More

    ಶತಕ ತಪ್ಪಿದರೂ ದಾಖಲೆ ಬರೆದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ

    ಕೇಪ್‌ಟೌನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಶತಕದ ಹಾದಿಯಲ್ಲಿ ಎಡವಿದರೂ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ವಿರಾಟ್ ಕೊಹ್ಲಿ 5 ರಾಷ್ಟ್ರಗಳಲ್ಲಿ ಸಾವಿರ ರನ್ ಪೂರೈಸಿದ ಭಾರತದ ಮೊದಲ ನಾಯಕ ಎನಿಸಿಕೊಂಡರು. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನೆಲಗಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಸಾವಿರ ರನ್ ಪೂರೈಸಿದ ಭಾರತದ ಮೊದಲ ನಾಯಕ ಎನಿಸಿದ್ದಾರೆ. ಎಂಎಸ್ ಧೋನಿ 4 ರಾಷ್ಟ್ರಗಳಲ್ಲಿ ಈ ಸಾಧನೆ ಮಾಡಿದ್ದಾರೆ.

    ಆತಿಥೇಯ ದಕ್ಷಿಣ ಆಫ್ರಿಕಾ ವೇಗಿಗಳ ಕರಾರುವಾಕ್ ದಾಳಿಗೆ ಕುಸಿತ ಕಂಡ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (79ರನ್, 201 ಎಸೆತ, 12 ಬೌಂಡರಿ, 1 ಸಿಕ್ಸರ್) ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 77. 3 ಓವರ್‌ಗಳಲ್ಲಿ 223 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಎಚ್ಚರಿಕೆ ನಿರ್ವಹಣೆ ನಡುವೆಯೂ ಜಸ್‌ಪ್ರೀತ್ ಬುಮ್ರಾ (0ಕ್ಕೆ 1) ದಾಳಿಗೆ ಆಘಾತ ಕಂಡಿರುವ ದ.ಆಫ್ರಿಕಾ ದಿನದಂತ್ಯಕ್ಕೆ 1 ವಿಕೆಟ್‌ಗೆ 17 ರನ್ ಗಳಿಸಿದ್ದು, ಇನ್ನೂ 206 ರನ್ ಹಿನ್ನಡೆಯಲ್ಲಿದೆ.

    ನ್ಯೂಲ್ಯಾಂಡ್ಸ್‌ನಲ್ಲಿ ವೇಗಿಗಳ ದರ್ಬಾರ್ ; ವಿರಾಟ್ ಕೊಹ್ಲಿಗೆ ತಪ್ಪಿದ ಶತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts