More

    ಮರಣದಂಡನೆ ತಪ್ಪಿಸಿಕೊಳ್ಳಲು ಮುಂದುವರಿದ ಪ್ರಯತ್ನ: ನಿರ್ಭಯಾ ಅತ್ಯಾಚಾರ ಪ್ರಕರಣದ ಇನ್ನೋರ್ವ ಅಪರಾಧಿಯಿಂದ ಕ್ಷಮಾದಾನ ಅರ್ಜಿ

    ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲು ಫೆ.1ರಂದು ದಿನ ಫಿಕ್ಸ್​ ಮಾಡಲಾಗಿದೆ. ಆದರೆ ಸದ್ಯದ ಬೆಳವಣಿಗೆಳನ್ನು ನೋಡಿದರೆ ಶಿಕ್ಷೆಯ ದಿನ ಮತ್ತೆ ಮುಂದೆ ಹೋಗಬಹುದಾ ಎಂಬ ಅನುಮಾನ ಕಾಡುತ್ತಿದೆ.

    ಇಂದು ಬೆಳಗ್ಗೆಯಷ್ಟೇ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್​ ಠಾಕೂರ್​ ಸುಪ್ರೀಂಕೋರ್ಟ್​ಗೆ ಕ್ಯುರೇಟಿವ್​ ಅರ್ಜಿ ಸಲ್ಲಿಸಿದ್ದಾನೆ ಎಂದು ತಿಹಾರ್

    ಅಪರಾಧಿ ಅಕ್ಷಯ್​ ಠಾಕೂರ್​ ಮಂಗಳವಾರ ಸುಪ್ರೀಂಕೋರ್ಟ್​ನಲ್ಲಿ ಕ್ಯುರೇಟಿವ್​ ಅರ್ಜಿ ದಾಖಲಿಸಿರುವುದಾಗಿ ತಿಹಾರ್​ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅದರ ಬೆನ್ನಲ್ಲೇ ಮತ್ತೋರ್ವ ಅಪರಾಧಿ ವಿನಯ್​ ಕುಮಾರ್​ ಶರ್ಮಾ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾನೆ. ಮರಣದಂಡನೆ ರದ್ದುಗೊಳಿಸಿ ಜೀವಾವಧಿ ಶಿಕ್ಷೆ ನೀಡಿ ಎಂದು ಮನವಿ ಮಾಡಿದ್ದಾನೆ.

    2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿಗಳಾದ ವಿನಯ್​ಕುಮಾರ್​ ಶರ್ಮಾ, ಮುಕೇಶ್​ ಕುಮಾರ್ ಸಿಂಗ್​, ಪವನ್​ ಗುಪ್ತಾ ಮತ್ತು ಅಕ್ಷಯ್​ ಫೆ.1ರಂದು ನೇಣುಗಂಬಕ್ಕೆ ಏರಬೇಕು. ಆದರೆ ದಿನಕ್ಕೊಬ್ಬರು ಒಂದೊಂದು ಅರ್ಜಿ ಸಲ್ಲಿಸುತ್ತ ಶಿಕ್ಷೆಯಿಂದ ಪಾರಾಗಲು ಯತ್ನಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts