More

  ದುಬೈನಲ್ಲಿ ವಿಂಶತಿ ವೈಭವ ಕಾರ್ಯಕ್ರಮದ ಸಮಾರೋಪ ಸಮಾರಂಭ

  ದುಬೈ:  ದುಬೈನ ಯು.ಎ.ಇ. ಬ್ರಾಹ್ಮಣ ಸಮಾಜ 20 ಸಾರ್ಥಕ ಸಂವತ್ಸರಗಳನ್ನು ಪೂರೈಸಿದ ಸಂದರ್ಭದಲ್ಲಿ ವರ್ಷ ಪೂರ್ತಿ ಹಮ್ಮಿಕೊಂಡಿದ್ದ ವಿಂಶತಿ ವೈಭವ ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ (ಎ.13) ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು.

  ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಕವಿ ಶ್ರೀ ಎಚ್. ಡುಂಡಿರಾಜ್ ಅವರನ್ನು ‘ಶಬ್ದ ಸಾಮ್ರಾಟ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ದುಬೈನ ಉದ್ಯಮಿ ವಾಸುದೇವ ಭಟ್ , ನಾಗರಾಜ ರಾವ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಫ್ರಾಂಕ್ ಫೆರ್ನಾಂಡೀಸ್, ಮೋಹನ್ ಮುಂತಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಸುಧಾಕರ ರಾವ್ ಪೇಜಾವರ್ ಪ್ರಾಸ್ತಾವಿಕ ಭಾಷಣ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts