More

    ಸೈಕ್ಲಿಂಗ್ ಮಾಡುತ್ತಲೇ ತಲೆಯ ಮೇಲೆ ಫ್ರಿಡ್ಜ್​​​ ಬ್ಯಾಲೆನ್ಸ್ ಮಾಡಿದ ಯುವಕ; ಈ ದೃಶ್ಯ ನಿಜವೋ, ಸುಳ್ಳೋ? ಎಂದು ಪ್ರಶ್ನಿಸಿದ ನೆಟ್ಟಿಗರು​​

    ವ್ಯಕ್ತಿಯೋರ್ವ ತನ್ನ ತಲೆಯ ಮೇಲೆ ಫ್ರಿಡ್ಜನ್ನ ಬ್ಯಾಲೆನ್ಸ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈತ ಫ್ರಿಡ್ಜನ್ನ ತಲೆಯ ಮೇಲೆ ಹೊತ್ತೊಯ್ಯುತ್ತಿರುವುದು ದೊಡ್ಡ ವಿಚಾರವೇನು ಅಲ್ಲ. ಆದ್ರೆ ಈತ ಅದನ್ನ ಹೊತ್ತೊಯ್ದ ರೀತಿ ಮಾತ್ರ ವಿಚಿತ್ರ. ಸೈಕಲ್​ ಬ್ಯಾಲೆನ್ಸ್​​​​​​​​​​​​​​​​​​​​​​​​ ಮಾಡೋದು ಒಂದೆಡೆಯಾದ್ರೆ ಈತ ಅದರ ಜೊತೆಗೆ ಫ್ರಿಡ್ಜನ್ನ ತಲೆಯ ಮೇಲೆ ಇರಿಸಿರೋದು ನೋಡುಗರ ಹುಬ್ಬೇರಿಸಿದೆ.


    ಈ ವಿಡಿಯೋವನ್ನ ಬಾರ್‌ಸ್ಟೂಲ್ ಸ್ಪೋರ್ಟ್ಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಕ್ತಿ ತನ್ನ ತಲೆಯ ಮೇಲೆ ಫ್ರಿಡ್ಜ್​ ಇರಿಸಿ ನಿರಾಯಾಸವಾಗಿ ಮುಂದೆ ಸಾಗಿದ್ದಾರೆ. ಇನ್ನು ನೆಟ್ಟಿಗರು ಈ ದೃಶ್ಯ ನಿಜವೋ, ಸುಳ್ಳೋ ಎಂದು ಕಾಮೆಂಟ್​​ ಮಾಡಿದ್ದಾರೆ. ಇನ್ನು ಕೆಲವರು ಬಾಹುಬಲಿ ಸಿನಿಮಾದಲ್ಲಿ ಶಿವಲಿಂಗವನ್ನ ಹೊತ್ತೊಯ್ದ್ರೆ ಈತ ಫ್ರಿಡ್ಜನ್ನ ಹೊತ್ತೊಯ್ದಿದ್ದಾನೆ ಎಂದು ಕಾಮೆಂಟ್​ ಮಾಡಿದ್ದಾರೆ.


    ಈ ವಿಡಿಯೋ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ. ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು, ಇಂತಹ ಅದ್ಭುತ ಸಾಹಸ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇನ್ನು ಹಲವರು ಈತ ಹೇಗೆ ಮೊದಲಿಗೆ ತನ್ನ ತಲೆಯ ಮೇಲೆ ಫ್ರಿಡ್ಜನ್ನ ಇರಿಸಿಕೊಂಡಿದ್ದಾನೆ? ಎಂದು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.


    ಕ್ರೀಡಾಪಟುಗಳು ಈ ರೀತಿಯಾಗಿ ಮಾಂಸಖಂಡಗಳನ್ನು ಬೆಳೆಸಿಕೊಳ್ಳ ಬೇಕಾದರೆ ಹಲವು ವರ್ಷಗಳ ದೈಹಿಕ ಚಟುವಟಿಕೆಗಳನ್ನ ಮಾಡಬೇಕು. ಆದ್ರೆ ಈತ ಹೇಗೆ ರೆಫ್ರೆಜರೇಟರನ್ನ ಹೊತ್ತೊಯ್ದಿದ್ದಾನೆ ಅನ್ನೋದೆ ಎಲ್ಲರಿಗೂ ಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts