More

    ವಿಶ್ವಕಪ್ ಗೆದ್ದ ಬಳಿಕ ದಿಗ್ಗಜ ಸಚಿನ್‌ರನ್ನು ಹೆಗಲ ಮೇಲೆ ಹೊತ್ತು ಮೈದಾನ ಸುತ್ತಿದ್ದೇಕೆ..?

    ಬೆಂಗಳೂರು: 2011ರ ಏಪ್ರಿಲ್ 2, ಯಾರಿಗೆ ತಾನೆ ನೆನಪಿರಲ್ಲ, ಹೇಳಿ..ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದು ಮರೆಯಲಾಗದ ದಿನ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ 28 ವರ್ಷಗಳ ಬಳಿಕ ಚಾಂಪಿಯನ್‌ಪಟ್ಟ ಅಲಂಕರಿಸಿತು. ಟ್ರೋಫಿ ಗೆದ್ದಿದ್ದ ತಡ ಭಾರತದ ಯುವ ಆಟಗಾರರು ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತು ಮೈದಾನದಲ್ಲಿ ಸುತ್ತು ಹಾಕಿದರು. ಸಚಿನ್ ತೆಂಡುಲ್ಕರ್‌ಗೆ ಗೌರವ ನೀಡುವುದೇ ತಂಡದ ಉದ್ದೇಶವಾಗಿತ್ತು ಎಂದು ಅಂದಿನ ತಂಡದ ಸದಸ್ಯ, ಹಾಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ಟುವರ್ಟ್ ಬ್ರಾಡ್‌ಗೆ ಲೆಜೆಂಡ್ ಎಂದು ಯುವಿ ಹೇಳಿದ್ಯಾಕೆ..?

    ‘ಪಾಜಿ’ ಸಚಿನ್ ತೆಂಡುಲ್ಕರ್‌ಗಾಗಿ ವಿಶ್ವಕಪ್ ಜಯಿಸುವ ಸಂಕಲ್ಪ ಮಾಡಿದ್ದೇವು, ಅವರಿಗೆ ಕಡೇ ವಿಶ್ವಕಪ್ ಕೂಡ ಅದಾಗಿತ್ತು. ಗೆಲುವಿನ ಬಳಿಕ ಹೆಗಲ ಮೇಲೆ ಹೊತ್ತು ಮೈದಾನದ ಸುತ್ತುವುದು ನಮ್ಮ ಕನಸಾಗಿತ್ತು ಎಂದು ವಿರಾಟ್ ಕೊಹ್ಲಿ, ಕರ್ನಾಟಕದ ಮಯಾಂಕ್ ಅಗರ್ವಾಲ್ ಜತೆ ಬಿಸಿಸಿಐ.ಟಿವಿಗೆ ನಡೆದ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಸಚಿನ್‌ಗೆ ಗೌರವ ನೀಡುವುದೇ ನಮ್ಮೆಲ್ಲರ ಪ್ರಮುಖ ಉದ್ದೇಶವಾಗಿತ್ತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    ತವರು ನೆಲದಲ್ಲಿ ಪ್ರಶಸ್ತಿ ಗೆಲ್ಲುವುದು ಪ್ರತಿಯೊಬ್ಬರ ಕನಸು. ಅದು ನಮ್ಮ ಪಾಲಿಗೆ ದಕ್ಕಿತು. ನಾವು ಅಂದುಕೊಂಡಂತೆ ಟೂರ್ನಿಯಲ್ಲಿ ಸಾಗಿದೇವು, ನಮ್ಮ ಯೋಜನೆಗಳಿಗೆ ಲದಕ್ಕಿತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಮುನ್ನಡೆಸುತ್ತಿದ್ದರೆ, ಮಯಾಂಕ್ ಅಗರ್ವಾಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಲಿದ್ದಾರೆ.

    ಕ್ರಿಕೆಟ್‌ಗೆ ವಾಪಸಾಗಲು ಸಚಿನ್ ಮಾತುಗಳೇ ಪ್ರೇರಣೆ ಎಂದ ಯುವರಾಜ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts