More

    VIDEO: ಜನರ ಮೆಚ್ಚುಗೆಗೆ ಪಾತ್ರವಾದ ವಿರಾಟ್ ಕೊಹ್ಲಿ ದಂಪತಿಯ ಸಾಮಾಜಿಕ ಕಳಕಳಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮ, ಕೋವಿಡ್-19ರ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಜತೆಗೆ ದೇಣಿಗೆ ಸಂಗ್ರಹ ಯೋಜನೆಯಿಂದ 7 ಕೋಟಿ ರೂಪಾಯಿ ನೀಡುವುದಾಗಿಯೂ ತಾರಾ ದಂಪತಿ ಘೋಷಿಸಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೋವಿಡ್-19 ಪರಿಹಾರ ನಿಧಿಗೆ 7 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ, ವಿಹಾರಿ ವಾಪಸ್, ಕುಲದೀಪ್, ನವದೀಪ್ ಸೈನಿಗೆ ಕೊಕ್

    ದೇಣಿಗೆ ಸಂಗ್ರಹಕ್ಕಾಗಿ ಧನ ಸಹಾಯ ವೇದಿಕೆಯಾದ ಕೆಟ್ಟೋ ಮೂಲಕ ಮೊತ್ತ ಸಂಗ್ರಹಿಸಲಿದ್ದು, ಮೊದಲಿಗೆ ಕೊಹ್ಲಿ ದಂಪತಿ 2 ಕೋಟಿ ರೂ. ನೀಡಲಿದ್ದಾರೆ. ಎಸಿಟಿ ಗ್ರಾೃಂಟ್ಸ್ ನಿರ್ದೇಶನದಂತೆ ಕೆಟ್ಟೊ ಮೂಲಕ 7 ದಿನಗಳ ಕಾಲ ಪ್ರಚಾರ ಕಾರ್ಯ ನಡೆಯಲಿದೆ. ಆಮ್ಲಜನಕ ಪೂರೈಕೆ, ವೈದ್ಯಕೀಯ ಪರಿಕರಗಳ ಪೂರೈಕೆ, ವ್ಯಾಸಿನೇಷನ್ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೆಟ್ಟೊ ಮಾಡಲಿದೆ.

    ಇದನ್ನೂ ಓದಿ: ಸುರೇಶ್ ರೈನಾ ಮಾಡಿದ ಮನವಿಗೆ ಹತ್ತೇ ನಿಮಿಷದಲ್ಲಿ ಸ್ಪಂದಿಸಿದ ಬಾಲಿವುಡ್ ನಟ ಸೋನು ಸೂದ್..!, 

    ‘ಭಾರತದ ಇತಿಹಾಸದಲ್ಲಿ ಇಂಥ ಸಮಯ ಕಂಡಿರಲಿಲ್ಲ. ಈ ವೇಳೆ ಭಾರತಕ್ಕೆ ಒಗ್ಗಟ್ಟು ಅಗತ್ಯವಿದೆ. ಎಲ್ಲರೂ ದೇಶದ ನೆರವಿಗೆ ನಿಲ್ಲಬೇಕು. ಕಳೆದ ವರ್ಷದಿಂದ ಜನರು ಪಡುತ್ತಿರುವ ಕಷ್ಟವನ್ನು ನೋಡಿ ನಾನು ಮತ್ತು ಅನುಷ್ಕಾ ಮರುಗಿದ್ದೇವೆ’ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ದಂಪತಿಯ ಸಾಮಾಜಿಕ ಕಳಕಳಿ ಜನ ಸಾಮಾನ್ಯರ ಮೆಚ್ಚುಗೆ ಪಾತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts