More

    ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

    ಕೊಕಟನೂರ: ಗ್ರಾಮಸ್ಥರ ವಿವಿಧ ಬೇಡಿಕೆ ಹಾಗೂ ಸರ್ಕಾರದಿಂದ ಕೃಷ್ಣಾ ನದಿ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ದೊರೆಯದಿರುವುದನ್ನು ಖಂಡಿಸಿ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದಾರೆ.

    ತಾಲೂಕಿನ ಶಂಕರಹಟ್ಟಿ ಗ್ರಾಪಂಗೆ ಒಳಪಡುವ ಖವಟಕೊಪ್ಪ ಗ್ರಾಮವನ್ನು ಪ್ರತ್ಯೇಕ ಗ್ರಾಪಂ ಮಾಡಬೇಕು. 2019ರಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರಧನ ನೀಡಬೇಕು. ಹಿಪ್ಪರಗಿ ಅಣೆಕಟ್ಟು ಯೋಜನೆಯ ಹಿನ್ನೀರಿನಿಂದ ಹಾನಿಗೀಡಾದ 180 ಮನೆಗಳ ಪರಿಹಾರಧನ ಹಾಗೂ ಪುನರ್ವಸತಿ, ಸಮರ್ಪಕ ಬಸ್ ವ್ಯವಸ್ಥೆ, ಸರ್ಕಾರಿ ಬ್ಯಾಂಕ್, ಮೂಲ ಸೌಕರ್ಯಕ್ಕಾಗಿ ಚುನಾವಣೆ ಬಹಿಷ್ಕರಿಸಿದ್ದಾರೆ.

    ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ತಾಲೂಕು ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಗ್ರಾಮಸ್ಥರ ಬೇಡಿಕೆ ಈಡೇರಿಸುವವರೆಗೆ ಮುಂಬರುವ ತಾಪಂ, ಜಿಪಂ ಚುನಾವಣೆ ಕೂಡ ಬಹಿಷ್ಕರಿಸಲಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಬುಧವಾರವೂ ಗ್ರಾಪಂಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.

    ತಹಸೀಲ್ದಾರ್ ದುಂಡಪ್ಪ ಕೋಮಾರ, ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರಾದರೂ, ಅದಕ್ಕೆ ಒಪ್ಪದ ಗ್ರಾಮಸ್ಥರು ಬೇಡಿಕೆ ಈಡೇರುವವರೆಗೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ತಾಲೂಕಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಆನಂದ ಕುಲಕರ್ಣಿ, ಅಭಯ ಚಿಪ್ಪಾಡಿ, ಜಯಶ್ರೀ ಶಿಂಗೆ, ಪ್ರದೀಪ ನಂದಗಾಂವ, ಚಂದ್ರಕಾಂತ ಕಾಮಗೌಡರ, ಶ್ರೀಶೈಲ ಕಾಂಬಳೆ, ಶಿವಾನಂದ ಹೋಸಪೇಟಿ, ಸಂತೋಷ ಸನದಿ, ಬಾಹುಬಲಿ ನಾಶಿ, ಪ್ರಲ್ಹಾದ ಬಿಸ್ವಾಗರ, ಸವಿತಾ ಶಿಂಗೆ, ರೇಣುಕಾ ಕಾಂಬಳೆ, ಅಮ್ಮವ್ವ ಕಾಂಬಳೆ, ಲಗಮವ್ವ ಕಾಂಬಳೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts