿಯಲ್ಲೇ ಉಳಿದಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಕೊನೆಗೂ ಶನಿವಾರ ಸ್ವದೇಶಕ್ಕೆ ಆಗಮಿಸಲಿದ್ದಾರೆ.
    ಆನಂದ್ ಇಂದು ಹಿಂದಿರುಗಲಿದ್ದಾರೆ ಎಂದು ಅವರ ಪತ್ನಿ ಅರುಣಾ ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ.
    ಆನಂದ್ ಶುಕ್ರವಾರ ರಾತ್ರಿ ಫ್ರಾಂಕ್‌ಫರ್ಟ್‌ನಿಂದ ವಿಮಾನಯಾನ ಆರಂಭಿಸಿ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಶನಿವಾರ ಮಧ್ಯಾಹ್ನ ಆಗಮಿಸುವ ನಿರೀಕ್ಷೆ ಇದೆ. ಜರ್ಮನಿಯಿಂದ ಬರುವ ವಿಮಾನಗಳು ದೆಹಲಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಇಳಿಯಲಿವೆ. ಆದ್ದರಿಂದ ಬೆಂಗಳೂರಿಗೆ ಬಂದ ಮೇಲೆ ವಿಶ್ವನಾಥನ್ ಕರ್ನಾಟಕ ರಾಜ್ಯದ ನಿಯಮಾನುಸಾರ 14 ದಿನ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಚೆನ್ನೈಗೆ ಬರುತ್ತಾರೆ” ಎಂದು ಅರುಣಾ ಆನಂದ್ ತಿಳಿಸಿದ್ದಾರೆ.

    ಇದನ್ನೂ ಓದಿ: ಟಿವಿ, ರೇಡಿಯೋದಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಿ; ಮಹಾರಾಷ್ಟ್ರ ಶಿಕ್ಷಣ ಸಚಿವೆ

    ಬಂಡೆಸ್ಲಿಗಾ ಚೆಸ್ ಲೀಗ್‌ನಲ್ಲಿ ಆಡಲು ಜರ್ಮನಿಗೆ ತೆರಳಿದ್ದ ವಿಶ್ವನಾಥನ್ ಭಾರತಕ್ಕೆ ಮರಳಬೇಕಾಗಿತ್ತು, ಆದರೆ COVID-19 ನಿಂದಾಗಿ ಕ್ರೀಡಾ ವೇಳಾಪಟ್ಟಿಗೂ ಅಡೆತಡೆಯಾಗಿ ಅವರು ಅಲ್ಲಿಯೇ ಉಳಿದುಕೊಳ್ಳುವಂತಾಗಿತ್ತು.
    ಅವರು ಫ್ರಾಂಕ್‌ಫರ್ಟ್ ಬಳಿ ತಂಗಿದ್ದರು.ಈ ತಿಂಗಳ ಆರಂಭದಲ್ಲಿ ಆನ್‌ಲೈನ್ ನೇಷನ್ಸ್ ಕಪ್‌ ಸ್ಪರ್ಧೆಯಲ್ಲಿ ಭಾರತದ ತಂಡದ ನೇತೃತ್ವ ವಹಿಸಿದ್ದರು. ಕೋವಿಡ್ -19 ಲಾಕ್​​​ಡೌನ್​​ನಿಂದಾಗಿ ಜರ್ಮನಿಯಲ್ಲೇ ಸಿಲುಕಿದ್ದ ಆನಂದ್ ಅವರು ಚೆನ್ನೈನಲ್ಲಿರುವ ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದರು.

    ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts