More

    ಶಿಕ್ಷಕರ ದಿನದಂದು ಬಾಲ್ಯದ ಕೋಚ್ ಕುರಿತು ವಿರಾಟ್ ಕೊಹ್ಲಿ ಹೇಳಿದ್ದೇನು..?

    ಬೆಂಗಳೂರು: ಶಿಕ್ಷಕರ ದಿನಾಚರಣೆ ಸಂಭ್ರಮವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಶಿಕ್ಷಕರಿಗೆ, ಕೋಚ್‌ಗಳಿಗೆ, ಮಾರ್ಗದರ್ಶನ ನೀಡಿದ ಹಿರಿಯರಿಗೆ, ಮೆಂಟರ್‌ಗಳನ್ನು ನೆನೆಸಿಕೊಳ್ಳಲಾಗುತ್ತದೆ. ಕ್ರೀಡಾಲೋಕದ ದಿಗ್ಗಜರು ಬಾಲ್ಯದಲ್ಲಿ ಪಾಠ ಹೇಳಿದ ಶಿಕ್ಷಕರು ಹಾಗೂ ಮೊದಲ ಕೋಚ್‌ಗಳ ಸಲಹೆಗಳನ್ನು ಸ್ಮರಿಸುತ್ತಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ ಅವರನ್ನು ಭಾವನಾತ್ಮಕವಾಗಿ ನೆನಪಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಅರ್ಜೆಂಟೀನಾ ಕ್ರಿಕೆಟ್ ತಂಡದ ನಾಯಕಿ ಈಗ ಕರೊನಾ ವಾರಿಯರ್!

    ಶಿಕ್ಷಕರು ನಮಗೆ ಜೀವನದ ಮೌಲ್ಯ ಕಲಿಸುತ್ತಾರೆ. ನನ್ನ ಪಾಲಿಗೆ ಎಂದೆಂದಿಗೂ ಶ್ರೇಷ್ಠ ನನ್ನ ಕೋಚ್ ರಾಜ್‌ಕುಮಾರ್ ಶರ್ಮ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಮಕ್ಕಳಿಗೆ ಜ್ಞಾನಾರ್ಜನೆ ಜತೆಗೆ ಸರಿ ದಾರಿಯಲ್ಲಿ ನಡೆಯಲು ಶಿಕ್ಷಕರು ನೀಡುವ ಸಲಹೆ ಅಮೂಲ್ಯ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ತಮ್ಮ ಬಾಲ್ಯದ ಕೋಚ್ ಜತೆಗೆ ಇಂದಿಗೂ ಭಾವನಾತ್ಮಕ ಸಂಬಂಧ ಹೊಂದಿರುವ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬಿಡುವು ಸಿಕ್ಕಾಗ ತಪ್ಪದೇ ಭೇಟಿಯಾಗುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಅವರ ಮಾರ್ಗದರ್ಶನವೇ ನನಗೆ ಸ್ಫೂರ್ತಿ ಎಂದು ಕೊಹ್ಲಿ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: VIDEO | ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಯಿಂದ ಜನ್ಮದಿನದಂದು ನೇತ್ರದಾನ ಸಂಕಲ್ಪ

    31 ವರ್ಷದ ಕೊಹ್ಲಿ 2008ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದರು. 2008ರಲ್ಲಿ ಮಲೇಷ್ಯಾದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಸಾರಥ್ಯದ ಭಾರತ ತಂಡ ಪ್ರಶಸ್ತಿ ಜಯಿಸಿತ್ತು. ಜತೆಗೆ 2011 ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯನಾಗಿದ್ದರು. 2014ರಲ್ಲಿ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾದರು. ಬಳಿಕ 2017ರಿಂದ ಮೂರು ಮಾದರಿಗೂ ನಾಯಕನಾಗಿದ್ದಾರೆ. ಕೊಹ್ಲಿ ಇದುವರೆಗೂ 55 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿದ್ದು, 33 ಜಯ ಕಂಡಿದ್ದಾರೆ. ಮೂರು ಮಾದರಿಯಿಂದ 70 ಶತಕ, 20 ಸಾವಿರ ರನ್ ಬಾರಿಸಿದ್ದಾರೆ. 2013 ರಿಂದ ಆರ್‌ಸಿಬಿ ತಂಡ ಮುನ್ನಡೆಸುತ್ತಿದ್ದಾರೆ.

    VIDEO: ವೈರಲ್ ಆಗಿದೆ ಪೀಯುಷ್ ಚಾವ್ಲ ಎಸೆತದಲ್ಲಿ ಧೋನಿ ಸಿಡಿಸಿದ ಸಿಕ್ಸರ್…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts