More

    ಯೋಗೀಶ್​ಗೌಡ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದ ವಿನಯ್​ ಕುಲಕರ್ಣಿ ರಹಸ್ಯ ಇಲ್ಲಿದೆ

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್​ ಗೌಡರ ಹತ್ಯೆ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಸಿಬಿಐ ಬಲೆಗೆ ಬಿದ್ದಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿಗೂ ಈ ಪ್ರಕರಣದ ಮೊದಲ ಆರೋಪಿ ಬಸವರಾಜ್​ ಶಿವಪ್ಪ ಮುತ್ತಗಿಗೂ ನಿಕಟ ಸಂಪರ್ಕ ಇತ್ತು. ಬಸವರಾಜ್​ಗೆ ವಿನಯ್​ ಕುಲಕರ್ಣಿ ಪರೋಕ್ಷವಾಗಿ ಸಹಕಾರ ನೀಡಿದ್ದರು ಎಂಬ ರಹಸ್ಯ ಸಿಬಿಐ ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿದುಬಂದಿದೆ.

    ಪ್ರಕರಣದ ಮೊದಲ ಆರೋಪಿ ಬಸವರಾಜ್​ ಜತೆ ವಿನಯ್​ ಕುಲಕರ್ಣಿ ಒಡನಾಟ ಹೊಂದಿದ್ದು, ಆತನಿಗೆ ಸಹಕರಿಸಿದ ಬಗ್ಗೆ ಸಿಬಿಐಗೆ ಕೆಲ ಮಾಹಿತಿಗಳು ಸಿಕ್ಕಿದ್ದವು. ಈ ಆಧಾರದ ಮೇಲೆ ಸಿಬಿಐ ತನಿಖೆ ನಡೆಸಿ ವಿನಯ್​ ಕುಲಕರ್ಣಿಯ ಹೇಳಿಕೆ ದಾಖಲಿಸಿಕೊಂಡಿದೆ.

    ಆದರೆ, ವಿಚಾರಣೆ ವೇಳೆ ವಿನಯ್​ ಕುಲಕರ್ಣಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಿಲ್ಲ ಎನ್ನಲಾಗುತ್ತಿದೆ. ನನಗೂ ಯೋಗೀಶ್​ಗೌಡ ಕೊಲೆಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಸುಮ್ಮನೆ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಬಿಐ ವಿಚಾರಣೆ ವೇಳೆ ವಿನಯ್​ ಕುಲಕರ್ಣಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹತ್ಯೆಗೆ ಸಂಬಂಧಿಸಿದಂತೆ ವಿನಯ್​ ವಿರುದ್ಧ ಪತ್ತೆಯಾದ ಸಾಕ್ಷ್ಯವನ್ನು ಮುಂದಿಟ್ಟುಕೊಂಡು ಸಿಬಿಐ ತನಿಖೆ ಮುಂದುವರಿಸಲು ಹೊರಟಿದೆ.
    ಸಿಸಿ ಕ್ಯಾಮರಾ, ಮೊಬೈಲ್​ ಕರೆಗಳ ಆಧಾರದ ಮೇಲೆ ಸಿಬಿಐ ತನಿಖೆ ನಡೆಸಿದಾಗ ಇತರ ಆರೋಪಿಗಳ ಸುಳಿವು ಸಿಕ್ಕಿತ್ತು. ಯೋಗೀಶ್​ ಗೌಡ ಕೊಲೆಯಾದ ಸ್ಥಳ ಜಿಮ್​ನಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕಲಾಗಿತ್ತು.

    ಈಗಾಗಲೇ ಸಿಬಿಐ ಅಧಿಕಾರಿಗಳು ಧಾರವಾಢದ ನಿವಾಸಿ ಬಸವರಾಜ ಶಿವಪ್ಪ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ್​ ಬಸರಾಜ್​ ಕುರಹಟ್ಟಿ, ಸಂದೀಪ್​ ಸವದತ್ತಿ, ವಿನಾಯಕ ಕಟಗಿ, ಮಹಬಲೇಶ್ವರ ಹೊಂಗಲ್​, ಸಂತೋಷ್​ ಸವದತ್ತಿ, ಎಂ.ದಿನೇಶ್​, ಎಸ್​.ಅಶ್ವತ್ಥ್​, ಕೆ.ಎಸ್​.ಸುನೀಲ್​, ನಜೀರ್​ ಅಹಮದ್​, ಶಾನ್ವಾಜ್​, ಕೆ.ನೂತನ್​, ಸಿ.ಹರ್ಷಿತ್​ ಕೃತ್ಯದ ಬಗ್ಗೆ ಮೊದಲ ಚಾರ್ಜ್​ಶೀಟ್​ನಲ್ಲಿ ಸಿಬಿಐ ಎಳೆಎಳೆಯಾಗಿ ಉಲ್ಲೇಖಿಸಿದೆ. ಅಂತಿಮ ಹಂತದ ಚಾರ್ಜ್​ಶೀಟ್​ನಲ್ಲಿ ವಿನಯ್​ ಕುಲಕರ್ಣಿ ಹಾಗೂ ಇನ್ನಿತರರ ಕೃತ್ಯವನ್ನೂ ಉಲ್ಲೇಖಿಸುವ ಸಾಧ್ಯತೆಗಳಿವೆ.

    ವಾಟ್ಸ್​ಆ್ಯಪ್​ ವಿಡಿಯೋ ಕರೆ ಮಾಡಿದ್ದ ಯುವತಿ ಬೆತ್ತಲಾಗಿ ನಿಂತಿದ್ದಳು! ಮುಂದೆ ಆಗಿದ್ದೆಲ್ಲವೂ ಅವಾಂತರ

    ಬೆಂಗಳೂರು ವಿವಿ ನಿವೃತ್ತ ಪ್ರೊಫೆಸರ್ ಆತ್ಮಹತ್ಯೆ ಹಿಂದಿದೆ 2.5 ಕೋಟಿ ರೂಪಾಯಿ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts