More

    ಮತದಾರರಿಂದಲೇ ಅಭ್ಯರ್ಥಿಯ ಚುನಾವಣಾ ಖರ್ಚಿಗೆ ಹಣ; ಎಲ್ಲರಿಗೂ ಮಾದರಿಯಾದ ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಹಾಗೂ ಬೀಚನಗಳ್ಳಿ ಗ್ರಾಮಸ್ಥರು

    ಮೈಸೂರು: ನಾನಾ ರೀತಿಯ ಆಮಿಷಗಳಿಗೆ ಒಳಗಾಗಿ ಮತದಾನ ಮಾಡುವ ಮತದಾರರ ನಡುವೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಹಾಗೂ ಬೀಚನಗಳ್ಳಿ ಗ್ರಾಮಸ್ಥರು ಮಾದರಿಯಾಗಿದ್ದಾರೆ.

    ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ರಾಜಕೀಯ ನಾಯಕರ ಅಬ್ಬರದ ಪ್ರಚಾರ, ಮತ ಬೇಟೆಗೆ ಕಾರ್ಯತಂತ್ರಗಳು ಬಿರುಸಿನಿಂದ ನಡೆದಿವೆ. ಕೆಲವರಂತೂ ಹಣ, ಹೆಂಡ ಸೇರಿದಂತೆ ನಾನಾ ರೀತಿಯ ಆಮಿಷಗಳನ್ನು ಒಡ್ಡುವ ಮೂಲಕ ಮತದಾರರನ್ನು ಓಲೈಸುವ ಪ್ರಯತ್ನಗಳನ್ನು ಮಾಡುತ್ತಿರುವುದು ಇದೆ.

    ಆದರೆ, ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಹಾಗೂ ಬೀಚನಗಳ್ಳಿ ಗ್ರಾಮಸ್ಥರು ಈ ವಿಚಾರದಲ್ಲಿ ಭಿನ್ನ ಎನಿಸಿದ್ದಾರೆ. ಎರಡು ಗ್ರಾಮಗಳ ಗ್ರಾಮಸ್ಥರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರ ಚುನಾವಣಾ ಖರ್ಚಿಗಾಗಿ 25 ಸಾವಿರ ರೂ. ಹಣ ನೀಡುವ ಮೂಲಕ ಮಾದರಿಯಾಗಿದ್ದಾರೆ. ಬುಧವಾರ ಬಾಲರಾಜ್ ಅವರ ಪುತ್ರ ಯೋಗಾಂಶು ಬಾಲರಾಜ್ ಈ ಎರಡು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.

    ಬಿದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಿದರಹಳ್ಳಿ ಹಾಗೂ ಬೀಚನಗಳ್ಳಿ ಗ್ರಾಮದಲ್ಲಿ ಎಲ್ಲಡೆ ಸಂಚರಿಸಿ ಪ್ರಚಾರ ನಡೆಸಿದರು. ಈ ಬಾರಿ ಎಸ್.ಬಾಲರಾಜ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಬಿದರಹಳ್ಳಿ ಹಾಗೂ ಬೀಚನಗಳ್ಳಿ ಗ್ರಾಮದ ಜನರು ಚುನಾವಣಾ ಖರ್ಚಿಗಾಗಿ 25 ಸಾವಿರ ರೂ.ಗಳನ್ನು ಯೋಗಾಂಶು ಬಾಲರಾಜ್ ಅವರಿಗೆ ನೀಡಿದರು. ಜೆಡಿಎಸ್ ಮುಖಂಡರಾದ ಜಯಪ್ರಕಾಶ್ ಚಿಕ್ಕಣ್ಣ, ಎಂ.ಕೆ.ಗಣೇಶ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಸೀತಾಪತಿ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts