More

    ವರ್ಷಾಂತ್ಯಕ್ಕೆ ನಂದಿಬೆಟ್ಟದಲ್ಲಿ ಸಂಭ್ರಮಿಸುವ ಆಸೆ ಇಟ್ಟುಕೊಂಡಿದ್ದರೆ ಬಿಟ್ಟುಬಿಡಿ…

    ಚಿಕ್ಕಬಳ್ಳಾಪುರ: ಕೊರೆಯುವ ಚಳಿಯಲ್ಲಿ ಬೆಟ್ಟದ ತುದಿಯಲ್ಲಿ ಮುಸುಕಿದ ಮಂಜಿನ ನಡುವೆ ಹೊಸ ವರ್ಷದ ಸಂಭ್ರಮ ಆಚರಿಸಬೇಕು ಎಂಬ ಆಸೆ ಹಲವರಿಗಿರುತ್ತದೆ. ಅದರಲ್ಲೂ ಬೆಂಗಳೂರು ಸುತ್ತಮುತ್ತಲಿನವರು ಹತ್ತಿರದ ನಂದಿಬೆಟ್ಟಕ್ಕೆ ತೆರಳಿ ಹೊಸ ವರ್ಷವನ್ನು ಸ್ವಾಗತಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದರೆ ಅದನ್ನು ಬಿಟ್ಟುಬಿಡುವುದೇ ಒಳಿತು.

    ಏಕೆಂದರೆ ರೂಪಾಂತರಗೊಂಡ ಕರೊನಾ ವೈರಸ್ ಆತಂಕ ಇದೀಗ ನಂದಿಬೆಟ್ಟಕ್ಕೂ ಆವರಿಸಿದೆ. ವರ್ಷಾಂತ್ಯದಲ್ಲಿ ಅತ್ಯಧಿಕ ಮಂದಿ ನಂದಿ ಗಿರಿಧಾಮಕ್ಕೆ ಆಗಮಿಸುವುದರಿಂದ ಸೋಂಕು ವ್ಯಾಪಿಸುವ ಭೀತಿ ಇರುವುದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.

    ವರ್ಷಾಂತ್ಯದ ಮೂರು ದಿನಗಳ ಕಾಲ ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಸಂಪೂರ್ಣ ನಿಷೇಧಿಸಿರುವ ಜಿಲ್ಲಾಡಳಿತ, ಬೆಟ್ಟದ ಪ್ರವೇಶ ದ್ವಾರವನ್ನು ಬಂದ್​ ಮಾಡಲು ನಿರ್ಧರಿಸಿದೆ. ಡಿಸೆಂಬರ್​ 30ರ ಬೆಳಗ್ಗೆ 6 ಗಂಟೆಯಿಂದ ಜನವರಿ 2ರ ಬೆಳಗ್ಗೆ 6ರ ವರೆಗೆ ಪ್ರವಾಸಿಗರಿಗೆ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಆದೇಶ ಹೊರಡಿಸಿದ್ದಾರೆ.

    ವೈಕುಂಠ ಏಕಾದಶಿಯಂದು ತಿರುಮಲನಿಗೆ ಬಂಪರ್‌: ಒಂದೇ ದಿನ ಹರಿದುಬಂತು ದಾಖಲೆಯ ಹಣ

    ಮನೆಯವರ ವಿರೋಧದ ನಡುವೆಯೂ ಅದನ್ನೇ ಆರಿಸಿಕೊಂಡ್ಲು ಈ ಮೂರು ಮಕ್ಕಳ ತಾಯಿ..!

    ವಿಷ್ಣುವರ್ಧನ್​ ಪುತ್ಥಳಿ ಧ್ವಂಸ; ಅಭಿಮಾನಿಗಳಿಂದ ಪ್ರತಿಭಟನೆ, ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts