More

    ವಿಕಸಿತ ಭಾರತ ಸಂಕಲ್ಪಯಾತ್ರೆ ಅಭಿಯಾನಕ್ಕೆ ಚಾಲನೆ

    ದಾಂಡೇಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನಕ್ಕೆ ನಗರಸಭೆಯ ಆವರಣದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.

    ಅಭಿಯಾನಕ್ಕೆ ಭಾರತ್ ಅಡುಗೆ ಅನಿಲ ವಿತರಕ ಮಧುಮತಿ ಅಂಕೋಲೆಕರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಬುದ್ಧಿವಂತಗೌಡ ಪಾಟೀಲ, ವ್ಯವಸ್ಥಾಪಕ ಪರಶುರಾಮ ಶಿಂಧೆ, ಬಿಜೆಪಿ ತಾಲೂಕಾಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ್, ಗುತ್ತಿಗೆದಾರರಾದ ಸುಧಾಕರ ರೆಡ್ಡಿ, ಡಾ. ಭಾವನಾ ಅಂಕೋಲೆಕರ್, ಇತರರು ಪಾಲ್ಗೊಂಡಿದ್ದರು. ಎಸ್​ಬಿಐ ಬ್ಯಾಂಕ್ ವ್ಯವಸ್ಥಾಪಕ ಕೃಷ್ಣರಾಜ್ ಎಂ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧಗ್ರಾಯೋ ಮೇಲ್ವಿಚಾರಕ ಜಯಕರ ಕಾರ್ಯಕ್ರಮ ನಿರ್ವಹಿಸಿದರು.

    ಕೇಂದ್ರ ಸರ್ಕಾರದ ಮುದ್ರಾ, ಜನಧನ್, ಪಿ.ಎಂ ವಿಶ್ವಕರ್ಮ, ಉಜ್ವಲ, ಕೃಷಿ ಸನ್ಮಾನ್ ಹಾಗೂ ಅನ್ನ ಭಾಗ್ಯ ಯೋಜನೆ ಸೇರಿ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್​ಇಡಿ ಪರದೆ ಮೂಲಕ ನೀಡಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿಯ ಕಿರುಪುಸ್ತಕ ಹಾಗೂ 2024 ರ ಕ್ಯಾಲೆಂಡರ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts