More

    ಗ್ರಾಮ ಸ್ವರಾಜ್ಯದಿಂದ ಕರ್ನಾಟಕದ ಕಲ್ಯಾಣ: ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಹೇಳಿಕೆ

    ಭರಮಸಾಗರ: ಸಂಯುಕ್ತ ಜನತಾದಳದ ಪುನರ್ ಸಂಘಟನೆ ಹಾಗೂ ಕರ್ನಾಟಕದ ಕಲ್ಯಾಣಕ್ಕೆ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಅಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದರು.

    ಗಾಂಧಿಜಯಂತಿಯಂದು ಬೆಂಗಳೂರಿನಿಂದ ಆರಂಭವಾದ ಪಾದಯಾತ್ರೆಗೆ ಮಂಗಳವಾರ ಭರಮಸಾಗರದ ಪ್ರಮುಖರು ಸ್ವಾಗತಿಸಿ ಬೀಳ್ಕೊಟ್ಟ ವೇಳೆ ಮಾತನಾಡಿದರು.

    ಈಗ ಬೆಂಗಳೂರಿಂದ ಕಾರಿಗನೂರಿಗೆ ಪಾದಯಾತ್ರೆ ಶುರುವಾಗಿದೆ.ಇದಾದ ಬಳಿಕ ಕಾರಿಗನೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸಮಾಧಿ ಸ್ಥಳದಿಂದ ಕೂಡಲ ಸಂಗಮಕ್ಕೆ, ಬೀದರ್‌ನಿಂದ- ಚಾಮರಾಜ ನಗರಕ್ಕೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

    ಪಾದಯಾತ್ರೆ ವೇಳೆ ಆಯಾ ಗ್ರಾಮಗಳಲ್ಲಿ ಸಹಜ ಕೃಷಿ, ದೇಶೀ ಹೈನುಗಾರಿಕೆ ಹಾಗೂ ಸ್ವಾವಲಂಬನೆ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಕೋವಿಡ್ ಮಹಾಮಾರಿಗೆ ಸಿಲುಕಿ ಜನರ ಬದುಕು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಪರಿಹಾರ ಸಿಗದಂತಾಗಿದೆ. ಜನರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

    ಅನೇಕ ಜ್ವಲಂತ ಸಮಸ್ಯೆಗಳು ರಾಜ್ಯದಲ್ಲಿ ತಾಂಡವವಾಡುತ್ತಿವೆ. ಇವುಗಳಿಂದ ರಾಜ್ಯವನ್ನು ಮುಕ್ತಗೊಳಿಸಲು ಗ್ರಾಮ ಸ್ವರಾಜ್ ಅಭಿಯಾನ ಕೂಡ ಆರಂಭಿಸಲಾಗಿದೆ. ಸದೃಢ ಗ್ರಾಮಗಳು ನಿರ್ಮಾಣ ಮೂಲಕ ಕರ್ನಾಟಕದ ಕಲ್ಯಾಣ ಸಾಧ್ಯ ಎಂದು ನಂಬಲಾಗಿದೆ ಎಂದರು.

    ದೊಡ್ಡ ಬಳ್ಳಾಪುರದ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯ ಎನ್. ಕಲ್ಲೇಶ್, ಸ್ಥಳೀಯ ಮುಖಂಡರಾದ ಶ್ರೀಧರ್, ಡಿವಿಎಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಎಸ್.ಪ್ರದೀಪ್, ವೀರಣ್ಣ, ವೀರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts