More

    ನಿವೇಶನ ಹಂಚಿಕೆ ವಿಳಂಬಕ್ಕೆ ಗ್ರಾಮಸ್ಥರ ಆಕ್ರೋಶ

    ಎನ್.ಆರ್.ಪುರ: ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಹಂಚಿಕೆಗಾಗಿ ಜಾಗ ಗುರುತಿಸಿ ಐದಾರು ವರ್ಷ ಕಳೆದರೂ ಇದೂವರೆಗೂ ನಿವೇಶನ ಹಂಚಿಕೆಗೆ ಕ್ರಮವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
    ಕಡಹಿನಬೈಲು ಗ್ರಾಪಂನಲ್ಲಿ ಅಧ್ಯಕ್ಷೆ ಶೈಲಾ ಮಹೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಗ್ರಾಮಸ್ಥ ಸತೀಶ್ ಮಾತನಾಡಿ, ಈಗಾಗಲೇ ಆಶ್ರಯ ನಿವೇಶನ ಹಂಚಿಕೆಗೆ ಸರ್ವೇ ನಡೆಸಿ ಜಾಗವನ್ನು ಗುರುತಿಸಲಾಗಿದೆ. ಗ್ರಾಪಂ ಗ್ರಾಮ ಸಭೆಯಲ್ಲೂ ನಿವೇಶನ ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಕೇವಲ ಚರ್ಚೆಯಾಗಿ ಉಳಿದಿದೆ ಬಿಟ್ಟರೆ ನಿವೇಶನ ಹಂಚಿಕೆಗೆ ಕ್ರಮವಾಗಿಲ್ಲ ಎಂದರು.
    ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಕಾರ್ಯ ಬಾಕಿ ಇದೆ. ನಿವೇಶನ ಹಂಚಿಕೆಗೆ ಶೀಘ್ರ ಕ್ರಮವಾಗಲಿದೆ ಎಂದರು.
    ಗ್ರಾಮಸ್ಥ ಸುರೇಶ್ ಮಾತನಾಡಿ, ಶೆಟ್ಟಿಕೊಪ್ಪದ ಶ್ರೀವೆಂಕಟೇಶ್ವರ ಕೆರೆ ಬಳಕೆದಾರರ ಸಂಘದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಸಂಬಂಧಪಟ್ಟವರಿಗೆ ದೂರು ನೀಡಿದರೂ ಇದೂವರೆಗೂ ಯಾವುದೇ ಕ್ರಮವಾಗಿಲ್ಲ. ಅದಕ್ಕಾಗಿ ಬಳಕೆದಾರರ ಸಂಘದಿಂದ ಕೆರೆಯನ್ನು ಗ್ರಾಪಂ ಸುಪರ್ದಿಗೆ ಹಸ್ತಾಂತರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು
    ಪಿಡಿಓ ವಿಂದ್ಯಾ ಮಾತನಾಡಿ, ಈ ಕೆರೆ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ನಂತರ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗುವುದು ಎಂದರು.
    ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಒಂದು ಸುತ್ತಿನ ಬೀದಿ ದೀಪ ಅಳವಡಿಸಲಾಗಿದೆ. ಆದರೂ ಕೆಲವೆಡೆ ಸರಿಯಾಗಿ ಬೀದಿ ದೀಪ ನಿರ್ವಹಣೆ ಆಗುತ್ತಿಲ್ಲ ಎಂಬ ದೂರು ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ರವೀಂದ್ರ, ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಮಾಜಿ ಸದಸ್ಯ ಎಂ.ಮಹೇಶ್, ಗ್ರಾಮಸ್ಥರಾದ ಬೆಸಿಲ್, ಉದಯ್, ಕಿರಣ್, ಪೌಲೋಸ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

    ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಹಂಚಿಕೆಗಾಗಿ ಜಾಗ ಗುರುತಿಸಿ ಐದಾರು ವರ್ಷ ಕಳೆದರೂ ಇದೂವರೆಗೂ ನಿವೇಶನ ಹಂಚಿಕೆಗೆ ಕ್ರಮವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
    ಕಡಹಿನಬೈಲು ಗ್ರಾಪಂನಲ್ಲಿ ಅಧ್ಯಕ್ಷೆ ಶೈಲಾ ಮಹೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಗ್ರಾಮಸ್ಥ ಸತೀಶ್ ಮಾತನಾಡಿ, ಈಗಾಗಲೇ ಆಶ್ರಯ ನಿವೇಶನ ಹಂಚಿಕೆಗೆ ಸರ್ವೇ ನಡೆಸಿ ಜಾಗವನ್ನು ಗುರುತಿಸಲಾಗಿದೆ. ಗ್ರಾಪಂ ಗ್ರಾಮ ಸಭೆಯಲ್ಲೂ ನಿವೇಶನ ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಕೇವಲ ಚರ್ಚೆಯಾಗಿ ಉಳಿದಿದೆ ಬಿಟ್ಟರೆ ನಿವೇಶನ ಹಂಚಿಕೆಗೆ ಕ್ರಮವಾಗಿಲ್ಲ ಎಂದರು.
    ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಕಾರ್ಯ ಬಾಕಿ ಇದೆ. ನಿವೇಶನ ಹಂಚಿಕೆಗೆ ಶೀಘ್ರ ಕ್ರಮವಾಗಲಿದೆ ಎಂದರು.
    ಗ್ರಾಮಸ್ಥ ಸುರೇಶ್ ಮಾತನಾಡಿ, ಶೆಟ್ಟಿಕೊಪ್ಪದ ಶ್ರೀವೆಂಕಟೇಶ್ವರ ಕೆರೆ ಬಳಕೆದಾರರ ಸಂಘದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಸಂಬಂಧಪಟ್ಟವರಿಗೆ ದೂರು ನೀಡಿದರೂ ಇದೂವರೆಗೂ ಯಾವುದೇ ಕ್ರಮವಾಗಿಲ್ಲ. ಅದಕ್ಕಾಗಿ ಬಳಕೆದಾರರ ಸಂಘದಿಂದ ಕೆರೆಯನ್ನು ಗ್ರಾಪಂ ಸುಪರ್ದಿಗೆ ಹಸ್ತಾಂತರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು
    ಪಿಡಿಓ ವಿಂದ್ಯಾ ಮಾತನಾಡಿ, ಈ ಕೆರೆ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ನಂತರ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗುವುದು ಎಂದರು.
    ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಒಂದು ಸುತ್ತಿನ ಬೀದಿ ದೀಪ ಅಳವಡಿಸಲಾಗಿದೆ. ಆದರೂ ಕೆಲವೆಡೆ ಸರಿಯಾಗಿ ಬೀದಿ ದೀಪ ನಿರ್ವಹಣೆ ಆಗುತ್ತಿಲ್ಲ ಎಂಬ ದೂರು ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ರವೀಂದ್ರ, ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಮಾಜಿ ಸದಸ್ಯ ಎಂ.ಮಹೇಶ್, ಗ್ರಾಮಸ್ಥರಾದ ಬೆಸಿಲ್, ಉದಯ್, ಕಿರಣ್, ಪೌಲೋಸ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts