More

    ಆಯ್ಕೆಗಾರರು, ಗಂಗೂಲಿ ವಿರುದ್ಧ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಗರಂ!

    ನವದೆಹಲಿ: ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿರುವುದಕ್ಕೆ ರಾಷ್ಟ್ರೀಯ ಆಯ್ಕೆಗಾರರು ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ ಕಿಡಿಕಾರಿದ್ದಾರೆ. ಟಿ20ಯಂತೆಯೇ ಏಕದಿನ ತಂಡದ ನಾಯಕತ್ವನ್ನೂ ಸ್ವತಃ ಕೊಹ್ಲಿ ಅವರೇ ತ್ಯಜಿಸುವಂತೆ ಆಯ್ಕೆಗಾರರು ಮನವೊಲಿಸಬೇಕಾಗಿತ್ತು ಎಂದು ರಾಜ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ‘ನಾನು ಕಳೆದ ಕೆಲ ದಿನಗಳಿಂದ ಕೊಹ್ಲಿ ಜತೆ ಮಾತನಾಡಿಲ್ಲ. ಯಾವುದೋ ಕಾರಣಕ್ಕೆ ಅವರ ಮೊಬೈಲ್ ಸ್ವಿಚ್ ಆಫ್​ ಆಗಿದೆ. ಟಿ20 ತಂಡದ ನಾಯಕತ್ವ ತ್ಯಜಿಸಿದ ಬಳಿಕ ಏಕದಿನ ತಂಡದ ನಾಯಕತ್ವವನ್ನೂ ತ್ಯಜಿಸುವಂತೆ ಕೊಹ್ಲಿಗೆ ಆಯ್ಕೆಗಾರರು ಕೇಳಿಕೊಳ್ಳಬೇಕಾಗಿತ್ತು. ಇಲ್ಲದಿದ್ದರೆ ಎರಡರಲ್ಲೂ ನಾಯಕರಾಗಿ ಮುಂದುವರಿಸಬೇಕಾಗಿತ್ತು’ ಎಂದು ರಾಜ್‌ಕುಮಾರ್ ಹೇಳಿದ್ದಾರೆ.

    ಟಿ20 ನಾಯಕತ್ವ ತ್ಯಜಿಸದಂತೆ ಕೊಹ್ಲಿಯನ್ನು ಕೇಳಿಕೊಳ್ಳಲಾಗಿತ್ತು. ಅದಕ್ಕೆ ಅವರು ಒಪ್ಪಲಿಲ್ಲ. ಆದರೆ ಏಕದಿನ-ಟಿ20ಗೆ ಪ್ರತ್ಯೇಕ ನಾಯಕತ್ವ ಆಯ್ಕೆಗಾರರಿಗೆ ಇಷ್ಟವಿರಲಿಲ್ಲ ಎಂಬ ಗಂಗೂಲಿ ಅವರ ಇತ್ತೀಚೆಗಿನ ಹೇಳಿಕೆಯನ್ನು ಒಪ್ಪದ ರಾಜ್‌ಕುಮಾರ್, ‘ಗಂಗೂಲಿ ಹೇಳಿಕೆ ನನಗೆ ಅಚ್ಚರಿ ತಂದಿದೆ. ಭಿನ್ನ ಹೇಳಿಕೆಗಳೂ ಹರಿದಾಡುತ್ತಿವೆ. ಆಯ್ಕೆಗಾರರು ತಮ್ಮ ನಿರ್ಧಾರಕ್ಕೆ ಸ್ಪಷ್ಟ ಕಾರಣ ತಿಳಿಸಿಲ್ಲ. ಬಿಸಿಸಿಐ ಮತ್ತು ಆಯ್ಕೆಗಾರರ ನಿರ್ಧಾರದಲ್ಲಿ ಯಾವುದೇ ಸ್ಪಷ್ಟತೆ ಅಥವಾ ಪಾರದರ್ಶಕತೆ ಇಲ್ಲ. ಕೊಹ್ಲಿ ಅವರಂಥ ಯಶಸ್ವಿ ಏಕದಿನ ನಾಯಕರನ್ನು ಈ ರೀತಿ ಕೆಳಗಿಳಿಸಿದ್ದು ವಿಷಾದನೀಯ’ ಎಂದಿದ್ದಾರೆ.

    ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಮುಂದಾದ ರವೀಂದ್ರ ಜಡೇಜಾ! ಕಾರಣವೇನು ಗೊತ್ತೇ?

    ದೇಶೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಸಿಎಸ್‌ಕೆ ತಾರೆ ಋತುರಾಜ್ ಗಾಯಕ್ವಾಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts