More

    ಊರಲ್ಲಿ ಸ್ಮಶಾನ ಇಲ್ಲದ್ದರಿಂದ ಗ್ರಾಮ ಪಂಚಾಯತ್ ಆವರಣದಲ್ಲೇ ಶವಸಂಸ್ಕಾರಕ್ಕೆ ಸಜ್ಜಾದ ಗ್ರಾಮಸ್ಥರು!

    ಶಿವಮೊಗ್ಗ: ಊರಿನಲ್ಲಿ ಸ್ಮಶಾನ ಇಲ್ಲದ್ದರಿಂದ ಗ್ರಾಮ ಪಂಚಾಯತ್ ಆವರಣದಲ್ಲೇ ಶವ ಸಂಸ್ಕಾರ ನಡೆಸಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

    ಶಿವಮೊಗ್ಗ ತಾಲೂಕಿನ‌ ಸಂತೆಕಡೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಂದು ಸಂತೆಕಡೂರು ಎ.ಕೆ. ಕಾಲನಿಯಲ್ಲಿ ಮೃತಪಟ್ಟಿರುವ ವೃದ್ಧೆ ರಂಗಮ್ಮ ಎಂಬವರ ಶವಸಂಸ್ಕಾರಕ್ಕೆ ಗ್ರಾಮ ಪಂಚಾಯತ್ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ.

    ಈ ಹಿಂದೆ ಸಂತೆಕಡೂರು ಗ್ರಾಮದ ಸ್ಮಶಾನಕ್ಕೆಂದು ಮೂರು ಎಕರೆ ಜಾಗ ಮಂಜೂರಾಗಿತ್ತು. ಆದರೆ ಆ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲಿನ ಉಳಿದ ಜಾಗವನ್ನು ಕಳೆದ‌ ವಾರ ಸರ್ವೇ ಮಾಡಲು ಹೋದ ಅಧಿಕಾರಿಗಳನ್ನು ಅಲ್ಲಿ ಮನೆಯವರು ಪ್ರತಿಭಟನೆ ನಡೆಸಿ ವಾಪಸ್ ಕಳುಹಿಸಿದ್ದರು. ಹೀಗಾಗಿ ಈ ಸ್ಮಶಾನದ ಜಾಗ ವಿವಾದಾತ್ಮಕವಾಗಿ ಉಳಿದುಕೊಂಡಿದೆ.

    ಸರ್ಕಾರದಿಂದ ಮಂಜೂರಾದ ಈ ಸ್ಮಶಾನದ ಜಾಗಕ್ಕೆ ಇಂದು ರಂಗಮ್ಮ ಅವರ ಶವವನ್ನು ಕುಟುಂಬಸ್ಥರು ಶವಸಂಸ್ಕಾರಕ್ಕೆಂದು ಕೊಂಡೊಯ್ದಿದ್ದರು. ಆದರೆ ಆ ಜಾಗದಲ್ಲಿ ಶವಸಂಸ್ಕಾರಕ್ಕೆ ಅಲ್ಲಿನ ಕೆಲವರು ಅವಕಾಶ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗ್ರಾಮಪಂಚಾಯತ್ ಆವರಣದ ಒಳಗೆ ಗುಂಡಿ ತೆಗೆದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಷಯ ಕೇಳಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

    ಊರಲ್ಲಿ ಸ್ಮಶಾನ ಇಲ್ಲದ್ದರಿಂದ ಗ್ರಾಮ ಪಂಚಾಯತ್ ಆವರಣದಲ್ಲೇ ಶವಸಂಸ್ಕಾರಕ್ಕೆ ಸಜ್ಜಾದ ಗ್ರಾಮಸ್ಥರು!

    ಆದಾಯ ತೆರಿಗೆ ಪಾವತಿಸುತ್ತಿದ್ದರೆ ನಿಮಗೆ ಈ ಯೋಜನೆಯ ಪ್ರಯೋಜನ ಸಿಗಲ್ಲ; ಹೊಸ ಆದೇಶ ಎಂದಿನಿಂದ ಜಾರಿ?

    Fact Check: ರಾಷ್ಟ್ರಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ?; ಇಲ್ಲಿದೆ ಸತ್ಯಾಂಶ..

    ಸರ್ಕಾರಿ ಕಾರ್ಯಕ್ರಮದಿಂದ ಎದ್ದು ಹೊರಟ ಜನರ ಸಮಯಪ್ರಜ್ಞೆಗೆ ಸಿಎಂ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts