More

    ರೈತರ ಹಿಂದಿನ ಖತರ್​ನಾಕ್ ಖಳನಾಯಕರು; ಭಾಗ-2

    ರೈತರ ಹಿಂದಿನ ಖತರ್​ನಾಕ್ ಖಳನಾಯಕರು; ಭಾಗ-2ವಿದೇಶೀ ಸಂಚುಗಾರರಿಗೆ ತಮ್ಮನ್ನು ಮಾರಿಕೊಂಡು, ರೈತರ ಹೆಗಲ ಮೇಲೆ ಬಂದೂಕು ಇಟ್ಟು ತಂತಮ್ಮ ವೈಯಕ್ತಿಕ ರಾಜಕೀಯ ಮಾಡುತ್ತಿರುವ ತಥಾಕಥಿತ ‘ರೈತನಾಯಕರು’ ಮತ್ತು ‘ಟೂಲ್ಕಿಟ್’ಗೆ ಸಂಬಂಧಿಸಿದಂತೆ ಕಳೆದೊಂದು ವಾರದಲ್ಲಿ ಬಹಳಷ್ಟು ರಹಸ್ಯಗಳು ಸ್ಪೋಟಗೊಂಡಿವೆ. ಈ ಹಿನ್ನೆಲೆಯಲ್ಲಿ ಕೃಷಿ ಕಾನೂನುಗಳ ಬಗ್ಗೆ ರಾಜಕೀಯ ಪಕ್ಷಗಳು ‘ಯು ಟರ್ನ್’ಗಳ ಮೂಲಕ ಮಾಡುತ್ತಿ ರುವ ರಾಜಕೀಯ ‘ಹಳೆಯ’ ವಿಷಯವಾಗಿಹೋಗಿದೆ. ಆದರೂ, ಕಳೆದವಾರ ನಿಮಗೆ ನೀಡಿದ ವಾಗ್ದಾನಕ್ಕೆ ಅನುಗುಣವಾಗಿ ಆ ಬಗ್ಗೆ ಹೇಳುವುದು ನನ್ನ ಕರ್ತವ್ಯ.

    ಕೇಂದ್ರ ಸರ್ಕಾರ 2020 ಜೂನ್ 5ರಂದು ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಿದ ಕೃಷಿ ಸುಧಾರಣಾ ಕ್ರಮಗಳ ವಿರುದ್ಧ ಒಂದೂವರೆ ತಿಂಗಳ ನಂತರ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆಗಳು ಆರಂಭವಾದವಷ್ಟೆ. ಎಡಪಕ್ಷಗಳು ಮತ್ತು ಮಾವೋವಾದಿ ಸಂಘಟನೆಗಳು ಆರಂಭಿಸಿದ ಈ ಪ್ರತಿಭಟನೆಗಳಿಗೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಇಲಾಖೆಯ ಮಂತ್ರಿ, ಅಕಾಲಿ ದಳದ ನಾಯಕಿ ಹರ್​ಸಿಮ್ರತ್ ಕೌರ್ ಬಾದಲ್ ಖಾರವಾಗಿ ಪ್ರತಿಕ್ರಿಯಿಸಿದ್ದು ಹೀಗೆ- ‘ಕೃಷಿ ಸುಧಾರಣಾ ಸುಗ್ರೀವಾಜ್ಞೆಗಳು ರೈತರಿಗೆ ಅನುಕೂಲಕರವಾಗಿವೆ. ಆದರೆ ಅವು ರೈತರಿಗೆ ನಷ್ಟಕಾರಕ, ಮೋದಿ ರೈತವಿರೋಧಿ ಎಂಬ ಭ್ರಮೆಯನ್ನು ಕೆಲವರು ಹರಡುತ್ತಿದ್ದಾರೆ. ಹೀಗೆ ಮಾಡುತ್ತಿರುವವರು ಕಾಂಗ್ರೆಸ್ ಮತ್ತದರ ಬಿ ಟೀಮ್ ಆಗಿರುವ ಆಮ್ ಆದ್ಮಿ ಪಾರ್ಟಿ.’

    ಹೀಗೆ ಹರ್​ಸಿಮ್ರತ್ ಕೌರ್ ಮತ್ತವರ ಅಕಾಲಿ ದಳ ಕೃಷಿ ಸುಧಾರಣಾ ಮಸೂದೆಗಳ ಪರವಾಗಿ ನಿಲ್ಲಲು ಕಾರಣವಿದೆ. ಇಂತಹ ಸುಧಾರಣೆಗಳಿಗಾಗಿ ಪಂಜಾಬ್ ಮತ್ತು ಹರಿಯಾಣ ರೈತರು ಮತ್ತು ರೈತನಾಯಕರ ಬೇಡಿಕೆಗೆ ಅನುಗುಣವಾಗಿ 2013ರಲ್ಲಿ ಪಂಜಾಬ್​ನ ಅಂದಿನ ಪ್ರಕಾಶ್ ಸಿಂಗ್ ಬಾದಲ್ (ಹರ್​ಸಿಮ್ರತ್ ಕೌರ್​ರ ಮಾವ) ಅಕಾಲಿ ದಳ ಸರ್ಕಾರ ‘ಪಂಜಾಬ್ ಕಾಂಟ್ರಾ್ಯಕ್ಟ್ ಫಾಮಿಂಗ್ ಆಕ್ಟ್’ ಜಾರಿಗೊಳಿಸಿತು. ಬಿಜೆಪಿ ಬೆಂಬಲಿತ ಬಾದಲ್ ಸರ್ಕಾರ ಜಾರಿಗೊಳಿಸಿದ ಈ ಕಾನೂನು ರಾಜ್ಯದಲ್ಲಿ ಕಾಂಟ್ರಾ್ಯಕ್ಟ್ ಫಾರ್ವಿುಂಗ್​ಗೆ ಅವಕಾಶ ನೀಡಿತ್ತು. ಅದನ್ನೇ ಮುಂದುವರಿಸಿ, ಅಕಾಲಿ ದಳ ಸಹಯೋಗ ದೊಂದಿಗೆ ಕೇಂದ್ರ ಸರ್ಕಾರ ತಂದ ಪ್ರಸಕ್ತ ಕೃಷಿ ಕಾನೂನುಗಳೂ ಕಾಂಟ್ರಾ್ಯಕ್ಟ್ ಫಾರ್ವಿುಂಗ್​ಗೆ ಅವಕಾಶ ನೀಡುತ್ತವೆ. ಆದರೆ ಕಾನೂನಿನಲ್ಲಿ ಪ್ರಮುಖ ವ್ಯತ್ಯಾಸವಿದೆ. ಪಂಜಾಬ್ ಕಾನೂನಿನ ಪ್ರಕಾರ ಒಮ್ಮೆ ಕಾಂಟ್ರಾ್ಯಕ್ಟ್​ಗೆ ಸಹಿ ಹಾಕಿದ ರೈತ ಅದರಿಂದ ಹೊರಬರುವಂತಿಲ್ಲ. ಬಂದರೆ ಐದು ಲಕ್ಷ ರೂಪಾಯಿ ದಂಡ ತೆರಬೇಕು ಮತ್ತು ಆತನನ್ನು ಜೈಲಿಗಟ್ಟಲೂಬಹುದಾಗಿದೆ. ಆದರೆ ಕೇಂದ್ರ ಸರ್ಕಾರದ ಪ್ರಸಕ್ತ ಕಾನೂನು ಗಳು ಯಾವಾಗ ಬೇಕಾದರೂ ಕಾಂಟ್ರಾ್ಯಕ್ಟ್​ನಿಂದ ಹೊರಬರುವ ಸ್ವಾತಂತ್ರ್ಯವನ್ನು ರೈತರಿಗೆ ನೀಡಿವೆ; ಒಂದು ಪೈಸೆ ಜುಲ್ಮಾನೆಯೂ ಇಲ್ಲ, ಜೈಲಂತೂ ಇಲ್ಲವೇ ಇಲ್ಲ!

    ಕೃಷಿ ಸುಧಾರಣಾ ಸುಗ್ರೀವಾಜ್ಞೆಗಳನ್ನು ಕಾನೂನುಗಳನ್ನಾಗಿಸಲು ಕೇಂದ್ರ ಸರ್ಕಾರ ಅವುಗಳನ್ನು ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಮಂಡಿಸಿತು. ಅದಾದ ಮೂರು ದಿನಗಳಿಗೆ ಮಸೂದೆಗಳನ್ನು ವಿರೋಧಿಸಿ ಹರ್​ಸಿಮ್ರತ್ ಕೌರ್ ಬಾದಲ್ ಮಂತ್ರಿಮಂಡಲದಿಂದ ಹೊರನಡೆದರು. ಅವುಗಳನ್ನು ವಿರೋಧಿಸಿದವರು ‘ಭ್ರಮೆ’ಗೆ ಒಳಗಾಗಿದ್ದಾರೆ ಎಂದು ಹೇಳಿದ್ದ ಬಾದಲ್ ತಾವೇ ‘ಭ್ರಮೆ’ಗೆ ಒಳಗಾದದ್ದು ಹೇಗೆ? ಕೃಷಿ ಸುಗ್ರೀವಾಜ್ಞೆಗಳನ್ನು ವಿರೋಧಿಸುವ ನೆಪದಲ್ಲಿ ವಿದೇಶೀ ಶಕ್ತಿಗಳ ತಾಳಕ್ಕೆ ಕುಣಿಯತೊಡಗಿದ ಎಡ ಮತ್ತು ಉಗ್ರ ಎಡ ಸಂಘಟನೆಗಳು ಹಣ ಮತ್ತು ಅಪಪ್ರಚಾರದ ಮಾರ್ಗಗಳನ್ನು ಉಪಯೋಗಿಸಿಕೊಂಡು ರೈತರನ್ನು ಏಮಾರಿಸಿ ಪ್ರತಿಭಟನೆಗಳಿಗೆ ಎಳೆದುಕೊಂಡಾಗ ಅದರ ಬಿಸಿ ಮೊದಲು ತಟ್ಟಿದ್ದೇ ಅಕಾಲಿ ದಳಕ್ಕೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಗಳು ಅಕಾಲಿ ದಳ ಮತ್ತು ಬಿಜೆಪಿಗಳ ವಿರುದ್ಧವಾಗಿ ಬೆಳೆಯುತ್ತ ಹೋದವು ಮತ್ತು ಇವುಗಳಿಗೆ ಬೆಂಬಲ ನೀಡುವಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಗಳ ನಡುವೆ ಪೈಪೋಟಿ ಇರುವಂಥ ಸ್ಥಿತಿ ನಿರ್ವಣವಾಯಿತು. ಈ ಬೆಳವಣಿಗೆ ಈಗಾಗಲೇ ಕುಸಿದಿದ್ದ ಅಕಾಲಿ ದಳದ ಬೆಂಬಲದ ಮೂಲವನ್ನು ಪಾತಾಳಕ್ಕಿಳಿಸುವಂತೆ ಕಂಡಿತು.

    ಮಾದಕದ್ರವ್ಯಗಳ ನಿಯಂತ್ರಣದಲ್ಲಿ ವಿಫಲವಾದದ್ದು ಮತ್ತು ವ್ಯಾಪಕ ಭ್ರಷ್ಟಾಚಾರವೇ ನಾಲ್ಕು ವರ್ಷಗಳ ಹಿಂದೆ ಅಕಾಲಿ ದಳ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣ. ಅದರ ಚುನಾವಣಾ ಹಿನ್ನಡೆ 2019ರ ಲೋಕಸಭಾ ಚುನಾವಣೆಗಳಲ್ಲೂ ಪ್ರತಿಫಲಿಸಿ ಹಿಂದೆ ಗಳಿಸಿದ್ದ ನಾಲ್ಕು ಕ್ಷೇತ್ರಗಳಲ್ಲಿ ಎರಡನ್ನು ಅದು ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿ, 2022ರ ಪ್ರಾರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ತುಸುವಾದರೂ ಸುಧಾರಿಸಿಕೊಳ್ಳಬೇಕಾದರೆ ಗಾಳಿ ಬೀಸುವ ದಿಕ್ಕಿನಲ್ಲಿ ತೂರಿಹೋಗದೇ ಬೇರೆ ದಾರಿ ಇಲ್ಲವೆಂದು ಅಕಾಲಿ ನಾಯಕತ್ವ ಭಾವಿಸಿತು. ಹೀಗಾಗಿ ‘ರೈತರ ಪರವಾಗಿರುವ’ ಪೈಪೋಟಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿಗಳ ಜತೆ ಅಕಾಲಿ ಸೇರಿಕೊಂಡಿತು. ಪರಿಣಾಮವಾಗಿ ಬಾದಲ್ ಸರ್ಕಾರದಿಂದ ಹೊರನಡೆದರು.

    ಈಗ ಕಾಂಗ್ರೆಸ್ ಮತ್ತದರ ಸಹಯೋಗಿಗಳತ್ತ ಹೊರಳೋಣ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಬಯಸಿದಂತೆ ಇದೇ ಕೃಷಿ ಸುಧಾರಣೆಗಳನ್ನು ಜಾರಿಗೆ ತರುವ ವಾಗ್ದಾನವನ್ನು ಕಾಂಗ್ರೆಸ್ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. ಅದಕ್ಕೂ ಹಿಂದೆ 2010ರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದು ಹೀಗೆ- ‘ಆಸ್ಟ್ರೇಲಿಯಾ ಒಂದು ವರ್ಷದಲ್ಲಿ ಉತ್ಪಾದಿಸುವಷ್ಟು ಪ್ರಮಾಣದ ಗೋಧಿ ಭಾರತದ ಸರ್ಕಾರಿ ಗೋದಾಮುಗಳಲ್ಲಿ ಹಾಳಾಗುತ್ತಿದೆ. ಇದನ್ನು ತಡೆಯಲು, ರೈತರಿಂದ ನೇರವಾಗಿ ಗೋಧಿ ಖರೀದಿಸುವ ಅವಕಾಶವನ್ನು ಖಾಸಗಿಯವರಿಗೆ ನೀಡಬೇಕು’. ಪ್ರಸಕ್ತ ಕೃಷಿ ಕಾನೂನುಗಳು ದಾರಿ ಮಾಡಿಕೊಡುವ ಸುಧಾರಣೆಗಳನ್ನು ಕಾಂಗ್ರೆಸ್-ಎನ್​ಸಿಪಿ ಸರ್ಕಾರ 2008ರಲ್ಲೇ ಮಹಾರಾಷ್ಟ್ರದಲ್ಲಿ ತಂದಿತ್ತು ಮತ್ತು ಅದನ್ನು ಇತರ ರಾಜ್ಯಗಳೂ ಅನುಸರಿಸುವಂತೆ ಎನ್​ಸಿಪಿ ನಾಯಕ ಮತ್ತು ಅಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿನ ಕೃಷಿ ಮಂತ್ರಿ ಶರದ್ ಪವಾರ್ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

    ಇಲ್ಲಿ ವಿಶೇಷವಾಗಿ ಗಮನಿಸಬೇಕಾದ್ದು ಆಮ್ ಆದ್ಮಿ ಪಾರ್ಟಿಯನ್ನು. ಮೂರು ಕಾನೂನುಗಳಲ್ಲಿ ಕೃಷಿ ಉತ್ಪನ್ನಗಳ ಮುಕ್ತ ಮಾರಾಟ ಕುರಿತಾದ ಕಾನೂನನ್ನು ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ 2020 ನವೆಂಬರ್ 23ರಂದು ಗೆಜೆಟ್​ನಲ್ಲಿ ನೋಟಿಫೈ ಮಾಡಿ ದೆಹಲಿಯಲ್ಲಿ ಅನುಷ್ಠಾನಗೊಳಿಸಿತು ಮತ್ತು ಉಳಿದ ಎರಡನ್ನು ಪರಿಶೀಲಿಸುತ್ತಿರುವುದಾಗಿ ಹೇಳಿತು. ಆದರೆ ನಾಲ್ಕು ದಿನಗಳ ನಂತರ ನವೆಂಬರ್ 27ರಂದು ದೆಹಲಿಯ ಗಡಿಗಳಲ್ಲಿ ‘ರೈತ ಆಂದೋಲನ’ ಆರಂಭವಾಯಿತು, ಪಂಜಾಬ್​ನಲ್ಲಿ ‘ಆಂದೋಲನ’ದ ಪರವಾಗಿದ್ದ ತನ್ನ ನೀತಿಯನ್ನು ಎಎಪಿ ದೆಹಲಿಯ ಗಡಿಗೂ ತಂದಿತು.

    ಪಂಜಾಬ್​ನಲ್ಲಿ ಆರಂಭವಾಗಿದ್ದ ‘ರೈತ’ ಆಂದೋಲನವನ್ನು ಭಾರತದ ವಿರುದ್ಧ, ಖಲಿಸ್ತಾನದ ಪರವಾಗಿ ಬಳಸಿಕೊಳ್ಳುವ ಸಂಚನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳಾದ ಮೊ ಧಾಲಿವಾಲ್ ಮತ್ತು ಜಗ್​ವಿುೕತ್ ಸಿಂಗ್ ರೂಪಿಸಿದ್ದರು ಮತ್ತು ಅದರಂತೆ ಕಾರ್ಯಪ್ರವೃತ್ತರಾಗಿದ್ದರು ಕೂಡ. ಅವರ ಸಹಾಯಕ್ಕಾಗಿ ಕೇಜ್ರಿವಾಲ್ ನಿಂತಿದ್ದರು ಎನ್ನುವುದು ನಂತರ ಬಯಲಾದ ಹಲವು ವಿವರಗಳಿಂದ ತಿಳಿಯುತ್ತದೆ. ಖಲಿಸ್ತಾನಿಗಳ ಜತೆ ಅರವಿಂದ ಕೇಜ್ರಿವಾಲ್ ನಂಟಿನ ಮೊದಲ ಸ್ಪಷ್ಟ ಸೂಚನೆ ಸಿಗುವುದು 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ. ಆಗ ಎಎಪಿ ಉಮೇದುವಾರ ಜೈಕಿಶನ್ ಸಿಂಗ್ ರೋಡಿ ಪರವಾಗಿ ಬಹಿಷ್ಕೃತ ಸಿಖ್ ಉಗ್ರಗಾಮಿ ಸಂಘಟನೆ ‘ಇಂಟರ್​ನ್ಯಾಷನಲ್ ಸಿಖ್ ಯೂತ್ ಫೆಡರೇಷನ್’ ನೇತಾರ ಗುರ್​ದಯಾಲ್ ಸಿಂಗ್ ಕೆಲಸ ಮಾಡಿದ. ಅದೇ ಚುನಾವಣಾ ಪ್ರಚಾರದ ಸಮಯದಲ್ಲಿ ‘ಖಲಿಸ್ತಾನ್ ಲಿಬರೇಷನ್ ಫೋರ್ಸ್’ನ ಮಾಜಿ ಮುಖ್ಯಸ್ಥ ಮತ್ತು ಭಯೋತ್ಪಾದಕ ಕೃತ್ಯಗಳಿಗಾಗಿ ಶಿಕ್ಷೆಯನ್ನೂ ಅನುಭವಿಸಿರುವ ಗುರ್​ವೀಂದರ್ ಸಿಂಗ್ ಮನೆಯಲ್ಲಿ ಕೇಜ್ರಿವಾಲ್ ತಂಗಿದ್ದರೆಂಬ ಮಾತೂ ಕೇಳಿಬಂದಿತ್ತು. ಅದರ ಮುಂದುವರಿಕೆಯಾಗಿ, ಖಲಿಸ್ತಾನ್ ಚಳವಳಿಗೆ ಮತ್ತೆ ಕಿಡಿ ಹೊತ್ತಿಸುವ ಕೃತ್ಯದಲ್ಲಿ ಎಎಪಿ ತೊಡಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮ್ರೀಂದರ್ ಸಿಂಗ್ ಆರೋಪಿಸಿದರು. 2018ರ ಒಂದು ಸ್ಟಿಂಗ್ ಆಪರೇಷನ್​ನಲ್ಲಿ, ‘ಖಲಿಸ್ತಾನ್ ಚಳವಳಿ ಸಮರ್ಥಿಸುವುದಕ್ಕೋಸ್ಕರ ನಾವು ಎಎಪಿಗೆ ಹಣ ನೀಡಿದ್ದೇವೆ’ ಎಂದು ಖಲಿಸ್ತಾನಿ ನಾಯಕನೊಬ್ಬ ಹೇಳಿದ. ಅದೇ ವರ್ಷ ಎಎಪಿ-ಖಲಿಸ್ತಾನಿ ನಂಟಿನ ಬಗ್ಗೆ ಕೆಲವು ಎಎಪಿ ನಾಯಕರೇ ದನಿಯೆತ್ತಿದರು. ‘ಖಲಿಸ್ತಾನಿಗಳಿಂದ ಎಎಪಿ ಹಣ ಪಡೆಯುತ್ತಿದೆ’ ಎಂದು ಮಾಜಿ ಎಎಪಿ ನಾಯಕ ಬಲ್ಕಾರ್ ಸಿಂಗ್ ಸಿದ್ಧು ಹೇಳಿದರೆ, ಎಎಪಿ ನಾಯಕಿ ಗುಲ್ ಪನಾಗ್, ‘ಎಎಪಿ ಖಲಿಸ್ತಾನಿಗಳ ಜತೆ ‘ಫ್ಲರ್ಟ್’ ಮಾಡುತ್ತಿದೆ’ ಎಂದು ಹೇಳಿ ಅದರಿಂದ ದೂರ ಇರಬೇಕೆಂದು ಎಚ್ಚರಿಸಿದರು.

    ‘ರೈತ ಆಂದೋಲನ’ದಲ್ಲಿ ಡಿಸೆಂಬರ್ ಆರಂಭದಿಂದಲೇ ಖಲಿಸ್ತಾನಿಗಳು ಸಕ್ರಿಯವಾಗಿದ್ದರ ಸೂಚನೆಗಳು ಲಭ್ಯವಾಗಿವೆ ಮತ್ತು ಅವೆಲ್ಲವೂ ಎಎಪಿ ಮತ್ತು ಖಲಿಸ್ತಾನಿಗಳ ನಡುವಿನ ಜಂಟಿ ಕಾರ್ಯಾಚರಣೆಯ ಸುಳಿವು ನೀಡುತ್ತವೆ. ಕೆನಡಾದಲ್ಲಿರುವ ಖಲಿಸ್ತಾನಿ ಸಂಘಟನೆ ‘ಪೊಯೆಟಿಕ್ ಜಸ್ಟಿಸ್ ಫೌಂಡೇಶನ್’ನ ಸ್ಥಾಪಕರಲ್ಲೊಬ್ಬ ಉಗ್ರ ಖಲಿಸ್ತಾನೀ ಸಮರ್ಥಕ ಮೊನ್​ವಿುೕಂದರ್ ಸಿಂಗ್ ಧಾಲಿವಾಲ್. ಈತನ ಸಂಪರ್ಕಕ್ಕೆ ಸಿಕ್ಕಿದ್ದು ಕೆನಡಾದಲ್ಲೇ ಇರುವ ಪುನೀತ್ ಎಂಬ ಮಹಿಳೆ. ಈಕೆಯೇ ತನಗೆ ಪರಿಚಯವಿದ್ದ ಮುಂಬೈ ಹೈಕೋರ್ಟ್​ನ ವಕೀಲೆ ನಿಕಿತಾ ಜೇಕಬ್​ರನ್ನು ಧಾಲಿವಾಲ್​ಗೆ ಪರಿಚಯಿಸಿದ್ದು. ನಿಕಿತಾ ಎಎಪಿಗೆ ಸಂಬಂಧಿಸಿದವರು!

    ನಿಕಿತಾ ಜೇಕಬ್ ತನ್ನ ಪರಿಚಯದಲ್ಲಿದ್ದ ಮಹಾರಾಷ್ಟ್ರದ ದೀಡ್​ನ ಶಂತನು ಶಿವಲಾಲ್ ಮುಲೂಕ್ ಮತ್ತು ಬೆಂಗಳೂರಿನ ದಿಶಾ ರವಿ ಅವರನ್ನು ಧಾಲಿವಾಲ್​ನ ಸಂಪರ್ಕಕ್ಕೆ ತಂದರು. ಇವರೆಲ್ಲರೂ ಒಟ್ಟುಗೂಡಿ ‘ರೈತ’ ಆಂದೋಲನವನ್ನು ಭಾರತದ ವಿರುದ್ಧ ಅಪಪ್ರಚಾರಕ್ಕೆ ಬಳಸುವ ಯೋಜನೆ ರೂಪಿಸಿದರು. ಅದಕ್ಕಾಗಿ, ದೆಹಲಿ ಪೊಲೀಸ್ ನೀಡಿರುವ ವಿವರಗಳ ಪ್ರಕಾರ, ದಿಶಾ ರವಿ ತಮಗೆ ಸಹಕರಿಸಬಲ್ಲವರ ವಾಟ್ಸ್​ಆಪ್ ಗ್ರೂಪ್ ಒಂದನ್ನು 2020 ಡಿಸೆಂಬರ್ 6ರಂದು ಹುಟ್ಟುಹಾಕಿದರು. ನಂತರ ಧಾಲಿವಾಲ್ ಜನವರಿ 11ರಂದು ಆಯೋಜಿಸಿದ ಝುೂಮ್ ಮೀಟಿಂಗ್​ನಲ್ಲಿ ಆತ, ದಿಶಾ, ನಿಕಿತಾ, ಶಂತನು ಸೇರಿ ವಿವಿಧ ಕ್ಷೇತ್ರಗಳ 70 ಕಾರ್ಯಕರ್ತರು ಮತ್ತು ಪತ್ರಕರ್ತರು ಭಾಗವಹಿಸಿದ್ದರು. ಗಣರಾಜ್ಯ ದಿನವನ್ನು ‘ಗ್ಲೋಬಲ್ ಡೇ ಆಫ್ ಆಕ್ಷನ್’ ಆಗಿ ಆಚರಿಸಲು, ಅದರ ಪ್ರಕಾರ ದೆಹಲಿಯಲ್ಲಿ ವ್ಯಾಪಕ ಅಶಾಂತಿ ಉಂಟುಮಾಡಲು ಯೋಜನೆ ರೂಪಿಸಲಾಯಿತು. ಅದರ ಸವಿವರವಾದ ನೀಲಿನಕ್ಷೆಯನ್ನು ಶಂತನು, ನಿಕಿತಾ, ದಿಶಾ ಮತ್ತು ಅಂತಾರಾಷ್ಟ್ರೀಯ ಅರಾಜಕತಾ ಕಾರ್ಯಕರ್ತ ಪೀಟರ್ ಫ್ರೀಡ್​ರಿಕ್ ರಚಿಸಿದರು.

    ‘ಟೂಲ್ಕಿಟ್’ ಎಂದೀಗ ಕುಖ್ಯಾತವಾಗಿರುವ ಈ ನೀಲಿನಕ್ಷೆಯನ್ನು ದಿಶಾ ತನಗೆ ಕನಿಷ್ಠ ಮೂರು ವರ್ಷಗಳಿಂದ ನಿಕಟವಾಗಿ ಪರಿಚಯವಿದ್ದ ಗ್ರೆಟಾ ಥನ್​ಬರ್ಗ್​ಗೆ ತಲುಪಿಸಿದರು. ಹಾಗೆಯೇ ಅದು ದೆಹಲಿಯ ಗಡಿಗಳಲ್ಲಿ ಸೇರಿದ್ದ ರೈತ ಸಂಘಟನೆಗಳ ನಾಯಕರಿಗೂ ತಲುಪಿದ ಸೂಚನೆ ಇದೆ. ಅದರ ಪ್ರಕಾರ ತಮ್ಮ ಕಾರ್ಯಯೋಜನೆ ರೂಪಿಸಿದ ಅವರು ಟ್ರಾ್ಯಕ್ಟರ್ ರ್ಯಾಲಿಗೆ ಪೂರ್ವನಿರ್ಧಾರಿತವಾಗಿದ್ದ ಮಾರ್ಗವನ್ನು ಬಿಟ್ಟು ರಿಪಬ್ಲಿಕ್ ಡೇ ಪರೇಡ್ ನಡೆಯುತ್ತಿದ್ದ ರಾಜ್​ಪಥ್ ಮತ್ತು ಕೆಂಪುಕೋಟೆ ಆವರಣಕ್ಕೆ ನುಗ್ಗಿ ದಾಂಧಲೆ ಎಬ್ಬಿಸಲು ತಯಾರಾದರು. ಕೆಂಪುಕೋಟೆಯ ಮೇಲೆ ಬೇರೊಂದು ಧ್ವಜ ಹಾರಿಸುವ ಉದ್ದೇಶದಿಂದಲೇ ಜುಗ್​ರಾಜ್ ಸಿಂಗ್​ನನ್ನು ಕರೆಸ ಲಾಯಿತು. ಪಂಜಾಬ್​ನ ತರನ್ ತಾರನ್​ನ ಐದು ಗುರುದ್ವಾರಗಳಲ್ಲಿ ಸೇವಾದಾರ್ ಆಗಿ ಕೆಲಸ ಮಾಡುತ್ತಿರುವ ಈತ ಧ್ವಜಸ್ತಂಭಗಳನ್ನು ಏರುವುದರಲ್ಲಿ ನಿಷ್ಣಾತ.

    ರಾಜ್​ಪಥ್​ಗೆ ನುಗ್ಗಲು ದಂಗೆಕೋರರಿಗೆ ಅವಕಾಶ ಸಿಗಲಿಲ್ಲ. ಆದರೆ ಕೆಂಪುಕೋಟೆ ತಲುಪುವ ಅವರ ಯೋಜನೆ ಯಶಸ್ವಿಯಾಯಿತು. ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕರೆನೀಡಿದ್ದಂತೆ ‘ಲಾಠಿ ಮತ್ತು ಡಂಡಾ’ಗಳನ್ನು ಹಿಡಿದು ಬಂದಿದ್ದ ರೈತ ಹೆಸರಿನ ಗಲಭೆಕೋರರು ನಡೆಸಿದ ಹಿಂಸಾಚಾರದಲ್ಲಿ ನಾನೂರು ಪೊಲೀಸರು ಗಾಯಗೊಂಡರು. ಅತ್ತ ಕೆನಡಾದಲ್ಲಿ ಧಾಲಿವಾಲ್ ‘ಕೃಷಿ ಕಾನೂನುಗಳ ವಾಪಸಾತಿಯೊಂದಿಗೆ ಈ ಆಂದೋಲನ ನಿಲ್ಲುವುದಿಲ್ಲ. ಅದು ಸಮಾಪ್ತವಾಗುವುದು ಖಲಿಸ್ತಾನದ ಸ್ಥಾಪನೆಯೊಂದಿಗೆ’ ಎಂದು ಭಾಷಣ ಮಾಡುತ್ತಿದ್ದ!

    ಫೆಬ್ರವರಿ 6ರಂದೂ ಚಕ್ಕಾ ಜಾಮ್ ಹೆಸರಿನಲ್ಲಿ ಕೆಂಪುಕೋಟೆಯ ಪ್ರಕರಣ ಪುನರಾವರ್ತನೆ ಆಗಬಾರದೆಂದು ಕೇಂದ್ರ ಸರ್ಕಾರ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಆದರೆ ಕೇಂದ್ರ ಸರ್ಕಾರದ ಕ್ರಮಗಳನ್ನು ಹಾಳುಗೆಡಹಲು ದೆಹಲಿಯ ಎಎಪಿ ಸರ್ಕಾರ ಪ್ರಯತ್ನಿಸಿತು. ದೆಹಲಿ ಪೊಲೀಸರಿಗೆ ಅನಾನುಕೂಲ ಎಸಗುವ ಉದ್ದೇಶದಿಂದಲೇ, ಅವರಿಗೆ ನೀಡಿದ್ದ 576 ಬಸ್​ಗಳನ್ನು ಹಿಂತೆಗೆದುಕೊಳ್ಳುವಂತೆ ದೆಹಲಿ ಟ್ರಾನ್ಸ್​ಪೋರ್ಟ್ ಕಾರ್ಪೆರೇಷನ್​ಗೆ ಆದೇಶ ನೀಡಿತು. ಅದು ಬಸ್ ಚಾಲಕರಿಗೆ ನೀಡಿದ ಸೂಚನೆಯೆಂದರೆ, ಪೊಲೀಸರನ್ನು ಹೊತ್ತ ಬಸ್​ಗಳು ಈಗ ಎಲ್ಲೆಲ್ಲಿವೆಯೋ ಅಲ್ಲೇ ಅವರನ್ನು ಇಳಿಸಿ ಬಸ್​ಗಳನ್ನು ಡಿಪೋಗೆ ತರಬೇಕು ಎಂದು!

    (ಲೇಖಕರು: ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts